For Quick Alerts
ALLOW NOTIFICATIONS  
For Daily Alerts
 

Ashes 2023: ಇಂಗ್ಲೆಂಡ್ vs ಆಸ್ಟ್ರೇಲಿಯಾ ಆಶಸ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ 5 ಬ್ಯಾಟರ್‌ಗಳು

ಶುಕ್ರವಾರ, ಜೂನ್ 16ರಿಂದ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ 2023ರ ಆಶಸ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ಆರಂಭವಾಗಿದೆ.

ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಮೊದಲು ಬೌಲಿಂಗ್ ಮಾಡುತ್ತಿದೆ.

Ashes 2023: 5 Batsmen With All-time Highest Run-scorers In England vs Australia Ashes

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌ನ ಎರಡೂ ಹಳೆಯ ತಂಡಗಳು ಆಶಸ್ ಟೆಸ್ಟ್ ಸರಣಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗಿದ್ದು, ಒಬ್ಬರ ಮೇಲೆ ಮತ್ತೊಬ್ಬರು ಸವಾರಿ ಮಾಡಲು ಯಾವಾಗಲೂ ಎದುರು ನೋಡುತ್ತಿರುತ್ತಾರೆ.

ಇತ್ತೀಚಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ 209 ರನ್‌ಗಳ ಅದ್ಭುತ ಜಯದೊಂದಿಗೆ ಆಸ್ಟ್ರೇಲಿಯಾ ತಂಡ ಬೀಗುತ್ತಿದೆ. ಇದೀಗ ಐದು ಟೆಸ್ಟ್‌ಗಳ ಸರಣಿಯಲ್ಲಿ ಹೆಚ್ಚಿನ ಆತ್ಮವಿಶ್ವಾಸದೊಂದಿಗೆ ಆಡುತ್ತಿದೆ.

ಇನ್ನು ಕಳೆದ ವರ್ಷ ನಾಯಕ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕಲಮ್ ಸಂಯೋಜನೆಯಿಂದ ಕ್ರಿಕೆಟ್‌ನ ಆಕ್ರಮಣಕಾರಿ ನೀತಿಯೊಂದಿಗೆ 13 ಟೆಸ್ಟ್‌ ಪಂದ್ಯಗಳಲ್ಲಿ 11 ಗೆಲುವುಗಳೊಂದಿಗೆ ಇಂಗ್ಲೆಂಡ್ ತಂಡ ಗಮನ ಸೆಳೆಯುವ ಪ್ರದರ್ಶನ ನೀಡಿದೆ.

Ashes 2023: 5 Batsmen With All-time Highest Run-scorers In England vs Australia Ashes

ಆಶಸ್ ಸರಣಿ ಗೆಲ್ಲುವುದು ಎರಡೂ ತಂಡಗಳಿಗೆ ನಿರ್ಣಾಯಕ ಮತ್ತು ಪ್ರತಿಷ್ಠೆಯಾಗಿದೆ. ಪ್ರತಿ ಆಟಗಾರನ ವೃತ್ತಿಜೀವನದಲ್ಲಿ ಒಂದು ಅದ್ಭುತ ಇನ್ನಿಂಗ್ಸ್ ದೊಡ್ಡ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ನಂಬಲಾಗಿದೆ. ಈ ಪ್ರತಿಷ್ಠಿತ ಸರಣಿಯಲ್ಲಿ ಹೆಚ್ಚಿನ ರನ್ ಗಳಿಸುವುದು ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ಆತ್ಮವಿಶ್ವಾಸವನ್ನು ನೀಡುತ್ತದೆ.

ಆಗಸ್ಟ್ 29, 1882ರಂದು ಪರಿಚಯಿಸಿದಾಗಿನಿಂದ ಆಶಸ್ ಟೆಸ್ಟ್ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಐದು ಆಟಗಾರರ ಬಗ್ಗೆ ತಿಳಿದುಕೊಳ್ಳೋಣ.

1) ಡೊನಾಲ್ಡ್ ಬ್ರಾಡ್ಮನ್ - ಆಸ್ಟ್ರೇಲಿಯಾ

ಡಾನ್ ಬ್ರಾಡ್ಮನ್ ಎಂದೇ ಚಿರಪರಿಚಿತವಾಗಿರುವ ಆಸ್ಟ್ರೇಲಿಯಾದ ದಂತಕಥೆ ಸರ್ ಡೊನಾಲ್ಡ್ ಬ್ರಾಡ್ಮನ್ ಬ್ಯಾಟಿಂಗ್ ಮಾಂತ್ರಿಕನಾಗಿದ್ದರು. 1930ರ ಆಶಸ್ ಸರಣಿಯಲ್ಲಿ ಡಾನ್ ಬ್ರಾಡ್‌ಮನ್ ಅವರ 974 ರನ್‌ಗಳ ದಾಖಲೆಯು ಟೆಸ್ಟ್ ಸರಣಿಯಲ್ಲಿ ಗಳಿಸಿದ ಅತಿ ಹೆಚ್ಚು ರನ್ ಆಗಿದೆ. 93 ವರ್ಷಗಳ ನಂತರವೂ ಈ ದಾಖಲೆ ಮುರಿಯಲು ಇನ್ನೂ ಸಾಧ್ಯವಾಗಿಲ್ಲ.

