ವಿರಾಟ್ ಕೊಹ್ಲಿ ಜೊತೆ ಅನಗತ್ಯ ದಾಖಲೆ ಪಟ್ಟಿ ಸೇರಿದ ಡೇವಿಡ್ ವಾರ್ನರ್

ಮ್ಯಾನ್ಚೆಸ್ಟರ್, ಸೆಪ್ಟೆಂಬರ್ 5: ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಅವರ ಕಳಪೆ ಬ್ಯಾಟಿಂಗ್ ಮತ್ತೆ ಮುಂದುವರೆದಿದೆ. ಮ್ಯಾನ್ಚೆಸ್ಟರ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಣ 4ನೇ ಆ್ಯಷಸ್ ಟೆಸ್ಟ್‌ನಲ್ಲಿ ವಾರ್ನರ್ ಡಕ್ ಔಟ್ ಆಗಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಆಸ್ಟ್ರೇಲಿಯಾ ಪರ ಮೈದಾನಕ್ಕಿಳಿದ ಡೇವಿಡ್ ವಾರ್ನರ್ 2 ಎಸೆತಗಳನ್ನು ಎದುರಿಸಿ ಸ್ಟುವರ್ಟ್ ಬ್ರಾಡ್‌ಗೆ ವಿಕೆಟ್ ಒಪ್ಪಿಸಿದ್ದಾರೆ. ಆ್ಯಷಸ್ ಈ ಸೀಸನ್‌ನಲ್ಲಿ ವಾರ್ನರ್ ಸಿಂಗಲ್ ಡಿಜಿಟ್‌ಗೆ ಔಟ್ ಆಗುತ್ತಿರುವುದು ಇದು ಆರನೇ ಬಾರಿ.
ಹಿಂದೊಮ್ಮೆ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ 6 ಇನ್ನಿಂಗ್ಸ್‌ಗಳಲ್ಲಿ ಸಿಂಗಲ್ ಡಿಜಿಟ್ ರನ್ ಮಾಡಿದ್ದರು.

ಬೇಡದ ದಾಖಲೆ
ಡೇವಿಡ್ ವಾರ್ನರ್ ಆ್ಯಷಸ್ 2019ರಲ್ಲಿ ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ 2 & 8, ಲಾರ್ಡ್ಸ್‌ನಲ್ಲಿ 3 & 5, ಲೀಡ್ಸ್‌ನಲ್ಲಿ 61 & 0 ಮತ್ತು ಮ್ಯಾನ್ಚೆಸ್ಟರ್‌ನಲ್ಲಿ 0 ಹೀಗೆ ಒಟ್ಟು 6 ಬಾರಿ ಸಿಂಗಲ್ ಡಿಜಿಟ್‌ಗೆ ಔಟ್ ಆಗುವ ಮೂಲಕ ಬೇಡದ ದಾಖಲೆಗಾಗಿ ಗುರುತಿಸಿಕೊಂಡಿದ್ದಾರೆ.

ಕೊಹ್ಲಿ ಸಿಂಗಲ್ ಡಿಜಿಟ್
ವಿರಾಟ್ ಕೊಹ್ಲಿ ಕೂಡ ಇಂಥದ್ದೇ ಬೇಡದ ದಾಖಲೆಗೆ ಕಾರಣರಾಗಿದ್ದರು. 2014ರಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡಿದ್ದಾಗ ಕೊಹ್ಲಿ ನಾಟಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ 1 & 8, ಲಾರ್ಡ್‌ನಲ್ಲಿ 25 & 0, ತೌಥಾಂಪ್ಟನ್‌ನಲ್ಲಿ 39 & 28, ಮ್ಯಾನ್ಚೆಸ್ಟರ್‌ನಲ್ಲಿ 0 & 7 ಮತ್ತು ಓವಲ್‌ನಲ್ಲಿ 6 & 20 ರನ್ ಹೀಗೆ ಒಟ್ಟು 6 ಇನ್ನಿಂಗ್ಸ್‌ಗಳಲ್ಲಿ ಸಿಂಗಲ್ ಡಿಜಿಟ್ ರನ್ ಗಳಿಸಿದ್ದರು.

ಅಥರ್ಟನ್ ಮೊದಲಿಗ
ಆ್ಯಷಸ್ ಸರಣಿಯೊಂದರಲ್ಲಿ ಆರಂಭಿಕರಾಗಿ ಬ್ಯಾಟ್ ಹಿಡಿದು ಅತೀ ಹೆಚ್ಚಿನ ಬಾರಿ ಸಿಂಗಲ್ ಡಿಜಿಟ್‌ಗೆ ಔಟಾದ ದಾಖಲೆ ಸಾಲಿನಲ್ಲಿ ಇಂಗ್ಲೆಂಡ್‌ನ ಮೈಕೆಲ್ ಅಥರ್ಟನ್ ಮೊದಲ ಸ್ಥಾನದಲ್ಲಿದ್ದಾರೆ. 1997ರಲ್ಲಿ ಅಥರ್ಟನ್ 7 ಇನ್ನಿಂಗ್ಸ್‌ಗಳಲ್ಲಿ ಸಿಂಗಲ್ ಡಿಜಿಟ್ ರನ್ ಮಾಡಿದ್ದರು.

ವಾರ್ನರ್ 3ನೇ ಆಟಗಾರ
ಅತೀ ಹೆಚ್ಚು ಸಾರಿ ಆ್ಯಷಸ್‌ನಲ್ಲಿ ಸಿಂಗಲ್ ಡಿಜಿಟ್‌ಗೆ ಔಟಾದವರಲ್ಲಿ ಆಸ್ಟ್ರೇಲಿಯಾದ ಕಾಲಿನ್ ಮೆಕ್‌ಡೊನಾಲ್ಡ್ (6 ಸಾರಿ-1956ರಲ್ಲಿ), ಆಸ್ಟ್ರೇಲಿಯಾದ ಜಾನಿ ಡೈಸನ್ (6 ಸಾರಿ-1981ರಲ್ಲಿ), ಡೇವಿಡ್ ವಾರ್ನರ್ (6 ಸಾರಿ-2019ರಲ್ಲಿ) 2ರಿಂದ 4 ಸ್ಥಾನಗಳಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications