Arshdeep Singh: ಅಪಾಯದಲ್ಲಿದೆ ಚಹಾಲ್ ದಾಖಲೆ
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೊದಲ ಟಿ20 ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರರ ಮೇಲೆ ಎಲ್ಲರ ಕಣ್ಣು ನೆಟ್ಟಿರಲಿದೆ. ಭಾರತ ತವರಿನಲ್ಲಿ ಅಮೋಘ ಅಂಕಿ ಅಂಶಗಳನ್ನು ಹೊಂದಿದ್ದು, ತವರಿನಲ್ಲಿ ಮತ್ತೊಂದು ಸರಣಿ ಗೆಲುವಿನ ಕನಸು ಕಾಣುತ್ತಿದೆ. ಸೂರ್ಯಕುಮಾರ್ ಯಾದವ್ ಮುಂದಾಳತ್ವದ ಭಾರತ ಆತ್ಮವಿಶ್ವಾಸದಿಂದ ಕಣಕ್ಕೆ ಇಳಿಯಲಿದೆ.
ಈಡನ್ ಗಾರ್ಡನ್ ಅಂಗಳದಲ್ಲಿ ಟಾಸ್ ಗೆದ್ದವರು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಪಂದ್ಯದಲ್ಲಿ ಹಲವು ಆಟಗಾರರು ತಮ್ಮ ಧಮಾಕೆದಾರ್ ಆಟದಿಂದ ದಾಖಲೆಯ ಪುಟಕ್ಕೆ ಡೈರೆಕ್ಟ್ ಎಂಟ್ರಿ ನೀಡಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಸಾಲಿನಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ಅರ್ಷದೀಪ್ ಸಿಂಗ್ ಸಹ ಇದ್ದಾರೆ. ಇವರು ಸದ್ಯ ಟಿ20 ಕ್ರಿಕೆಟ್‌ನಲ್ಲಿ ಅಮೋಘ ಫಾರ್ಮ್‌ನಲ್ಲಿದ್ದು, ಈಡನ್ ಗಾರ್ಡನ್ ಅಂಗಳದಲ್ಲಿ ಇತಿಹಾಸ ನಿರ್ಮಿಸಬಲ್ಲರು.

ಯಾವ ದಾಖಲೆಯ ಸನಿಹದಲ್ಲಿ ಅರ್ಷದೀಪ್
ಅರ್ಷದೀಪ್ ಸಿಂಗ್ ಸದ್ಯ ಟೀಮ್ ಇಂಡಿಯಾದ ಟಿ20 ತಂಡದ ಅವಿಭಾಜ್ಯ ಅಂಗ. 2024ರ ಟಿ20 ವಿಶ್ವಕಪ್‌ನಲ್ಲೂ ಅಮೋಘ ಬೌಲಿಂಗ್ ನಡೆಸಿ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ಶ್ರಮಿಸಿದ್ದರು. ಈಗ ಈಡನ್ ಗಾರ್ಡನ್ ಅಂಗಳದಲ್ಲಿ ಇನ್ನು ಎರಡು ವಿಕೆಟ್ ಪಡೆಯುತ್ತಿದ್ದಂತೆ, ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಅವರ ದಾಖಲೆಯನ್ನು ಅಳಿಸಿ ಹಾಕಲಿದ್ದಾರೆ. ಇದುವರೆಗೆ ಅರ್ಷದೀಪ್ ಭಾರತದ ಪರ 60 ಟಿ20 ಪಂದ್ಯಗಳಲ್ಲಿ 95 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಚಾಹಲ್ ಪಡೆದ ವಿಕೆಟ್ ಎಷ್ಟು?
ಟೀಮ್ ಇಂಡಿಯಾದ ಭರವಸೆಯ ಸ್ಪಿನ್ ಬೌಲರ್, ಕೆಲವು ತಿಂಗಳುಗಳಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ. ಇವರು ತಮ್ಮ ಲೆಗ್ ಸ್ಪಿನ್ ದಾಳಿಯ ಮೂಲಕ ಎಲ್ಲರ ಚಿತ್ತ ಕದ್ದಿದ್ದರು. ಇವರ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಇವರ ಬುಟ್ಟಿಯಲ್ಲಿ 96 ವಿಕೆಟ್‌ಗಳು ಇವೆ. ಅರ್ಷದೀಪ್ ಸಿಂಗ್ ಈ ಸರಣಿಯಲ್ಲಿ ಇನ್ನೆರಡು ವಿಕೆಟ್ ಪಡೆದರೆ ಚಹಾಲ್ ದಾಖಲೆ ಅಳಿಸುತ್ತದೆ.
ಅರ್ಷದೀಪ್ ಸಿಂಗ್ ಈ ಸರಣಿಯಲ್ಲಿ ಇನ್ನು ಐದು ವಿಕೆಟ್ ಪಡೆದಿದ್ದೇ ಆದಲ್ಲಿ, ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್ ಪಡೆದು ಸಾಧನೆಯನ್ನು ಮಾಡಲಿದ್ದಾರೆ. ಈ ಮೂಲಕ ಈ ಸಾಧನೆಯನ್ನು ಮಾಡಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಸಹ ತಮ್ಮದಾಗಿಸಿಕೊಳ್ಳಲಿದ್ದಾರೆ.

ಬುಮ್ರಾ ದಾಖಲೆಯ ಮೇಲೆ ಹಾರ್ದಿಕ್ ಕಣ್ಣು
ಪ್ರಸಕ್ತ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಜಸ್ಪ್ರಿತ್ ಬುಮ್ರಾ ಗಾಯದ ಕಾರಣದಿಂದ ಆಡುತ್ತಿಲ್ಲ. ಇದೇ ಅವಕಾಶವನ್ನು ಬಳಸಿಕೊಂಡು ಹಾರ್ದಿಕ್ ಪಾಂಡ್ಯ ಸಹ ಮತ್ತೊಂದು ದಾಖಲೆ ಬರೆಯುವ ಕನಸಿನಲ್ಲಿದ್ದಾರೆ. ಜಸ್ಪ್ರಿತ್ ಬುಮ್ರಾ ಹಾಗೂ ಹಾರ್ದಿಕ್ ಪಾಂಡ್ಯ ಟಿ20 ಕ್ರಿಕೆಟ್‌ನಲ್ಲಿ ಸಮಾನ ವಿಕೆಟ್‌ಗಳನ್ನು ಪಡೆದಿದ್ದಾರೆ. ಇಬ್ಬರು ಚುಟುಕು ಫಾರ್ಮೆಟ್‌ನಲ್ಲಿ 89 ವಿಕೆಟ್ ಹೊಂದಿದ್ದು, ಹಾರ್ದಿಕ್ ಇನ್ನು ಒಂದು ವಿಕೆಟ್ ಪಡೆದಲ್ಲಿ ದಾಖಲೆ ನಿರ್ಮಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications