Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಚಿನ್, ಕೊಹ್ಲಿ, ಜಯಸೂರ್ಯ ಅವರ ದಾಖಲೆ ಸಮಕ್ಕೆ ನಿಂತ ಚರಿತ್ ಅಸಲಂಕಾ

ಕೋಲಂಬೋದಲ್ಲಿ ನಡೆದ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯ ತಂಡ 77 ರನ್‌ ಜಯ ದಾಖಲಿಸಿದೆ. ಈ ಮೂಲಕ ಲಂಕಾ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಆತಿಥೇಯ ತಂಡದ ನಾಯಕ ಚರಿತ್ ಅಸಲಂಕಾ ಅಮೋಘ ಶತಕ ಬಾರಿಸಿ ತಂಡಕ್ಕೆ ನೆರವಾದರು. ಅಲ್ಲದೆ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಸನತ್ ಜಯಸೂರ್ಯ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಬುಧವಾರ ನಡೆದ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದ ಶ್ರೀಲಂಕಾ ಮೊದಲು ಬ್ಯಾಟ್ ಮಾಡುವ ನಿರ್ಧಾರವನ್ನು ಮಾಡಿತು. ಲಂಕಾ 49.2 ಓವರ್‌ಗಳಲ್ಲಿ 244 ರನ್‌ ಸೇರಿಸಿ ಆಲೌಟ್ ಆಯಿತು. ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶ 35.5 ಓವರ್‌ಗಳಲ್ಲಿ 167 ರನ್‌ ಸೇರಿಸಿ ಸೋಲು ಕಂಡಿತು.

Asalanka s Century Leads Sri Lanka to 77-Run Victory Over Bangladesh

ಮೊದಲು ಬ್ಯಾಟ್ ಮಾಡಿದ ಲಂಕಾ ತಂಡದ ಆರಂಭ ಕಳಪೆಯಾಗಿತ್ತು. ಪಾಥುಮ್ ನಿಸ್ಸಂಕಾ (0) ಮತ್ತು ನಿಸ್ಸಾನ್ ಮಧುಶಂಕ (6), ಭರವಸೆಯ ಆಟಗಾರ ಕಮಿಂದು ಮೆಂಡಿಸ್ (0) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. 29 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಕುಸಾಲ್ ಮೆಂಡಿಸ್‌ (45) ಹಾಗೂ ಚರಿತ್ ಅಸಲಂಕಾ ಜೋಡಿ ತಂಡಕ್ಕೆ ಆಧಾರವಾದರು. ಈ ಜೋಡಿ 77 ಎಸೆತಗಳಲ್ಲಿ 60 ರನ್‌ ಸೇರಿಸಿತು. ಐದನೇ ವಿಕೆಟ್‌ಗೆ ನಾಯಕ ಅಸಲಂಕಾ ಹಾಗೂ ಜನಿತ್ ಲಿಯಾನಗೆ (29) ಜೋಡಿ ಸಹ 64 ರನ್‌ಗಳ ಕಾಣಿಕೆ ನೀಡಿ ತಂಡಕ್ಕೆ ಆಧಾರವಾದರು. ಉಳಿದಂತೆ ಮಿಲನ್ ರಥನಾಯಕ (22) ಹಾಗೂ ವನಿಂದು ಹಸರಂಗ್ (22) ತಂಡಕ್ಕೆ ಆಸರೆಯಾದರು.

ದಾಖಲೆಯ ಶತಕ

ಶ್ರೀಲಂಕಾದ ನಾಯಕ ಚರಿತ್ ಅಸಲಂಕಾ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 123 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್ ಸಹಾಯದಿಂದ 106 ರನ್‌ ಬಾರಿಸಿ ಔಟ್ ಆದರು. ಈ ಮೂಲಕ ಇವರು ದಾಖಲೆ ಬರೆದರು. ಇದರೊಂದಿಗೆ ಇವರು ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ಸನತ್ ಜಯಸೂರ್ಯ ಅವರ ದಾಖಲೆಯನ್ನು ಸರಿಗಟ್ಟಿದ್ದು, ಈ ಸ್ಟಾರ್ ಆಟಗಾರರು ಕೊಲಂಬೊದ ಅಂಗಳದಲ್ಲಿ ತಲಾ ನಾಲ್ಕು ಶತಕ ಬಾರಿಸಿದ್ದರು.

Asalanka s Century Leads Sri Lanka to 77-Run Victory Over Bangladesh

ಗುರಿಯನ್ನು ಬೆನ್ನಟ್ಟಿದ ಬಾಂಗ್ಲಾದೇಶದ ತಂಡದ ಆರಂಭ ಕಳಪೆಯಾಗಿತ್ತು. ಎರಡನೇ ವಿಕೆಟ್‌ಗೆ ತಂಜೀದ್ ಹಸನ್ ಹಾಗೂ ಅನುಭವಿ ನಜ್ಮುಲ್ ಹೊಸೇನ್ ಶಾಂತೊ (23) ಜೋಡಿ ತಂಡಕ್ಕೆ ಆಸರೆಯಾದ್ರು. ಈ ಜೋಡಿ 71 ಎಸೆತಗಳಲ್ಲಿ 71 ರನ್ ಬಾರಿಸಿ ಅಬ್ಬರಿಸಿದರು. ಮೂರನೇ ಕ್ರಮಾಂಕದಲ್ಲಿ ತಂಜೀದ್ ಹಸನ್ (62) ಹಾಗೂ ಮಧ್ಯಮ ಕ್ರಮಾಂಕದಲ್ಲಿ ಝಾಕಿರ್ ಅಲಿ (51) ಅರ್ಧಶತಕ ಬಾರಿಸಿದರು. ಉಳಿದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಸ್ಟಾರ್ ಆಲ್‌ರೌಂಡರ್‌ ವನಿಂದು ಹಸರಂಗ್‌ ಲಂಕಾ ಪರ ನಾಲ್ಕು ವಿಕೆಟ್‌ ಪಡೆದರು.

Story first published: Wednesday, July 2, 2025, 22:19 [IST]
Other articles published on Jul 2, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+