ಆಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋಲಿನ ಸುಳಿಯಲ್ಲಿದೆ. ಮೊದಲೆರಡು ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿ ಬರೊಬ್ಬರಿ ಎರಡು ದಶಕಗಳ ಬಳಿಕ ಇಂಗ್ಲೆಂಡ್ ನೆಲದಲ್ಲಿ ಆಶಸ್ ಸರಣಿ ಗೆಲ್ಲುವ ಕನಸು ಕಾಣುತ್ತಿದ್ದ ಆಸಿಸ್ ಪಡೆಗೆ ಇಂಗ್ಲೆಂಡ್ ಅದ್ಭುತವಾದ ತಿರುಗೇಟು ನೀಡಿದೆ. ಲೀಡ್ಸ್‌ನಲ್ಲಿ ನಡೆದ ಮೂರನೇ ಪಂದ್ಯ ಗೆದ್ದ ಬಳಿಕ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿಯೂ ಗೆಲುವಿನ ಸನಿಹದಲ್ಲಿದೆ ಇಂಗ್ಲೆಂಡ್ ಪಡೆ.
ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಅಂತರದ ಹಿನ್ನಡೆ ಅನುಭವಿಸಿದ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಆಸ್ಟ್ರೇಲಿಯಾ ತಂಡ ಮೂರನೇ ದಿನದಾಟದ ಆರಂಭದಲ್ಲಿಯೇ ಭಾರೀ ಹಿನ್ನಡೆ ಕಂಡಿದೆ. ಮೂರನೇ ದಿನದಾಟದ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ಅಗ್ರ ಕ್ರಮಾಂಕದ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಉಸ್ಮಾನ್ ಖವಾಜ, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಔಟಾಗಿದ್ದು 113 ರನ್‌ಗಳನ್ನು ಗಳಿಸಿ ನಾಲ್ಕನೇ ದಿನದಾಟ ಮುಂದುವರಿಸಿದೆ.

Live ಸ್ಕೋರ್ ಹೀಗಿದೆ
ಈಗಾಗಲೇ ಇಂಗ್ಲೆಂಡ್ ಪರವಾಗಿ ಮಾರ್ಕ್ ವುಡ್ ಅಬ್ಬರದ ಬೌಲಿಂಗ್ ನಡೆಸಿ ನಾಲ್ವರ ಪೈಕಿ ಮೂವರನ್ನು ಔಟ್ ಮಾಡಿದ್ದು ಉಳಿದ ಒಂದು ವಿಕೆಟ್ ಕ್ರಿಸ್ ವೋಕ್ಸ್ ಪಾಲಾಗಿದೆ. ಹೀಗಾಗಿ ನಾಲ್ಕನೇ ದಿನದಾಟ ಆಸಿಸ್ ಪಡೆಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ. ಮಾರ್ನಸ್ ಲ್ಯಾಬುಶೇನ್ ಹಾಗೂ ಮಿಚೆಲ್ ಮಾರ್ಶ್ ಕ್ರೀಸ್‌ನಲ್ಲಿದ್ದು ಈ ಇಬ್ಬರ ಮೇಲೆ ಆಸಿಸ್ ತಂಡ ನಿರೀಕ್ಷೆಯಿಟ್ಟುಕೊಂಡಿದೆ.
ಮೂರನೇ ದಿನದಾಟದ ಅಂತ್ಯದಲ್ಲಿ ಆಸ್ಟ್ರೇಲಿಯಾ ಇನ್ನು ಕೂಡ 162 ರನ್‌ಗಳ ಅಂತರದ ಹಿನ್ನಡೆಯಲ್ಲಿದ್ದ ಕಾರಣ ಈ ಪಂದ್ಯದಲ್ಲಿ ಈ ಪಂದ್ಯದಲ್ಲಿ ಸಾಧ್ಯವಾದಷ್ಟು ಬೇಗನೆ ಗೆಲುವು ಸಾಧಿಸುವ ಹುರುಪಿನೊಂದಿಗೆ ಇಂಗ್ಲೆಂಡ್ ತಂಡ ಕಣಕ್ಕಿಳಿಯಲಿದೆ. ನಾಲ್ಕನೇ ದಿನದಾಟ ಆರಂಭಕ್ಕೆ ಮಳೆ ಅಡ್ಡಿಯುಂಟು ಮಾಡಿರುವ ಕಾರಣ ಪಂದ್ಯ ಆರಂಭವಾಗುವುದು ತಡವಾಗಿದೆ.
ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಮೊಯಿನ್ ಅಲಿ, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
ಬೆಂಚ್: ಆಲಿ ರಾಬಿನ್ಸನ್, ಡೇನಿಯಲ್ ಲಾರೆನ್ಸ್, ಜೋಶ್ ಟಂಗ್
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್
ಬೆಂಚ್: ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್, ಮಾರ್ಕಸ್ ಹ್ಯಾರಿಸ್, ಮೈಕೆಲ್ ನೆಸರ್, ಜೋಶ್ ಇಂಗ್ಲಿಸ್