ಡಾನ್ ಬ್ರಾಡ್‌ಮನ್ ತಮ್ಮ 29 ಟೆಸ್ಟ್ ಶತಕಗಳಲ್ಲಿ ಇಂಗ್ಲೆಂಡ್ ವಿರುದ್ಧ 19 ಶತಕ ಬಾರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಆಶಸ್‌ನಲ್ಲಿ 89.78 ಸರಾಸರಿಯಲ್ಲಿ 5,028 ರನ್‌ಗಳನ್ನು ಗಳಿಸಿದ ಏಕೈಕ ಆಟಗಾರ. ಅವರ ಈ ದಾಖಲೆಯನ್ನು ಮುರಿಯುವುದು ಅಸಾಧ್ಯವೆನಿಸಿದೆ.

2) ಜ್ಯಾಕ್ ಹಾಬ್ಸ್ - ಇಂಗ್ಲೆಂಡ್

ಆಶಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಮತ್ತು ಏಕೈಕ ಇಂಗ್ಲೆಂಡ್ ಆಟಗಾರ ಜ್ಯಾಕ್ ಹಾಬ್ಸ್. ಅವರು ಸರ್ರೆ ಮತ್ತು ಇಂಗ್ಲೆಂಡ್‌ ತಂಡಕ್ಕಾಗಿ ತಮ್ಮ ರೆಡ್-ಬಾಲ್ ಕ್ರಿಕೆಟ್ ವೃತ್ತಿಜೀವನದಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ.

ಜ್ಯಾಕ್ ಹಾಬ್ಸ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 61,760 ರನ್ ಮತ್ತು 199 ಶತಕಗಳೊಂದಿಗೆ ತಮ್ಮ ಅದ್ಭುತ ಕ್ರಿಕೆಟ್ ವೃತ್ತಿಜೀವನವನ್ನು ಮುಗಿಸಿದರು. 1908ರಿಂದ 1930ರವರೆಗಿನ 61 ಟೆಸ್ಟ್‌ಗಳಲ್ಲಿ 5,410 ರನ್‌ಗಳನ್ನು ಗಳಿಸಿದರು.

ಜ್ಯಾಕ್ ಹಾಬ್ಸ್ ಆಸ್ಟ್ರೇಲಿಯಾ ವಿರುದ್ಧ ಆಶಸ್‌ನ 41 ಟೆಸ್ಟ್ ಪಂದ್ಯಗಳ 71 ಇನ್ನಿಂಗ್ಸ್‌ಗಳಲ್ಲಿ 54.26ರ ಸರಾಸರಿಯಲ್ಲಿ 12 ಶತಕಗಳನ್ನು ಒಳಗೊಂಡಂತೆ 3,636 ರನ್ ಗಳಿಸಿದ್ದಾರೆ. ಈ ಲೆಜೆಂಡ್ ಆಟಗಾರ 50 ವರ್ಷ ದಾಟಿದ ನಂತರವೂ ರನ್ ಗಳಿಸಿದ್ದಾರೆ ಎಂಬುದು ವಿಶೇಷ.

3) ಅಲನ್ ಬಾರ್ಡರ್ - ಆಸ್ಟ್ರೇಲಿಯಾ

ಆಸ್ಟ್ರೇಲಿಯಾದ ಅಲನ್ ಬಾರ್ಡರ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಪಂದ್ಯಗಳನ್ನು ಗೆಲ್ಲುವುದನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅವರು 28 ಆಶಸ್ ಟೆಸ್ಟ್‌ ಪಂದ್ಯಗಳಲ್ಲಿ ಆಸ್ಟ್ರೇಲಿಯಾದ ನಾಯಕರಾಗಿದ್ದರು ಮತ್ತು 13 ಪಂದ್ಯಗಳನ್ನು ಗೆದ್ದರು. ಹೀಗಾಗಿ ಅಲನ್ ಬಾರ್ಡರ್ ಅವರನ್ನು ಆಶಸ್‌ನ ಅತ್ಯಂತ ಯಶಸ್ವಿ ನಾಯಕ ಎಂದು ಗುರುತಿಸಲಾಗುತ್ತದೆ.

ಅಲನ್ ಬಾರ್ಡರ್ 42 ಟೆಸ್ಟ್‌ ಪಂದ್ಯಗಳಲ್ಲಿ 8 ಶತಕ ಹಾಗೂ 21 ಅರ್ಧಶತಕಗಳೊಂದಿಗೆ 56.31 ಸರಾಸರಿಯಲ್ಲಿ 3,548 ರನ್‌ ಗಳಿಸಿದ್ದರು. ಇಂಗ್ಲೆಂಡ್ ವಿರುದ್ಧ 1993ರ ಆಶಸ್‌ನ ಹೆಡಿಂಗ್ಲಿ ಟೆಸ್ಟ್‌ ಪಂದ್ಯದಲ್ಲಿ ಅಜೇಯ 200 ರನ್ ಗಳಿಸಿದ್ದರು.

4) ಸ್ಟೀವ್ ವಾ - ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ತಂಡದ ಮಧ್ಯಮ ಕ್ರಮಾಂಕದಲ್ಲಿ ಸ್ಟೀವ್ ವಾ ಆಧಾರಸ್ತಂಭ ಹಾಗೂ ಧೈರ್ಯಶಾಲಿ ಬ್ಯಾಟರ್ ಆಗಿದ್ದರು. ಅವರು ಎದುರಾಳಿ ಬೌಲರ್‌ಗಳನ್ನು ಕೆರಳಿಸುತ್ತಿದ್ದರು. ಸ್ಟೀವ್ ವಾ ಆಸ್ಟ್ರೇಲಿಯಾದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದರು ಮತ್ತು 10,000 ಟೆಸ್ಟ್ ರನ್‌ಗಳ ಹೆಗ್ಗುರುತನ್ನು ದಾಟಿದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ.

ಸ್ಟೀವ್ ವಾ 1986ರಿಂದ 2003ರವರೆಗೆ ಇಂಗ್ಲೆಂಡ್ ವಿರುದ್ಧ ಆಡಿದ 45 ಟೆಸ್ಟ್‌ ಪಂದ್ಯಗಳಲ್ಲಿ 3,173 ರನ್ ಗಳಿಸಿದ್ದಾರೆ. ಅವರು ಬಾರಿಸಿದ 32 ಟೆಸ್ಟ್ ಶತಕಗಳಲ್ಲಿ 10 ಇಂಗ್ಲೆಂಡ್ ವಿರುದ್ಧ ಬಂದಿವೆ. ಇಂಗ್ಲೆಂಡ್ ವಿರುದ್ಧ ಅವರದೆ ನೆಲದಲ್ಲಿ ಆಡಿದ 22 ಟೆಸ್ಟ್‌ಗಳಲ್ಲಿ 74.22ರ ಸರಾಸರಿಯನ್ನು ಹೊಂದಿದ್ದಾರೆ.

5) ಸ್ಟೀವ್ ಸ್ಮಿತ್ - ಆಸ್ಟ್ರೇಲಿಯಾ

ಪ್ರಸ್ತುತ ಆಸ್ಟ್ರೇಲಿಯಾ ಟೆಸ್ಟ್ ತಂಡದ ಉಪನಾಯಕನಾಗಿರುವ ಸ್ಟೀವ್ ಸ್ಮಿತ್ ಅವರು ಎರಡೂ ತಂಡಗಳಿಂದ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಅಗ್ರ ಐದು ಆಟಗಾರರಲ್ಲಿ ಕಾಣಿಸಿಕೊಂಡ ಏಕೈಕ ಸಕ್ರಿಯ ಆಟಗಾರ. ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಮಾಡುವುದನ್ನು ಸ್ಟೀವ್ ಸ್ಮಿತ್ ಯಾವಾಗಲೂ ಪ್ರೀತಿಸುತ್ತಾರೆ.

ಸ್ಟೀವ್ ಸ್ಮಿತ್ ವೃತ್ತಿಜೀವನದ 97 ಟೆಸ್ಟ್‌ ಪಂದ್ಯಗಳಲ್ಲಿ 60.04ರ ಸರಾಸರಿಯಲ್ಲಿ 8,947 ರನ್‌ ಗಳಿಸಿದ್ದಾರೆ. ಸ್ಟೀವ್ ಸ್ಮಿತ್ ಇಂಗ್ಲೆಂಡ್ ವಿರುದ್ಧ ಆಶಸ್‌ನಲ್ಲಿ 3,044 ರನ್ ಗಳಿಸಿದ್ದಾರೆ. 2017-18ರಲ್ಲಿ 687 ರನ್ ಮತ್ತು 2019ರಲ್ಲಿ 774 ರನ್ ಸತತವಾಗಿ ಆಶಸ್ ಸರಣಿಯಲ್ಲಿ ಸ್ಟೀವ್ ಸ್ಮಿತ್ 500ಕ್ಕೂ ಹೆಚ್ಚು ರನ್ ಗಳಿಸಿದ ಬ್ಯಾಟರ್ ಎನಿಸಿದ್ದಾರೆ.

Story first published: Friday, June 16, 2023, 17:11 [IST]
Other articles published on Jun 16, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+