ಆಶಸ್: ಆಂಗ್ಲರ ವಿರುದ್ಧ ಆಸ್ಟ್ರೇಲಿಯಾಕ್ಕೆ ಹೀನಾಯ ಸೋಲು
ನಾಟಿಂಗ್‌ಹಾಮ್, ಆಗಸ್ಟ್ .08: ಸ್ಟುವರ್ಟ್ ಬ್ರಾಡ್ ಮತ್ತು ಸ್ಟೋಕ್ಸ್ ಮಾರಕ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ ಆಶಸ್ ಸರಣಿಯ ನಾಲ್ಕನೇ ಟೆಸ್ಟ್ ನಲ್ಲಿ ಇನಿಂಗ್ಸ್ ಮತ್ತು 78 ರನ್ ಗಳಿಂದ ಆಂಗ್ಲರ ಎದುರು ಮಂಡಿಯೂರಿದೆ.
ಬ್ರಾಡ್ ದಾಳಿಗೆ ತತ್ತರಿಸಿ ಮೊದಲ ಇನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ ಕೇವಲ 60 ರನ್ ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ 9 ವಿಕೆಟ್ ಕಳೆದುಕೊಂಡು 391 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು.[ಅಪರೂಪದ ಘಟನೆಗೆ ಸಾಕ್ಷಿಯಾದ ಆಶಸ್ ಟೆಸ್ಟ್]
|

ತನ್ನ ದ್ವೀತಿಯ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿಸ ಆಸೀಸ್ 253 ರನ್ ಗಳಿಗೆ ಸರ್ವಪತನ ಕಾಣುವ ಮೂಲಕ ಆಂಗ್ಲರಿಗೆ ಶರಣಾಯಿತು. ಮೊದಲ ಇನಿಂಗ್ಸ್ ನಲ್ಲಿ 8 ವಿಕೆಟ್ ಕಿತ್ತ ಸ್ಟುವರ್ಟ್ ಬ್ರಾಡ್ ಆಸೀಸ್ ಗೆ ಮಾರಕವಾಗಿದ್ದರೆ, ಎರಡನೇ ಇನಿಂಗ್ಸ್ ನಲ್ಲಿ 6 ವಿಕೆಟ್ ಪಡೆದ ಸ್ಟೋಕ್ಸ್ ಆಸೀಸ್ ಗೆ ಸೋಲು ಖಚಿತಮಾಡಿದರು. ಸರಣಿಯಲ್ಲಿ ಇಂಗ್ಲೆಂಡ್ 3-1 ರ ಮುನ್ನಡೆ ಸಾಧಿಸಿದೆ.
ಎರಡನೇ ಇನಿಂಗ್ಸ್ ನಲ್ಲಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಆರು ವಿಕೆಟ್ ಕಬಳಿಸಿದರೆ, ವುಡ್ 3 ವಿಕೆಟ್ ಗಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 15 ರನ್‌ಗಳಿಗೆ 8 ವಿಕೆಟ್ ಪಡೆದಿದ್ದ ಬ್ರಾಡ್ 1 ವಿಕೆಟ್ ಪಡೆದುಕೊಂಡರು. ಆಸೀಸ್ ಪರ ಆರಂಭಿಕರಾದ ರೋಜರ್ಸ್(52), ವಾರ್ನರ್ (64), ವೋಗ್ಸ್(51) ರನ್ ಸಿಡಿಸಿದರೂ ತಂಡವನ್ನು ಹೀನಾಯ ಸೋಲಿನಿಂದ ಪಾರು ಮಾಡಲಾಗಲಿಲ್ಲ.
ಇದೇ ವೇಳೆ ಆಸ್ಟ್ರೇಲಿಯಾ ನಾಯಕ ಮೈಕಲ್ ಕ್ಲಾರ್ಕ್ ನಿವೃತ್ತಿಯನ್ನು ಘೊಷಣೆ ಮಾಡಿದ್ದಾರೆ. 2013-14 ರ ಸೋಲಿಗೆ ಇಂಗ್ಲೆಂಡ್ ಸೇಡು ತೀರಿಸಿಕೊಂಡಿದ್ದು ಕೊನೆಯ ಟೆಸ್ಟ್ ಬಾಕಿ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications