ಇದರ ಕನಸೂ ಕಂಡಿರಲಿಲ್ಲ: ಐತಿಹಾಸಿಕ ಸಾಧನೆಯ ಬಳಿಕ ಆಶ್ ಗಾರ್ಡ್ನರ್ ಸಂತಸ
ಮಹಿಳಾ ಆಶಸ್‌ನ ಏಕೈಕ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಅಮೋಘ ಗೆಲುವು ಸಾಧಿಸಿದೆ. ಆಸಿಸ್ ತಡದ ಸ್ಪಿನ್ನರ್ ಆಸ್ಲೆ ಗಾರ್ಡ್ನರ್ ಅವರ ಅಮೋಘ ಸ್ಪಿನ್ ದಾಳಿಗೆ ಇಂಗ್ಲೆಂಡ್ ತತ್ತರಿಸಿದ್ದು 89 ರನ್‌ಗಳ ಅಂತರದಿಂದ ಇಂಗ್ಲೆಂಡ್ ಪಡೆಯನ್ನು ಮಣಿಸಿದೆ. ಕೊನೆಯ ಇನ್ನಿಂಗ್ಸ್‌ನಲ್ಲಿ ಬರೊಬ್ಬರಿ 8 ವಿಕೆಟ್ ಪಡೆದ ಗಾರ್ಡ್ನರ್ ಗೆಲುವಿನ ರುವಾರಿ ಎನಿಸಿಕೊಂಡರು. ಈ ಗೆಲುವಿನ ಸಾಧನೆಯ ಬಳಿಕ ಗಾರ್ಡ್ನರ್ ತಮ್ಮ ಪ್ರದರ್ಶನದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.
ಕೊನೆಯ ಇನ್ನಿಂಗ್ಸ್‌ನಲ್ಲಿ 268 ರನ್‌ಗಳನ್ನು ಬೆನ್ನಟ್ಟುವ ಸವಾಲು ಪಡೆದ ಇಂಗ್ಲೆಂಡ್ ತಂಡ ನಾಳ್ಕನೇ ದಿನದಾಟದ ಅಂತ್ಯದಲ್ಲಿ ಇಂಗ್ಲೆಂಡ್ ತಂಡ ಐದು ವಿಕೆಟ್ ಕಳೆದುಕೊಂಡು 116 ರನ್‌ಗಳಿಸಿತ್ತು. ಇದರಲಲ್ಇ ಮೂರು ವಿಕೆಟ್‌ಗಳು ಗಾರ್ಡ್ನರ್ ಪಾಲಾಗಿತ್ತು. ಕೊನೆಯ ದಿನದಾಟದಲ್ಲಿ ಮತ್ತಷ್ಟು ಉಗ್ರಾವತಾರ ತಾಳಿದ ಗಾರ್ಡ್ನರ್ ಇಂಗ್ಲೆಂಡ್‌ನ ಉಳಿದ ಎಲ್ಲಾ ಐದು ವಿಕೆಟ್‌ಗಳನ್ನು ಕೂಡ ಬುಟ್ಟಿಗೆ ಹಾಕಿಕೊಂಡರು. ಕೊನೆಯ ದಿನ ಕೇವಲ 62 ರನ್‌ಗಳಿಸಿ ಉಳಿದ ಐದು ವಿಕೆಟ್‌ಗಳನ್ನು ಕೂಡ ಇಂಗ್ಲೆಂಡ್ ಕಳೆದುಕೊಂಡಿದೆ.

ಈ ಅದ್ಬುತ ಬೌಲಿಂಗ್ ಸಾಧನೆಯ ಬಳಿಕ ಮಾತನಾಡಿದ ಗಾರ್ಡ್ನರ್ "ನಾನು ಇದರ ಕನಸನ್ನೂ ಕಂಡಿರಲಿಲ್ಲ. ಆದರೆ ಐದು ದಿನಗಳ ಈ ಆಟದಲ್ಲಿ ಫಲಿತಾಂಶವನ್ನು ಪಡೆಯುವುದು ಬಹಳ ಮುಖ್ಯ ಎಂಬುದು ನನಗೆ ತಿಳಿದಿತ್ತು. ಇಲ್ಲಿನ ವಾತಾವರಣದ ಸ್ಥಿತಿಯಿಂದಾಗಿ ಸಣ್ಣ ಅದೃಷ್ಟವೂ ನಮ್ಮ ಜೊತೆಗಿತ್ತು. ಇನ್ನು ಬೌಲಿಂಗ್‌ನಲ್ಲಿ ಉತ್ತಮ ಜಿತೆಯಾಟ ಬಂದ ಕಾರಣದಿಂದಾಘಿಯೇ ಇಂಥಾ ಸಾಧನೆ ಮಾಡಲು ಸಾಧ್ಯವಾಯಿತು" ಎಂದಿದ್ದಾರೆ ಆಶ್ಲೇ ಗಾರ್ಡ್ನರ್.
ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ಆಶ್ಲೀ ಗಾರ್ಡ್ನರ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನ ಆಸಿಸ್ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದೆ. ಪಂದ್ಯದ ಕೊನೆಯ ಇನ್ನಿಂಗ್ಸ್‌ನಲ್ಲಿ 8-ವಿಕೆಟ್‌ಗಳನ್ನು ಪಡೆದು ಇಂಗ್ಲೆಂಡ್‌ಗೆ ಆಘಾತ ನೀಡಿದ ಅವರು ಪಂದ್ಯದಲ್ಲಿ ಒಟ್ಟು 165 ರನ್‌ಗಳಿಗೆ 12 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಗಾರ್ಡ್ನರ್ ಐತಿಹಾಸಿಕ ಮೈದಾನದಲ್ಲಿ ಸ್ಪಿನ್ನರ್ ಮಾಡಿದ ಅತ್ಯುತ್ತಮ ಸಾಧನೆ ಮಾಡಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಂತಿಮ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಆಟಗಾರ್ತಿ ಡ್ಯಾನಿ ವ್ಯಾಟ್ ತಮ್ಮ ಪದಾರ್ಪಣಾ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ತಂಡದ ಸಾಕಷ್ಟು ಹೋರಾಟ ನಡೆಸಿದರು. ಆದರೆ ಆಶ್ ಗಾರ್ಡ್ನರ್ ಕೊನೆಯ ದಿನದ ಎಲ್ಲಾ 5 ವಿಕೆಟ್‌ಗಳನ್ನು ಕೂಡ ಪಡೆದು ವ್ಯಾಟ್ ಹೋರಾಟವನ್ನು ವ್ಯರ್ಥಗೊಳಿಸಿದರು. ಇಂಗ್ಲೆಂಡ್ ತಂಡ 5 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿದಲ್ಲಿಂದ ಅಂತಿಮ ದಿನದಾಟ ಆರಂಭಿಸಿತು. ಆದರೆ ಕೇವಲ 62 ರನ್‌ಗಳಿಗೆ ಕೊನೆಯ 5 ವಿಕೆಟ್ ಕಳೆದುಕೊಂಡಿದೆ. ಅಂತಿಮ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತನ್ನ 268 ರನ್‌ಗಳನ್ನು ಬೆನ್ನಟ್ಟಿದ್ದು ಒಂದು ಹಂತದಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ 55 ರನ್ ಗಳಿಸಿತ್ತು.
ಇಂಗ್ಲೆಂಡ್ ವುಮೆನ್ಸ್ ಆಡುವ ಬಳಗ: ಟಮ್ಮಿ ಬ್ಯೂಮಾಂಟ್, ಎಮ್ಮಾ ಲ್ಯಾಂಬ್, ಹೀದರ್ ನೈಟ್ (ನಾಯಕಿ), ನ್ಯಾಟ್ ಸ್ಕಿವರ್-ಬ್ರಂಟ್, ಸೋಫಿಯಾ ಡಂಕ್ಲಿ, ಡೇನಿಯಲ್ ವ್ಯಾಟ್, ಆಮಿ ಜೋನ್ಸ್ (ವಾಕ್), ಸೋಫಿ ಎಕ್ಲೆಸ್ಟೋನ್, ಕೇಟ್ ಕ್ರಾಸ್, ಲಾರೆನ್ ಫೈಲರ್, ಲಾರೆನ್ ಬೆಲ್
ಬೆಂಚ್: ಡೇನಿಯಲ್ ಗಿಬ್ಸನ್, ಇಸ್ಸಿ ವಾಂಗ್
ಆಸ್ಟ್ರೇಲಿಯಾ ವುಮೆನ್ಸ್ ಆಡುವ ಬಳಹ: ಬೆತ್ ಮೂನಿ, ಫೋಬೆ ಲಿಚ್‌ಫೀಲ್ಡ್, ಎಲ್ಲಿಸ್ ಪೆರ್ರಿ, ತಹ್ಲಿಯಾ ಮೆಕ್‌ಗ್ರಾತ್, ಜೆಸ್ ಜೊನಾಸ್ಸೆನ್, ಅಲಿಸ್ಸಾ ಹೀಲಿ (ನಾಯಕ & ವಿಕೆಟ್ ಕೀಪರ್), ಆಶ್ಲೆ ಗಾರ್ಡ್ನರ್, ಅನ್ನಾಬೆಲ್ ಸದರ್ಲ್ಯಾಂಡ್, ಅಲಾನಾ ಕಿಂಗ್, ಕಿಮ್ ಗಾರ್ತ್, ಡಾರ್ಸಿ ಬ್ರೌನ್
ಬೆಂಚ್: ಗ್ರೇಸ್ ಹ್ಯಾರಿಸ್, ಮೇಗನ್ ಶುಟ್, ಜಾರ್ಜಿಯಾ ವೇರ್ಹ್ಯಾಮ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications