Arshdeep Singh: 1 ವಿಕೆಟ್ ಪಡೆಯುತ್ತಲೇ ಇತಿಹಾಸ ನಿರ್ಮಿಸಲಿರುವ ಅರ್ಷದೀಪ್
ಯುಎಇನಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಹಾಂಗ್ ಕಾಂಗ್ ವಿರುದ್ಧ ಅಫ್ಘಾನಿಸ್ತಾನ ಭರ್ಜರಿ ಜಯ ದಾಖಲಿಸಿದೆ. ಬುಧವಾರ ಎರಡನೇ ಪಂದ್ಯ ನಡೆಯಲಿದೆ. "ಎ" ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ಹಾಗೂ ಯುಎಇ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಎಲ್ಲರ ಕಣ್ಣುಗಳು ಭಾರತದ ಸ್ಟಾರ್ ಆಟಗಾರರ ಮೇಲೆ ನೆಟ್ಟಿರಲಿವೆ. ಮೊದಲ ಪಂದ್ಯದಲ್ಲಿ ದೊಡ್ಡ ದಾಖಲೆ ಬರೆಯುವ ಕನಸಿನಲ್ಲಿ ಅರ್ಷದೀಪ್ ಸಿಂಗ್ ನಿಂತಿದ್ದಾರೆ. ಇವರು ಯುಎಇ ವಿರುದ್ಧ 1 ವಿಕೆಟ್ ಪಡೆಯುವಲ್ಲಿ ಸಫಲರಾದರೆ, ಟೀಮ್ ಇಂಡಿಯಾ ಪರ ಯಾವೊಬ್ಬ ಬೌಲರ್ ಮಾಡದ ಸಾಧನೆಯನ್ನು ಮಾಡಲಿದ್ದಾರೆ.
ಟೀಮ್ ಇಂಡಿಯಾದ ಭರವಸೆಯ ಬೌಲರ್‌ಗಳ ಪಟ್ಟಿಯಲ್ಲಿ ಅರ್ಷದೀಪ್‌ಗೂ ಅಗ್ರ ಸ್ಥಾನ. ಇವರು 2022ರಲ್ಲಿ ಟಿ20 ಫಾರ್ಮೆಟ್‌ಗೆ ಪದಾರ್ಪಣೆ ಮಾಡಿದರು. ಅಲ್ಲಿಂದ ಇವರು ತಮ್ಮ ಕ್ಷಮತೆಯನ್ನು ಸಾಬೀತು ಪಡಿಸುತ್ತಲೇ ಬಂದಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು ಅಬ್ಬರಿಸುತ್ತಿರುವ ಅರ್ಷದೀಪ್, ದಾಖಲೆಗಳನ್ನು ಬರೆಯುತ್ತಿದ್ದಾರೆ. ಏಷ್ಯಾಕಪ್ ಟಿ20 ಪಂದ್ಯದಲ್ಲೂ ಅರ್ಷದೀಪ್ ಒಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ ದೊಡ್ಡ ದಾಖಲೆ ನಿರ್ಮಿಸಲಿದ್ದಾರೆ. ಆ ದಾಖಲೆಯ ಬಗ್ಗೆ ವರದಿ ಇಲ್ಲಿದೆ.

ಭಾರತದ ಪರ ಟಿ20 ಫಾರ್ಮೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅರ್ಷದೀಪ್ ಸಿಂಗ್‌ಗೆ ಅಗ್ರ ಸ್ಥಾನ. ಇವರು ಈಗಾಗಲೇ 63 ಟಿ20 ಪಂದ್ಯಗಳನ್ನು ಆಡಿದ್ದು, 8.29ರ ಎಕಾನಮಿಯಲ್ಲಿ 99 ವಿಕೆಟ್ ಪಡೆದಿದ್ದಾರೆ. ಯುಎಇ ವಿರುದ್ಧ ಒಂದು ವಿಕೆಟ್ ಪಡೆಯುವಲ್ಲಿ ಸಫಲರಾದರೆ, 100 ವಿಕೆಟ್ ಪಡೆದ ಸಾಧನೆಯನ್ನು ಮಾಡಲಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇವರಿಗಿಂತಲೂ ಮೊದಲು ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಲೆಗ್ ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಅವರ ಹೆಸರಿನಲ್ಲಿ ಇತ್ತು. ಇವರು 80 ಪಂದ್ಯಗಳಲ್ಲಿ 96 ವಿಕೆಟ್ ಕಬಳಿಸಿದ್ದರು.
ಅರ್ಷದೀಪ್ ಕಮಾಲ್
ಟೀಮ್ ಇಂಡಿಯಾ ಟಿ20 ತಂಡದ ಅವಿಭಾಜ್ಯ ಅಂಗವಾಗಿರುವ ಅರ್ಷದೀಪ್ ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಲು ಹೆಸರು ವಾಸಿ. ಇವರು ತಮ್ಮ ವಿಭಿನ್ನ ಎಸೆತಗಳ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಯುಎಇ ವಿರುದ್ಧದ ಮೊದಲ ಪಂದ್ಯದಲ್ಲಿ ಒಂದು ವಿಕೆಟ್ ಪಡೆದಿದ್ದೇ ಆದಲ್ಲಿ ಅರ್ಷದೀಪ್, ವಿಶ್ವ ಕ್ರಿಕೆಟ್‌ನಲ್ಲಿ ನೂರು ವಿಕೆಟ್‌ಗಳನ್ನು ವೇಗವಾಗಿ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆಯುತ್ತಾರೆ.
ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್ ಸಾಧಕರು
ಅರ್ಷದೀಪ್ ಸಿಂಗ್, 63 ಪಂದ್ಯ, 99 ವಿಕೆಟ್
ಯುಜುವೇಂದ್ರ ಚಹಾಲ್, 80 ಪಂದ್ಯ, 96 ವಿಕೆಟ್
ಹಾರ್ದಿಕ್ ಪಾಂಡ್ಯ, 114 ಪಂದ್ಯ, 94 ವಿಕೆಟ್
ಭುವನೇಶ್ವರ್ ಕುಮಾರ್, 87 ಪಂದ್ಯ, 90 ವಿಕೆಟ್
ಜಸ್ಪ್ರೀತ್ ಬುಮ್ರಾ, 70 ಪಂದ್ಯ, 89 ವಿಕೆಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications