For Quick Alerts
ALLOW NOTIFICATIONS  
For Daily Alerts
 

ನಮ್ಮ ನಿಲುವು ಸ್ಪಷ್ಟ: ಸೋಲಿನ ಬಳಿಕವೂ ಆಸಿಸ್‌ಗೆ ಎಚ್ಚರಿಕೆ ನೀಡಿದ ಬೆನ್ ಸ್ಟೋಕ್ಸ್

ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಇಂಗ್ಲೆಂಡ್‌ನ ನೂತನ ಬ್ಯಾಸ್‌ಬಾಲ್ ಆಟದಶೈಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ವಿಫಲವಾಗಿದೆ. ಇದೀಗ ಈ ಬಗ್ಗೆ ವಿಮರ್ಶೆಗಳು ಚರ್ಚೆಗಳು ಕುಡ ಆರಂಭವಾಗಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮಾತನಾಡಿದ್ದು ಆಶಸ್ ಸರಣಿಯ ಉಳಿದ ಪಂದ್ಯಗಳಲ್ಲಿಯೂ ತಮ್ಮ ನಿಲುವನ್ನು ಬದಲಾಯಿಸುವುದಿಲ್ಲ. ಇಏ ರೀತಿಯ ಆಟದ ಶೈಲಿಯನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.

ನಾಲ್ಕನೇ ಇನ್ನಿಂಗ್ಸ್‌ನಲ್ಲಿ 281 ರನ್‌ಗಳನ್ನು ರಕ್ಷಿಸಿಕೊಳ್ಳುವ ಸವಾಲು ಪಡೆದ ಇಂಗ್ಲೆಂಡ್ ತಂಡ ಕೊನೆಯ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡ 227 ರನ್‌ಗಳನ್ನು ಗಳಿಸಿದ್ದಾಗ 8 ವಿಕೆಟ್‌ಗಳನ್ನು ಕಬಳಿಸಿತ್ತು. ಆದರೆ ನಂತರ ಜೊತೆಯಾದ ಪ್ಯಾಟ್ ಕಮ್ಮಿನ್ಸ್ ಹಾಗೂ ನಾಥನ್ ಲಿಯಾನ್ ಜೋಡಿಯನ್ನು ಬೇರ್ಪಡಿಸಲು ಇಂಗ್ಲೆಂಡ್ ಬೌಲರ್‌ಗಳು ವಿಫಲವಾದರು. ಈ ಜೋಡಿ 55 ರನ್‌ಗಳ ಜೊತೆಯಾಟ ನೀಡುವ ಮೂಲಕ ಆಸ್ಟ್ರೇಲಿತಾ ತಂಡ ಈ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಲು ಕಾರಣವಾದರು.

Ashes 2023: Ben stokes reaction after 1st test defeat send warning to Australia

"ಐದನೇ ದಿನದ ಅಂತ್ಯಕ್ಕೆ ಆಟವನ್ನು ಕೊಂಡೊಯ್ಯಲು ಸಾಧ್ಯವಾಗಿದ್ದು ತುಂಬಾ ಹೆಮ್ಮೆ. ಇಲ್ಲಿ ಎಲ್ಲಾ ಭಾವನೆಗಳು ಇತ್ತು. ಸಾಕಷ್ಟು ಋರಿಳಿತಗಳು ಇದ್ದವು. ನಾವು ಎಂದಿಗೂ ಮರೆಯಲು ಸಾಧ್ಯವಾಗದ ಮತ್ತೊಂದು ಪಂದ್ಯ ಇದಾಗಿದೆ. ನಾವು ಬಯಸುವುದು ಕೂಡ ಅದನ್ನೇ. ಉತ್ತಮ ಕ್ಷಣಗಳ ಭಾಗವಾಗಿರಬೇಕು ಮತ್ತು ಈ ಆಟವನ್ನು ನೋಡುವ ಅಭಿಮಾನಿಗಳು ಆಸನದ ತುದಿಗಳಲ್ಲಿ ಕುಳಿತು ನೋಡುವಂತಾಗಬೇಕು. ಆಶಸ್ ಸರಣಿಯ ಮುಂದಿನ ನಾಲ್ಕು ಪಂದ್ಯಗಳಿಗೆ ಇನ್ನೂ ಹೆಚ್ಚಿನ ಜನರ ಗಮನವನ್ನು ಸೆಳೆಯುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಬಯಸುತ್ತೇನೆ" ಎಂದಿದ್ದಾರೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್.

"ಸೋಲು ಅಂದರೆ ಅದು ಸೋಲು. ಆದರೆ ನಾವು ಹೇಗೆ ಕಾರ್ಯನಿರ್ವಹಿಸಲಿದ್ದೇವೆ ಎಂದು ಈಗಾಗಲೇ ಹೇಳಿದ್ದೇವೆ. ಸೋಲಿನಿಂದ ನೋವುಂಟಾಗುತ್ತದೆ ಮತ್ತು ಗೆಲ್ಲುವುದು ಒಂದು ಅದ್ಭುತ ಭಾವನೆ. ಇದು ಸರಿಯಾದ ಸಮಯ ಎಂದುಕೊಂಡು ನಾವು ಮುಂದುವರಿಯುತ್ತೇವೆ. ಈ ರೀತಿಯ ಫಲಿತಾಂಶಗಳ ಮೂಲಕ ನಮ್ಮ ವಿರುದ್ಧ ಫಲಿತಾಂಗಳು ಬಂದಾಗಲೂ ಅದರ ಬಗ್ಗೆ ದೂರುವುದಿಲ್ಲ" ಎಂದು ಪಂದ್ಯ ಮುಕ್ತಾಯದ ಬಳಿಕದ ಕಾ್ಯಕ್ರಮದಲ್ಲಿ ಬೆನ್ ಸ್ಟೋಕ್ಸ್ ಮಾತನಾಡುತ್ತಾ ಪ್ರತಿಕ್ರಿಯಿಸಿದ್ದಾರೆ.

ಇನ್ನು ಈ ಪಂದ್ಯದ ಮೊದಲ ದಿನದಾಟದಲ್ಲಿ ಜೋ ರೂಟ್ ಶತಕ ಸಿಡಿಸಿ ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿರುವಾಗ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸನ್ನು ಎಂಟು ವಿಕೆಟ್ ನಷ್ಟಕ್ಕೆ 393 ರನ್‌ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. ಈ ನಿರ್ಧಾರ ಅನೇಕರನ್ನು ಆಶ್ಚರ್ಯಗೊಳಿಸಿತು. ಆದರೆ ಸ್ಟೋಕ್ಸ್ ಈ ನಿರ್ಧಾರದ ಹಿಂದಿನ ಕಾರಣವನ್ನು ಕೂಡ ವಿವರಿಸಿದ್ದಾರೆ.

"ಇದು ಆಸ್ಟ್ರೇಲಿಯಾದ ಮೇಲೆ ಸವಾರಿ ಮಾಡಲು ನಮಗೆ ಸಿಕ್ಕ ಅವಕಾಶವಾಗಿತ್ತು. ದಿನದ ಕೊನೆಯ 20 ನಿಮಿಷಗಳ ಆಟದಲ್ಲಿ ಯಾವುದೇ ಬ್ಯಾಟ್ಸ್‌ಮನ್ ಔಟಾಗುವುದನ್ನು ಬಯಸುವುದಿಲ್ಲ. ಈ ಹಂತದಲ್ಲಿ ನಾನು ಎರಡು ವಿಕೆಟ್‌ಗಳನ್ನು ಪಡೆಯುವ ಅವಕಾಶವನ್ನು ಗ್ರಹಿಸಿದೆ" ಎಂದು ಸ್ಟೋಕ್ಸ್ ವಿವರಿಸಿದರು.

Story first published: Wednesday, June 21, 2023, 9:05 [IST]
Other articles published on Jun 21, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+