ಆಶಸ್ ಸೋಲಿನಿಂದ ಆಘಾತಕ್ಕೊಳಗಾದ ಇಂಗ್ಲೆಂಡ್: 2ನೇ ಟೆಸ್ಟ್‌ಗೂ ಮುನ್ನ ಕಳವಳಕ್ಕೆ ಕಾರಣವಾಗಿದೆ 3 ಅಂಶಗಳು
ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಆಘಾತಕಾರಿಯಾಗಿ ಸೋಲು ಕಂಡಿದೆ. ಬ್ಯಾಸ್‌ಬಾಲ್‌ಶೈಲಿಯಲ್ಲಿ ಆಕ್ರಮಣಕಾರಿಯಾಗಿ ಆಡಿದ ಇಂಗ್ಲೆಂಡ್ ತಂಡಕ್ಕೆ ಮೊದಲ ಪಂದ್ಯದಲ್ಲಿ ಯಶಸ್ವು ದೊರೆಯಲಿಲ್ಲ. ಗೆಲ್ಲುವ ಅವಕಾಶ ಕೊನೆಯ ಹಂತದವರೆಗೆ ಇದ್ದರೂ ಕೊನೆಯ ಎರಡು ವಿಕೆಟ್‌ಗಳನ್ನು ಕಬಳಿಸಲು ಸಾಧ್ಯವಾಗದ ಕಾರಣ ಮೊದಲ ಪಂದ್ಯದಲ್ಲಿ ಶರಣಾಗಿದೆ.
ಇದೀಗ ಎರಡನೇ ಪಂದ್ಯದಲ್ಲಿ ಮತ್ತಷ್ಟು ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯುವ ಆತ್ಮವಿಶ್ವಾಸವನ್ನು ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಸೇರಿದಂತೆ ಇನ್ನೂ ಕೆಲ ಆಟಗಾರರು ವ್ಯಕ್ತಪಡಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ತಂಡಕ್ಕೆ ಕೆಲ ವಿಚಾರಗಳು ಕಳವಳ ಮೂಡಿಸಿರುವುದು ಸುಳ್ಳಲ್ಲ. ಹಾಗಾದರೆ ಇಂಗ್ಲೆಂಡ್ ತಂಡದ ಕಳವಳಕ್ಕೆ ಕಾರಣವಾದ ಆ ಮೂರು ಅಂಶಗಳು ಯಾವುದು? ಇಲ್ಲಿದೆ ಮಾಹಿತಿ.

ಕೈಬೆರಳಿನ ಗಾಯಕ್ಕೆ ತುತ್ತಾದ ಮೊಯೀನ್ ಅಲಿ
ಟೆಸ್ಟ್ ನಿವೃತ್ತಿಯಿಂದ ವಾಪಾಸಾಗಿ ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ ಆಡಿದ್ದ ಮೊಯೀನ್ ಅಲಿ ಬೆರಳಿನ ಗಾಯಕ್ಕೆ ತುತ್ತಾಗಿದ್ದಾರೆ. ಜಾಕ್ ಲೀಚ್ ಗಾಯದ ಕಾರಣದಿಂದಾಗಿ ತಂಡದ ಆಡುವ ಬಳಗದಕ್ಕು ಸ್ಥಾನವನ್ನು ಪಡೆದ ಮೊಯೀನ್ ಅಲಿ ಕೈಬೆರಳಿನ ಗಾಯಕ್ಕೆ ತುತ್ತಾಗಿರುವುದು ತಂಡಕ್ಕೆ ಮತ್ತೊಂದು ತಲೆನೋವು ತಂದಿಕ್ಕಿದೆ. ಮುಂದಿನ ವಾರ ಎರಡನೇ ಪಂದ್ಯ ಆರಂಬವಾಗಲಿದ್ದು ಆ ಪಂದ್ಯಕ್ಕೆ ಮೊಯೀನ್ ಅಲಿ ಸಿದ್ಧವಾಗುವ ಸಾರ್ಧಯತೆ ಕಡಿಮೆಯಿದೆ ಎನ್ನಲಾಗಿದೆ. ಇದು ಇಂಗ್ಲೆಂಡ್ ತಂಡದ ಮೊದಲ ಕಳವಳ.
