Arshdeep Singh: ಏಷ್ಯಾಕಪ್‌ನಲ್ಲಿ 1 ವಿಕೆಟ್ ಪಡೆಯುತ್ತಿದ್ದಂತೆ ವೇಗದ ಬೌಲರ್ ದೊಡ್ಡ ಸಾಧನೆ
ಟೀಮ್ ಇಂಡಿಯಾದ ಆಟಗಾರರು ಸದ್ಯ ಬಿಡುವಿನಲ್ಲಿದ್ದಾರೆ. ಇನ್ನು ಕೆಲವು ಆಟಗಾರರು ದುಲೀಪ್ ಟ್ರೋಫಿಯಲ್ಲಿ ಆಡುವುದನ್ನು ಕಾಣಬಹುದಾಗಿದೆ. ಇನ್ನು ಟೀಮ್ ಇಂಡಿಯಾ ಸೆಪ್ಟಂಬರ್‌ನಲ್ಲಿ ಏಷ್ಯಾ ಕಪ್ ಟಿ20 ಟೂರ್ನಿಯನ್ನು ಆಡಲಿದೆ. ಈ ವೇಳೆ ಅಭಿಮಾನಿಗಳ ಕಣ್ಣುಗಳು ಟೀಮ್ ಇಂಡಿಯಾದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರ ಮೇಲೆ ನೆಟ್ಟಿರಲಿವೆ. ಇವರು ಏಷ್ಯಾ ಕಪ್‌ನಲ್ಲಿ ಒಂದು ವಿಕೆಟ್ ಪಡೆಯುತ್ತಿದ್ದಂತೆ ದೊಡ್ಡ ಸಾಧನೆ ಮಾಡಲಿದ್ದಾರೆ. ಆ ಸಾಧನೆ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಟೀಮ್ ಇಂಡಿಯಾ ಇತ್ತೀಚಿಗೆ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಿತ್ತು. ಈ ವೇಳೆ ತಂಡದಲ್ಲಿ ಆಡುವ ಅವಕಾಶ ಅರ್ಷದೀಪ್ ಸಿಂಗ್ ಅವರಿಗೆ ಸಿಕ್ಕಿರಲಿಲ್ಲ. ಈಗ ಎಲ್ಲರ ಕಣ್ಣುಗಳು ಅರ್ಷದೀಪ್ ಮೇಲೆ ನೆಟ್ಟಿವೆ. ಏಕೆಂದರೆ ಅರ್ಷದೀಪ್ ಟಿ20 ಕ್ರಿಕೆಟ್‌ನಲ್ಲಿ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಇವರು ಹಲವು ಮಹತ್ವದ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಅರ್ಷದೀಪ್ ಒಂದು ವಿಕೆಟ್ ಪಡೆಯುತ್ತಲೇ ಭಾರತದ ಪರ ಅಮೋಘ ಸಾಧನೆ ಮಾಡಲಿದ್ದಾರೆ.

ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳನ್ನು ಪೂರ್ಣಗೊಳಿಸಲು ಅವರಿಗೆ ಕೇವಲ ಒಂದು ವಿಕೆಟ್ ಅಗತ್ಯವಿದೆ. ಏಷ್ಯಾ ಕಪ್‌ನಲ್ಲಿ ಅರ್ಷದೀಪ್ ಈ ಸಾಧನೆಯನ್ನು ಮಾಡಿದರೆ ಭಾರತದ ಪರ ಚುಟುಕು ಫಾರ್ಮೆಟ್‌ನಲ್ಲಿ ವಿಕೆಟ್‌ಗಳ ಶತಕ ಬಾರಿಸಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇವರು 2022ರಲ್ಲಿ ಭಾರತದ ಪದ ಮೊದಲ ಟಿ20 ಕ್ರಿಕೆಟ್ ಪಂದ್ಯವನ್ನು ಆಡಿದ್ದರು. ಅಂದಿನಿಂದ ಇವರು ಟೀಮ್ ಇಂಡಿಯಾದ ಪರ ಹಲವು ಬಾರಿ ಬಿಗುವಿನ ದಾಳಿ ನಡೆಸಿ ಅಬ್ಬರಿಸಿದ್ದಾರೆ. ಈಗಾಗಲೇ ಅರ್ಷದೀಪ್ ಸಿಂಗ್ ಭಾರತದ ಪರ 63 ಟಿ20 ಕ್ರಿಕೆಟ್ ಪಂದ್ಯ ಆಡಿದ್ದು 99 ವಿಕೆಟ್ ಕಬಳಿಸಿದ್ದಾರೆ.
ಅರ್ಷದೀಪ್ ಸಾಧನೆ
ಅರ್ಷದೀಪ್ ಸಿಂಗ್ ಟಿ20 ಕ್ರಿಕೆಟ್‌ನಲ್ಲಿ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಲು ಹೆಸರುವಾಸಿ. ಇವರು ಸುಲಭವಾಗಿ ಯಾರ್ಕರ್‌ಗಳನ್ನು ಹಾಗೂ ತಮ್ಮ ಬೌಲಿಂಗ್‌ನಲ್ಲಿ ವೇರಿಯೇಷನ್ ಹೊಂದಿದ್ದಾರೆ. ವೆಸ್ಟ್ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದಿದ್ದ 2024ರ ಟಿ20 ವಿಶ್ವಕಪ್‌ನಲ್ಲಿ ಅರ್ಷದೀಪ್ ಸಿಂಗ್ ಸೊಗಸಾದ ಬೌಲಿಂಗ್ ದಾಳಿಯನ್ನು ಸಂಘಟಿಸಿ 17 ವಿಕೆಟ್ ಕಬಳಿಸಿದ್ದರು. ಅಲ್ಲದೆ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ತಮ್ಮದೆ ಕೊಡುಗೆ ನೀಡಿದ್ದಾರೆ.
ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧಕರು
ಅರ್ಷದೀಪ್ ಸಿಂಗ್, 63 ಪಂದ್ಯ, 99 ವಿಕೆಟ್
ಯುಜುವೇಂದ್ರ ಚಹಾಲ್, 80 ಪಂದ್ಯ, 96 ವಿಕೆಟ್
ಹಾರ್ದಿಕ್ ಪಾಂಡ್ಯಾ, 114 ಪಂದ್ಯ, 94 ವಿಕೆಟ್
ಭುವನೇಶ್ವರ್ ಕುಮಾರ್, 87 ಪಂದ್ಯ, 90 ವಿಕೆಟ್
ಜಸ್ಪ್ರೀತ್ ಬುಮ್ರಾ, 70 ಪಂದ್ಯ, 89 ವಿಕೆಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications