Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಟೋಕ್ಸ್‌ಗೆ ಸವಾಲೆಸೆಯಲು ಮಿಚೆಲ್ ಮಾರ್ಷ್‌ ಕಣಕ್ಕಿಳಿಸಲಿದೆಯಾ ಆಸೀಸ್?!

Ashes 2019: Mitchell Marsh named in Australia’s 12-man squad for 5th Test

ಲಂಡನ್, ಸೆಪ್ಟೆಂಬರ್ 11: ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್-ಆಸ್ಟ್ರೇಲಿಯಾ ನಡುವಣ 5ನೇ ಆ್ಯಷಸ್ ಟೆಸ್ಟ್‌ಗಾಗಿ 12 ಜನರ ಆಸೀಸ್ ತಂಡದಲ್ಲಿ ಆಲ್ ರೌಂಡರ್ ಮಿಚೆಲ್ ಮಾರ್ಷ್ ಅವರನ್ನು ಹೆಸರಿಸಲಾಗಿದೆ. ಕೊನೆಯ ಟೆಸ್ಟ್ ಪಂದ್ಯ ಸೆಪ್ಟೆಂಬರ್ 12ರ ಗುರುವಾರ ಆರಂಭವಾಗಲಿದೆ.

ಆಸೀಸ್ ತಂಡದಲ್ಲಿ ಕಾಣಸಿಕೊಂಡಿರುವ ಮಾರ್ಷ್, 2018ರ ಡಿಸೆಂಬರ್‌ನಿಂದಲೂ ತಂಡದಲ್ಲಿ ಆಡಿರಲಿಲ್ಲ. ಎಕ್ಸ್‌ಟ್ರಾ ಬೌಲಿಂಗ್ ಕವರ್‌ಗಾಗಿ ಬಲಗೈ ವೇಗಿ ಮಾರ್ಷ್‌ಗೆ ಸ್ಥಾನ ನೀಡಲಾಗಿದೆ. ಪ್ರಕಟಿತ ತಂಡದಿಂದ ಸ್ಪಿನ್ನರ್ ಟ್ರಾವಿಸ್ ಹೆಡ್‌ ಅವರನ್ನು ಕೈಬಿಡಲಾಗಿದೆ. ಇಂಗ್ಲೆಂಡ್‌ ಆಲ್‌ ರೌಂಡರ್‌ ಬೆನ್‌ ಸ್ಟೋಕ್ಸ್‌ಗೆ ಸವಾಲೆಸೆಯಲು ಆಸೀಸ್ ಮಾರ್ಷ್‌ ಅವರನ್ನು ಕಣಕ್ಕಿಳಿಸಲು ಯೋಜಿಸಿದಂತಿದೆ.

'ದೀರ್ಘ ಸರಣಿಯ ಬಳಿಕ ನಮಗೆ ಹೆಚ್ಚುವರಿ ಬೌಲಿಂಗ್‌ನ ಅಗತ್ಯವಿದೆ ಅನ್ನಿಸಿದೆ. ಈ ಕಾರಣದಿಂದಾಗಿ ಟ್ರಾವಿಸ್ ಹೆಡ್‌ ಅವರು ಮುಂದಿನ ಪಂದ್ಯದಲ್ಲಿ ಆಡುತ್ತಿಲ್ಲ,' ಎಂದು ನಾಯಕ ಟಿಮ್ ಪೈನೆ ಕ್ರಿಕೆಟ್‌ ಡಾಟ್‌ ಕಾಮ್‌ ಡಾಟ್‌ ಯು ಜೊತೆ ಹೇಳಿಕೊಂಡಿದ್ದಾರೆ.

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಮಿಚ್ ಮಾರ್ಷ್, ಮ್ಯಾಥ್ಯೂ ವೇಡ್, ಟಿಮ್ ಪೈನ್ (ಸಿ, ವಿಕೆ), ಪ್ಯಾಟ್ ಕಮ್ಮಿನ್ಸ್, ಪೀಟರ್ ಸಿಡ್ಲ್‌, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಝಲ್‌ವುಡ್.

Story first published: Wednesday, September 11, 2019, 21:55 [IST]
Other articles published on Sep 11, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+