ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು ಪದಕಗಳ ಭರ್ಜರಿ ಬೇಟೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಭಾರತ ಪುರುಷರ ಕ್ರಿಕೆಟ್ ತಂಡ ಕುಡ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ಮಹಿಳೆಯ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರೆ ಪುರುಷರ ತಂಡ ಇಂದು ಚೀನಾದ ಹ್ಯಾಂಗ್‌ಝೌಗೆ ಪ್ರಯಾಣ ಬೆಳೆಸಿದೆ.
ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ತಂಡವನ್ನು ಋತುರಾಜ್ ಗಾಯಕ್‌ವಾಡ್ ನೇತೃತ್ವದಲ್ಲಿ ಭಾರತ ತಂಡ ಕಣಕ್ಕಿಳಿಯಲಿದೆ. ಹೀಗಾಗಿ ಋತು ನೇತೃತ್ವದ ತಂಡ ಇದೀಗ ಚೀನಾಗೆ ತನ್ನ ಪ್ರಯಾಣವನ್ನು ಬೆಳೆಸಿದೆ. ಮಹಿಳಾ ಕ್ರಿಕೆಟ್ ತಂಡದ ಯಶಸ್ಸಿನ ಬಳಿಕ ಪುರುಷರ ತಂಡ ಕೂಡ ಅದೇ ಹಾದಿಯಲ್ಲಿ ಸಾಗುವ ವಿಶ್ವಾಸದಲ್ಲಿದ್ದು ಭಾರತ ತಂಡ ಕ್ವಾರ್ಟರ್-ಫೈನಲ್ ಹಂತದಿಂದ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ.

ಏಷ್ಯನ್ ಗೇಮ್ಸ್ 2023 ರಲ್ಲಿ ತಮ್ಮ ಬಹು ನಿರೀಕ್ಷಿತ ಪ್ರಚಾರಕ್ಕಾಗಿ ಟೀಮ್ ಇಂಡಿಯಾ ಮುಂಬೈ ವಿಮಾನ ನಿಲ್ದಾಣದಿಂದ ಹ್ಯಾಂಗ್‌ಝೌಗೆ ಹೊರಟಿದೆ ಎಂದು ಸ್ಪೋರ್ಟ್ಸ್ ಅಥಾರಿಟಿ ಆಫ್ ಮೀಡಿಯಾ ಗುರುವಾರ ಮಾಹಿತಿ ನೀಡಿದೆ. ನಾಯಕ ರುತುರಾಜ್ ಗಾಯಕ್ವಾಡ್ ಹೊರತುಪಡಿಸಿ ಎಲ್ಲರ ಕಣ್ಣುಗಳು ಯಶಸ್ವಿ ಜೈಸ್ವಾಲ್, ಪ್ರಭಾಸಿಮ್ರಾನ್ ಸಿಂಗ್, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್ ಮತ್ತು ರಾಹುಲ್ ತ್ರಿಫಾಟಿ ಮೇಲೆ ನೆಟ್ಟಿದೆ. ಎನ್‌ಸಿಎ ಮುಖ್ಯಸ್ಥ ಈ ತಂಡಕ್ಕೆ ಮುಖ್ಯ ಕೋಚ್ ಆಗಿ ತಂಡದ ಜೊತೆಗೆ ಪ್ರಯಾಣ ಬೆಳೆಸಿದ್ದಾರೆ.
ಗುರುವಾರ ಸಂಜೆ ವೇಳೆಗೆ ಟೀಮ್ ಇಂಡಿಯಾ ಚೀನಾವನ್ನು ತಲುಪಲಿದ್ದು ಶುಕ್ರವಾರದಿಂದ ಅಭ್ಯಾಸ ಆರಂಭಿಸಲಿದೆ. ಋತುರಾಜ್ ಗಾಯಕ್ವಾಡ್, ವಾಷಿಂಗ್ಟನ್ ಸುಂದರ್ ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕಣಕ್ಕಿಳಿದಿದ್ದು ಈ ಪ್ರತಿಷ್ಠಿತ ಟೂರ್ನಿಗೆ ಸಿದ್ಧತೆ ನಡೆಸಿದ್ದಾರೆ. ಆ ಸರಣಿಯಲ್ಲಿ ಇವರಿಬ್ಬರು ಉತ್ತಮ ಪ್ರದರ್ಶನ ನೀಡಿದ್ದು, ತಮ್ಮ ಫಾರ್ಮ್ ಅನ್ನು ಮುಂದುವರಿಸಲು ಉತ್ಸುಕರಾಗಿದ್ದಾರೆ.
ಅವರ ಹೆಚ್ಚಿನ ಶ್ರೇಯಾಂಕದ ಕಾರಣ, ಭಾರತವು ತಮ್ಮ ಏಷ್ಯನ್ ಗೇಮ್ಸ್ ಅಭಿಯಾನವನ್ನು ಅಕ್ಟೋಬರ್ 3 ರಂದು ಕ್ವಾರ್ಟರ್ ಫೈನಲ್‌ನಲ್ಲಿ ಪ್ರಾರಂಭಿಸಲಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾ ನಾಲ್ಕು ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್‌ನಲ್ಲಿ ಸ್ಪರ್ಧಿಸಲಿವೆ.
ಏಷ್ಯನ್ ಗೇಮ್ಸ್ 2023 ತಂಡಗಳು ಮತ್ತು ಗುಂಪುಗಳು
ಗ್ರೂಪ್ 'ಎ': ಮಂಗೋಲಿಯಾ, ಮಾಲ್ಡೀವ್ಸ್, ನೇಪಾಳ
ಗ್ರೂಪ್ 'ಬಿ': ಕಾಂಬೋಡಿಯಾ, ಹಾಂಗ್ ಕಾಂಗ್ ಚೀನಾ, ಜಪಾನ್
ಗುಂಪು 'ಸಿ' : ಮಲೇಷ್ಯಾ, ಸಿಂಗಾಪುರ್, ಥೈಲ್ಯಾಂಡ್
ಕ್ವಾರ್ಟರ್-ಫೈನಲ್‌ಗೆ ನೇರ ಪ್ರವೇಶ ಪಡೆದುಕೊಂಡಿರುವ ತಂಡಗಳು: ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