Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಂಪೈರ್ ನಿರ್ಧಾರಕ್ಕೆ ಗೌರವ ನೀಡುವುದು ಕೂಡ ಕ್ರೀಡಾ ಸ್ಪೂರ್ತಿ: ಬ್ರಾಡ್‌ಗೆ ತಿವಿದ ಆಸಿಸ್ ಮಾಜಿ ಕ್ರಿಕೆಟಿಗ

ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿ ಇದೀಗ ಎರಡು ತಂಡಗಳು ಮೂರನೇ ಪಂದ್ಯಕ್ಕೆ ಸಿದ್ಧವಾಗಿದೆ. ಗುರುವಾರ ಮೂರನೇ ಪಂದ್ಯ ನಡೆಯಲಿದ್ದು ಹೆಡಿಂಗ್ಲೆಯಲ್ಲಿ ಪಂದ್ಯ ಆಯೋಜನೆಯಾಗಲಿದೆ. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಲಾರ್ಡ್ಸ್‌ಟೆಸ್ಟ್‌ನ 5ನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡುವಾಗ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಅವರ ನಡವಳಿಕೆಯನ್ನು ಪ್ರಶ್ನಿಸಿದ್ದಾರೆ.

ಆಸ್ಟ್ರೇಲಿಯ ಸ್ಟಂಪಿಂಗ್ ಮೂಲಕ ಜಾನಿ ಬೈರ್‌ಸ್ಟೋವ್ ಅವರನ್ನು ಔಟ್ ಮಾಡಿದ ಬಳಿಕ ನಂತರದ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಬೈರ್‌ಸ್ಟೋವ್ ಅವರನ್ನು ಔಟ್ ಮಾಡಿದ ರೀತಿಯ ಬಗ್ಗೆ ಇನ್ನು ಕೂಡ ಚರ್ಚೆಗಳು ನಡೆಯುತ್ತಿದ್ದು ಆಸಿಸ್ ನಿರ್ಧಾರದ ಬಗ್ಗೆ ಇಂಗ್ಲೆಂಡ್ ಆಟಗಾರರು ಸಾಕಷ್ಟು ಟೀಕೆಗಳನ್ನು ಮಾಡಿದ್ದಾರೆ. ಇತ್ತ ಆಸ್ಟ್ರೇಲಿಯಾ ಕೂಡ ತನ್ನ ನಿಲುವನ್ನು ಗಟ್ಟಿಯಾಗಿ ಸಮರ್ಥನೆ ಮಾಡಿಕೊಳ್ಳುತ್ತಲೇ ಬಂದಿದೆ.

Ashes 2023: Brad Hogg slams Stuart Broad for his reaction on Alex Carey

ಇನ್ನು ಈ ಘಟನೆಯ ಸಂದರ್ಬದಲ್ಲಿಬ್ಯಾಟಿಂಗ್‌ಗೆ ಇಳಿದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಆಸಿಸ್ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಅವರನ್ನು ಉದ್ದೇಶಿಸಿ "ನೀನು ಈ ಕಾರಣಕ್ಕಾಗಿ ಯಾವಾಗಲೂ ನೆನಪಿನಲ್ಲಿರುತ್ತೀಯಾ" ಎಂದು ಹೇಳಿಕೆ ನೀಡಿದ್ದರು. ಸ್ಟುವರ್ಟ್ ಬ್ರಾಡ್ ಅವರ ಈ ಹೇಳಿಕೆಯ ಬಗ್ಗೆ ಬ್ರಾಡ್ ಹಾಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಕ್ರೀಡಾ ಸ್ಪೂರ್ತಿಯ ಪ್ರಕಾರ ನೀವು ಅಂಪೈರ್ ನಿರ್ಧಾರವನ್ನು ಒಪ್ಪಿಕೊಳ್ಳಬೇಕು. ಆದರೆ ಬ್ರಾಡ್ ಆ ನಿರ್ಧಾರವನ್ನು ಒಪ್ಪಿಕೊಳ್ಳುವಂತೆ ಕಾಣುತ್ತಿಲ್ಲ. ಊಟಕ್ಕೆ ಹಿಂತಿರುಗುವಾಗಲೂ ಆಸ್ಟ್ರೇಲಿಯನ್ನರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಹೀಗಾಗಿಯೇ ಈ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಎಂಸಿಸಿ ಸದಸ್ಯರು ಕೂಡ ಆಸ್ಟ್ರೇಲಿಯಾ ಆಟಗಾರರ ವಿರುದ್ಧ ನಿಂದನೆಗಳನ್ನು ಮಾಡಿದ್ದಾರೆ" ಎಂದು ಹಾಗ್ ಆರೋಪಿಸಿದ್ದಾರೆ.

ಆಸ್ಟ್ರೇಲಿಯಾ ತಂಡ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ(ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್(ನಾಯಕ), ಜೋಶ್ ಹ್ಯಾಜಲ್‌ವುಡ್, ಮಿಚೆಲ್ ಮಾರ್ಷ್, ಮಾರ್ಕಸ್ ಹ್ಯಾರಿಸ್, ಮ್ಯಾಟ್ ರೆನ್ಶಾ, ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್

ಇಂಗ್ಲೆಂಡ್ ತಂಡ: ಝಾಕ್ ಕ್ರಾಲಿ, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್(ನಾಯಕ), ಜಾನಿ ಬೈರ್‌ಸ್ಟೋವ್(ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಆಲಿ ರಾಬಿನ್ಸನ್, ಜೋಶ್ ಟಂಗ್, ಜೇಮ್ಸ್ ಆಂಡರ್ಸನ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಡೇನಿಯಲ್ ಲಾರೆನ್ಸ್, ಮ್ಯಾಥ್ಯೂ ಪಾಟ್ಸ್, ರೆಹಾನ್ ಅಹ್ಮದ್

Story first published: Wednesday, July 5, 2023, 21:21 [IST]
Other articles published on Jul 5, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+