ಭಾರತೀಯ ಕ್ರಿಕೆಟ್‌ನಲ್ಲಿ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ಎಂಎಸ್ ಧೋನಿ, ರೋಹಿತ್ ಶರ್ಮಾ ಇವರೆಲ್ಲ ವರ್ಷಕ್ಕೆ ಮಿಲಿಯನ್‌ಗಟ್ಟಲೆ ಆದಾಯ ಗಳಿಸುತ್ತಿದ್ದಾರೆ ಅನ್ನೋದು ನಮಗೆ ಗೊತ್ತಿರುವ ವಿಚಾರ. ಆದರೆ ಈ ಸ್ಟಾರ್ ಕ್ರಿಕೆಟಿಗರಿಗಿಂತಲೂ ಅತೀ ಶ್ರೀಮಂತ ಭಾರತೀಯ ಕ್ರಿಕೆಟಿಗರೊಬ್ಬರಿದ್ದಾರೆ. ಆದರೆ, ಈ ಕ್ರಿಕೆಟಿಗ ಕೇವಲ 22ನೇ ವಯಸ್ಸಿಗೆ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದು, ಇದೀಗ ಈ ಆಟಗಾರರ ಜಗತ್ತಿನ ಎಲ್ಲ ಕ್ರಿಕೆಟಿಗರಿಗಿಂತ ಶ್ರೀಮಂತರಾಗಿದ್ದಾರೆ.
ಈ ಶ್ರೀಮಂತ ಕ್ರಿಕೆಟಿಗ ಬೇರೆ ಯಾರು ಅಲ್ಲ, ಭಾರತದ ಯುವ ಕ್ರಿಕೆಟಿಗ ಮತ್ತು ಉದ್ಯಮಿ ಆರ್ಯಮನ್ ಬಿರ್ಲಾ. ಆರ್ಯಮನ್ ಬಿರ್ಲಾ ತಮ್ಮ 22ನೇ ವಯಸ್ಸಿನಲ್ಲಿ ನೆಚ್ಚಿನ ಕ್ರೀಡೆಗೆ ವಿದಾಯ ಘೋಷಿಸಿದ್ದರು. ಈಗ ಅವರನ್ನು ವಿಶ್ವದ ಯಾವುದೇ ಕ್ರಿಕೆಟಿಗರಿಗೆ ಹೋಲಿಸಿದರೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಹೀಗಾಗಿ ಆರ್ಯಮನ್ ಬಿರ್ಲಾ ಅರು ವಿಶ್ವದ ಶ್ರೀಮಂತ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಭಾರತದ ಹಿರಿಯ ಉದ್ಯಮಿ ಎನಿಸಿಕೊಂಡಿರುವ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರ ಆರ್ಯಮನ್ ಬಿರ್ಲಾ. ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲಿ ಕುಮಾರ್ ಮಂಗಳಂ ಬಿರ್ಲಾ ಒಬ್ಬರು. 1997ರಲ್ಲಿ ಜನಿಸಿದ ಆರ್ಯಮನ್ ಬಿರ್ಲಾ ಬಾಲ್ಯದಿಂದಲೇ ಕ್ರಿಕೆಟ್ ಆಡಲು ಶುರು ಮಾಡಿದರು. ಅಂದುಕೊಂಡಂತೆ 2017ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೂ ಪಾದಾರ್ಪಣೆ ಮಾಡಿದ್ದರು. ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಆದರೆ, 2019ರಲ್ಲಿ ಅವರು ಗಾಯಗೊಂಡ ಪರಿಣಾಮ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆಯಬೇಕಾಯಿತು.
ಆರ್ಯಮನ್ ಬಿರ್ಲಾ ಮಧ್ಯಪ್ರದೇಶ ತಂಡವನ್ನು ದೇಶೀಯ ಕ್ರಿಕೆಟ್‌ನಲ್ಲಿ ಪ್ರತಿನಿಧಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 9 ಪಂದ್ಯಗಳು ಮತ್ತು ಲಿಸ್ಟ್-ಎ ಯಲ್ಲಿ 4 ಪಂದ್ಯಗಳನ್ನು ಆಡಿದ್ದಾರೆ. ಅವರು ಪ್ರಥಮ ದರ್ಜೆಯಲ್ಲಿ 1 ಶತಕದೊಂದಿಗೆ 414 ರನ್ ಗಳಿಸಿದ್ದು, ಅವರ ಗರಿಷ್ಠ ಸ್ಕೋರ್ 103 ರನ್ ಆಗಿದೆ. ಅಷ್ಟೇ ಅಲ್ಲ, ಎರಡು ವರ್ಷಗಳ ಕಾಲ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಆದರೆ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ. ಇದಾದ ಬಳಿಕ ಅವರು ಕ್ರಿಕೆಟ್‌ನಿಂದ ದೂರ ಉಳಿದಿದ್ದರು.
ಆರ್ಯಮನ್ ಬಿರ್ಲಾ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ನಂತರ ತಮ್ಮನ್ನು ಉದ್ಯಮದಲ್ಲಿ ತೊಡಗಿಸಿಕೊಂಡರು. ಮೊದಲು ಆದಿತ್ಯ ಬಿರ್ಲಾ ಮ್ಯಾನೇಜ್‌ಮೆಂಟ್ ಕಾರ್ಪೊರೇಷನ್ ಗ್ರಾಸಿಮ್ ಇಂಡಸ್ಟ್ರೀಸ್‌ನ ನಿರ್ದೇಶಕರಾದರು. ಇದಾದ ನಂತರ ಅವರು ಫ್ಯಾಷನ್ ಮತ್ತು ರಿಟೇಲ್ ಲಿಮಿಟೆಡ್‌ನ ನಿರ್ದೇಶಕರಾದರು. ಈಗ ಆರ್ಯಮನ್ ಬಿರ್ಲಾ ಅವರ ಒಟ್ಟು ಆಸ್ತಿ ಮೌಲ್ಯ 70 ಸಾವಿರ ಕೋಟಿ ರೂ. ಆಗಿದೆ. ಇವರಲ್ಲದೆ, ಸಚಿನ್ ತೆಂಡೂಲ್ಕರ್ 1100 ಕೋಟಿ ರೂ., ವಿರಾಟ್ ಕೊಹ್ಲಿ 900 ಕೋಟಿ ರೂ., ಧೋನಿ 800 ಕೋಟಿ ರೂ. ಆಸ್ತಿ ಹೊಂದಿದ್ದಾರೆ.