ಜಾನಿ ಬೈರ್‌ಸ್ಟೋವ್ ವಿಕೆಟ್ ಕೀಪಿಂಗ್‌ನಿಂದ ಹಿನ್ನಡೆಯ ಆತಂಕ
ಎಡ್ಜ್‌ಬಾಸ್ಟನ್‌ನ್ ಪಿಚ್ ಬೌಲರ್‌ಗಳಿಗೆ ಹೆಚ್ಚು ಅನುಕೂಲವನ್ನುಂಟು ಮಾಡುವಂತಿರಲಿಲ್ಲ. ಹಾಗಿದ್ದರೂ ಕೆಲ ಬೌಲರ್‌ಗಳು ಕೆಲ ಅವಕಾಶಗಳನ್ನು ಮಾಡಿಕೊಟ್ಟಿದ್ದರೂ ಫಿಲ್ಟಿಂಗ್ ವಿಭಾಗ ಕೆಲ ಅವಕಾಶಗಳನ್ನು ಕೈಚೆಲ್ಲಿತ್ತು. ಆದರಲ್ಲೂ ಮೊದಲ ನಾಲ್ಕು ದಿನಗಳಲ್ಲಿ ಪ್ರಮುಖವಾಗಿ ವಿಕೆಟ್ ಕೀಪರ್ ಬ್ಯಾಟರ್ ಜಾನಿ ಬೈರ್‌ಸ್ಟೋವ್ ಕೆಲ ಕ್ಯಾಚ್‌ಗಳನ್ನು ಕೈಬಿಡುವ ಮೂಲಕ ತಂಡದ ಹಿನ್ನಡೆಗೆ ಕಾರಣವಾದರು. ಸುದೀರ್ಘ ಮಾದರಿಗೆ ಬೈರ್‌ಸ್ಟೋವ್ ಸ್ಪೆಶಲಿಸ್ಟ್ ವಿಕೆಟ್ ಅಲ್ಲದಿರುವುದು ಹಾಗೂ ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಕಾರಣ ಬೈರ್‌ಸ್ಟೋವ್ ಅವರ ವಿಕೆಟ್ ಕೀಪಿಂಗ್ ಕೂಡ ಕಳವಳಕ್ಕೆ ಕಾರಣವಾಗಿದೆ.
ಕಳಗುಂದಿದಂತಿದೆ ಇಂಗ್ಲೆಂಡ್ ವೇಗದ ಬೌಲಿಂಗ್
ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಕಳವಳಕ್ಕೆ ಕಾರಣವಾದ ಮತ್ತೊಂದು ಅಂಶವೆಂದರೆ ಅದು ಬೌಲಿಂಗ್ ವಿಭಾಗದ ಪ್ರದರ್ಶನ. ವೇಗದ ಬೌಲಿಂಗ್ ವಿಭಾಗ ಆಸಿಸ್‌ನ ಬಲಾಢ್ಯ ಬ್ಯಾಟಿಂಗ್ ವಿಭಾಗಕ್ಕೆ ಸಮರ್ಥವಾಗಿ ಎದಿರೇಟು ನೀಡಲು ವಿಫಲವಾಗುತ್ತಿದೆ. ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್ ಹಾಗೂ ರಾಬಿನ್ಸನ್ ಅವರಂತಾ ವೇಗಿಗಳಿದ್ದರೂ ಆಸಿಸ್ ಬ್ಯಾಟಿಂಗ್ ವಿಭಾಗವನ್ನು ನಿರೀಕ್ಷಿತ ಮಟ್ಟದಲ್ಲಿ ಹಿಮ್ಮೆಟ್ಟಿಸಲು ವಿಫಲವಾಗುತ್ತಿದೆ. ಇದು ಕೂಡ ತಂಡದ ಕಳವಳಕ್ಕೆ ಮತ್ತೊಂದು ಕಾರಣವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications