Ashes 2023: ಕಮ್‌ಬ್ಯಾಕ್‌ನತ್ತ ಆಸ್ಟ್ರೇಲಿಯಾ: 4ನೇ ದಿನದಾಟಕ್ಕೆ ಮಳೆ ಅಡ್ಡಿ: ಕುತೂಹಲ ಮೂಡಿಸಿದೆ ಕೊನೆಯ ದಿನದಾಟ
ಇಂಗ್ಲೆಂಡ್ ತಂಡದ ಅಬ್ಬರದ ಬ್ಯಾಟಿಂಗ್ ಹಾಗೂ ಮೂರನೇ ದಿನ ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಆಟಗಾರರ ವೈಫಲ್ಯದ ಕಾರಣದಿಂದಾಗಿ ಸರಣಿಯ ನಾಲ್ಕನೇ ಪಂದ್ಯವನ್ನು ಇಂಗ್ಲೆಂಡ್ ಸುಲಭವಾಗಿ ಗೆಲ್ಲುವ ಲಕ್ಷಣಗಳು ಕಾಣಿಸಿದ್ದವು ಆದರೆ ಈ ಪಂದ್ಯದ ನಾಲ್ಕನೇ ದಿನದಾಟಕ್ಕೆ ಮಳೆಯ ಅಡ್ಡಿ ಪಂದ್ಯವನ್ನು ಕೊನೆಯ ದಿನದಾಟದಲ್ಲಿ ಕುತೂಹಲ ಮೂಡಿಸುವಂತೆ ಮಾಡಿದೆ.
ಈ ಪಂದ್ಯವನ್ನು ಆಸ್ಟ್ರೇಲಿಯಾ ಗೆಲ್ಲುವ ಮಾತು ಬಹಳ ದೂರವಿದ್ದರೂ ಸರಣಿಯಲ್ಲಿ ಡ್ರಾ ಸಾಧಿಸುವ ಅವಕಾಶವೇನಾದರೂ ಇದೆಯಾ ಎಂಬುದು ಈ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಡ್ರಾ ಸಾಧಿಸಬೇಕಿದ್ದರೂ ಆಸ್ಟ್ರೇಲಿಯಾ ಕೊನೆಯ ದಿನದಾಟದಲ್ಲಿ ಸಾಕಷ್ಟು ಪರಿಶ್ರಮ ಪಡಬೇಕಿದೆ ಎಂಬುದು ಅಷ್ಟೇ ನಿಜ. ಹೀಗಾಗಿ ಕೊನೆಯ ದಿನದಾಟದಲ್ಲಿ ಏನಾಗಲಿದೆ ಎಂಬುದು ಕ್ರಿಕೆಟ್ ಅಭಿಮಾನಿಗಳ ಕಾತರ ಹೆಚ್ಚುವಂತೆ ಮಾಡಿದೆ.

ಆಸಿಸ್ ಪಡೆಗೆ ಆಸರೆಯಾದ ಮಾರ್ನಸ್
ಇನ್ನು ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆಸರೆಯಾಗಿದ್ದು ಮಾರ್ನಸ್ ಲ್ಯಾಬುಶೇನ್. ಮೂರನೇ ದಿನದಾಟದಲ್ಲಿ 108 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಆಸಿಸ್ ತಂಡಕ್ಕೆ ಮಾರ್ನಸ್ ಆಧಾರವಾದರು. ಈ ಸರಣಿಯುದ್ದಕ್ಕೂ ವೈಫಲ್ಯ ಕಂಡಿದ್ದ ಅವರು ಈ ಇನ್ನಿಂಗ್ಸ್‌ನಲ್ಲಿ 173 ಎಸೆತಗಳನ್ನು ಎದುರಿಸಿ 111 ರನ್‌ಗಳ ಅಮೂಲ್ಯ ಕೊಡುಗೆ ನೀಡಿ ವಿಕೆಟ್ ಕಳೆದುಕೊಂಡಿದ್ದಾರೆ.
ಇನ್ನು ಮಿಚೆಲ್ ಮಾರ್ಶ್ ಹಾಗೂ ಕ್ಯಾಮರೂನ್ ಗ್ರೀನ್ ಕ್ರೀಸ್ ಕಾಯ್ದುಕೊಂಡಿದ್ದಾರೆ. ಮಳೆ ಅಡ್ಡಿಯುಂಟು ಮಾಡಿರುವ ಕಾರಣ ನಾಲ್ಕನೇ ದಿನ ಆಟಕ್ಕೆ ಹೆಚ್ಚು ಅವಕಾಶ ದೊರೆಯಲಿಲ್ಲ. ಮಾರ್ಶ್ 31 ರನ್‌ಗಳಿಸಿದ್ದು ಗ್ರೀನ್ 3 ರನ್‌ಗಳಿಸಿ ಕೊನೆಯ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ತಂಡ 214 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದು ಕೊನೆಯ ದಿನ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.
ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಮೊಯಿನ್ ಅಲಿ, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
ಬೆಂಚ್: ಆಲಿ ರಾಬಿನ್ಸನ್, ಡೇನಿಯಲ್ ಲಾರೆನ್ಸ್, ಜೋಶ್ ಟಂಗ್
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್
ಬೆಂಚ್: ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್, ಮಾರ್ಕಸ್ ಹ್ಯಾರಿಸ್, ಮೈಕೆಲ್ ನೆಸರ್, ಜೋಶ್ ಇಂಗ್ಲಿಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications