Ashes Series: ವೇಳಾಪಟ್ಟಿ, ನೇರಪ್ರಸಾರ, ಸಮಯ, ಹೆಡ್ ಟು ಹೆಡ್ ಮಾಹಿತಿ
ಭಾರತ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. 2ನೇ ಟೆಸ್ಟ್ ಪಂದ್ಯ ನ.22 ರಂದು ಆರಂಭವಾಗಲಿದೆ. ಇದೇ ದಿನ ಇನ್ನೊಂದು ಟೆಸ್ಟ್ ಸರಣಿಗೆ ಚಾಲನೆ ಸಿಗಲಿದೆ. ಈ ಟೆಸ್ಟ್ ಸರಣಿಯನ್ನು ಕಣ್ಣು ತುಂಬಿಕೊಳ್ಳಲು ವಿಶ್ವದ ಅಭಿಮಾನಿಗಳ ಬಳಗ ಕಾತುರದಿಂದ ಕಾಯುತ್ತಿದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಪ್ರತಿಷ್ಠಿತ ಆಶಸ್ ಸರಣಿ ಪರ್ತ್‌ನಲ್ಲಿ ಶನಿವಾರದಿಂದ ಆರಂಭವಾಗಲಿದೆ. ಈ ಸರಣಿಯನ್ನು ಕಣ್ಣು ತುಂಬಿಕೊಳ್ಳಲು ವಿಶ್ವದ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಆಶಸ್ ಟೆಸ್ಟ್ ಸರಣಿಯು 1877 ರಲ್ಲಿ ಪ್ರಾರಂಭವಾಯಿತು. ಅಂದಿನಿಂದ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಟೆಸ್ಟ್ ಪಂದ್ಯಗಳನ್ನು ಆಡಲು ಕಣಕ್ಕೆ ಇಳಿದಾಗಲೆಲ್ಲಾ ಈ ಸರಣಿಗೆ ಆಶಸ್ ಎಂದು ಕರೆಯುತ್ತಾರೆ. ಉಭಯ ತಂಡಗಳ ನಡುವಣ ಜಿದ್ದಾಜಿದ್ದು, ಸೋಲಲೇ ಬಾರದು ಎಂಬ ಹಠ ಅಭಿಮಾನಿಗಳ ಚಿತ್ತ ಕದ್ದಿದೆ. ಈ ಬಾರಿ ಆಶಸ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ದಶಕಗಳಿಂದ ಇಂಗ್ಲೆಂಡ್ ಆಸ್ಟ್ರೇಲಿಯಾ ನೆಲದಲ್ಲಿ ಒಂದೇ ಒಂದು ಟೆಸ್ಟ್ ಸರಣಿ ಗೆದ್ದಿಲ್ಲ. 2010-11ರ ಆಶಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ತಂಡವು ಆಸ್ಟ್ರೇಲಿಯಾದಲ್ಲಿ ಕೊನೆಯ ಬಾರಿಗೆ ಟೆಸ್ಟ್ ಸರಣಿಯನ್ನು ಗೆದ್ದಿತ್ತು.

ಎರಡೂ ತಂಡಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸುವ ಆಟಗಾರರು ಇದ್ದಾರೆ. ಹೀಗಾಗಿ ಈ ಪಂದ್ಯ ರೋಚಕತೆ ಹೆಚ್ಚಿಸಿದೆ. ಈ ವರೆಗೆ ಇಂಗ್ಲೆಂಡ್ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಡಿದ 185 ಪಂದ್ಯಗಳಲ್ಲಿ, 57 ಪಂದ್ಯಗಳನ್ನು ಗೆದ್ದಿದೆ. 99 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಅಲ್ಲದೆ 99 ಪಂದ್ಯ ಡ್ರಾದಲ್ಲಿ ಅಂತ್ಯವಾಗಿವೆ. ಒಟ್ಟಾರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಉಭಯ ತಂಡಗಳು ಒಟ್ಟು 361 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಇಂಗ್ಲೆಂಡ್ 112 ಪಂದ್ಯಗಳನ್ನು ಗೆದ್ದರೆ, ಆಸೀಸ್ 152 ಪಂದ್ಯ ಗೆದ್ದಿದೆ. 97 ಪಂದ್ಯ ಡ್ರಾದಲ್ಲಿ ಅಂತ್ಯವಾಗಿದೆ.
ಭಾರತದಲ್ಲಿ ಈ ಪಂದ್ಯವನ್ನು ವೀಕ್ಷಿಸುವುದು ಹೇಗೆ?
ಆಶಸ್ ಸರಣಿಯನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ. ಅಲ್ಲದೆ ಆನ್‌ಲೈನ್‌ನಲ್ಲಿ ಜೊಯೋ ಹಾಟ್‌ಸ್ಟಾರ್‌ನಲ್ಲಿ ನೇರವಾಗಿ ನೋಡಬಹುದು.
ಪಂದ್ಯದ ಟಾಸ್, ನಡೆಯುವ ಸಮಯ ಏನು?
ಭಾರತೀಯ ಕಾಲ ಮಾನದ ಪ್ರಕಾರ ಟಾಸ್ ಬೆಳಗ್ಗೆ 7.30ಕ್ಕೆ ನಡೆಯುತ್ತದೆ. ಅಲ್ಲದೆ ಪಂದ್ಯ 8ಕ್ಕೆ ಆರಂಭವಾಗಲಿದೆ.
ಆಶಸ್ ಸರಣಿಯ ವೇಳಾ ಪಟ್ಟಿ
ನ. 21 ರಿಂದ ನ.25, 1ನೇ ಟೆಸ್ಟ್, ಪರ್ತ್
ಡಿ.4 ರಿಂದ ಡಿ.8, 2ನೇ ಟೆಸ್ಟ್,ಗಬ್ಬಾ
ಡಿ.17 ರಿಂದ ಡಿ.21, 3ನೇ ಟೆಸ್ಟ್, ಅಡಿಲೇಡ್ ಓವಲ್,
ಡಿ.26 ರಿಂದ ಡಿ.30, 4ನೇ ಟೆಸ್ಟ್, ಮೆಲ್ಬೋರ್ನ್
ಜ.4 ರಿಂದ ಜ.8, 5ನೇ ಟೆಸ್ಟ್, ಸಿಡ್ನಿ
ಇಂಗ್ಲೆಂಡ್ ತಂಡ ದಶಕಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಆಶಸ್ ಸರಣಿಯನ್ನು ಗೆಲ್ಲುತ್ತದಾ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಇದಕ್ಕೆ ಜ.8 ರಂದು ಉತ್ತರ ಸಿಗುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications