Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Eng vs Aus: ಖವಾಜ ಶತಕ, ಕ್ಯಾರಿ ಅರ್ಧ ಶತಕ: ಕುತೂಹಲ ಮೂಡಿಸಿದೆ 3ನೇ ದಿನದಾಟ, Live ಸ್ಕೋರ್

ಆಶಸ್ ಸರಣಿಯ ಮೊದಲ ಪಂದ್ಯ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿದ್ದು ಮೂರನೇ ದಿನದಾಟ ಆರಂಭವಾಗಿದೆ. ಇಂಗ್ಲೆಂಡ್ ತಂಡ ಮೊದಲ ದಿನದಾಟದಲ್ಲಿಯೇ ಭರ್ಜರಿ ಬ್ಯಾಟಿಂಗ್ ನಡೆಸಿ ಆಸ್ಟ್ರೇಲಿಯಾಗೆ ಡಿಕ್ಲೇರ್ ಮಾಡಿಕೊಟ್ಟಿದ್ದರೆ ಆಸ್ಟ್ರೇಲಿಯಾ ಎರಡನೇ ದಿನದಾಟವಿಡೀ ಬ್ಯಾಟಿಂಗ್ ನಡೆಸಿದ್ದು ಹೋರಾಟದ ಪ್ರದರ್ಶನ ನೀಡಿದೆ.

ಎರಡನೇ ದಿನದಾಟದಲ್ಲಿ ಉಸ್ಮಾನ್ ಖವಾಜ ಶತಕ ಸಿಡಿಸಿ ಅಬ್ಬಿರಿಸಿದ್ದು ಪ್ರಮುಖ ಅಂಶ. ಶತಕ ಸಿಡಿಸಿದ್ದು ಮಾತ್ರವಲ್ಲದೆ ತಮ್ಮ ಆಟವನ್ನು ಮೂರನೇ ದಿನಕ್ಕೂ ಅವರು ಕಾಯ್ದುಕೊಂಡಿದ್ದಾರೆ. ಅಲ್ಲದೆ ಅವರಿಗೆ ಭರ್ಜರಿ ಸಾಥ್ ನೀಡಿದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಅರ್ಧ ಶತಕ ಸಿಡಿಸಿದ್ದು ಮೂರನೇ ದಿನದಾಟವನ್ನು ಮುಂದುವರಿಸಿದ್ದಾರೆ. ಇನ್ನು ಆಸ್ಟ್ರೇಲಿಯಾ ಪರವಾಗಿ ಟ್ರಾವಿಸ್ ಹೆಡ್ ಕೂಡ ಅರ್ಧ ಶತಕ ಸಿಡಿಸಿದ್ದು ತಂಡಕ್ಕೆ ನೆರವಾದರು. ಎರಡನೇ ದಿನದಾಟದ ಅಂತ್ಯಕ್ಕೆ 311 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ 88 ರನ್‌ಗಳಿಂದ ಹಿಂದಿತ್ತು.

Ashes 2023: Eng vs Aus 1st test, Day 3 Live score, Edgbaston

Live score

1
55391

ಇನ್ನು ಆಸಿಸ್ ಪಡೆಯ ಇನ್ನುಳಿದ ಆಟಗಾರರಾದ ಡೇಚಿಡ್ ವಾರ್ನರ್ 9 ರನ್‌ಗಳಿಸಿ ಮತ್ತೊಮ್ಮೆ ಬ್ರಾಡ್‌ಗೆ ಔಟಾಗಿದ್ದಾರೆ. ಮಾರ್ನಸ್ ಲ್ಯಾಬುಶೇನ್ ಗೋಲ್ಡನ್ ಡಕ್‌ಗೆ ಬಲಿಯಾಗಿದ್ದು ಸ್ಟೀವ್ ಸ್ಮಿತ್ ಆಟವನ್ನು 16 ರನ್‌ಗೆ ಅಂತ್ಯಗೊಳಿಸುವಲ್ಲಿ ಸ್ಟೋಕ್ಸ್ ಯಶಸ್ವಿಯಾದರು. ಕ್ಯಾಮರೂನ್ ಗ್ರೀನ್ 38 ರನ್‌ಗಳ ಕೊಡುಗೆ ನೀಡಿ ವಿಕೆಟ್ ಕಳೆದುಕೊಂಡರು.

ಇನ್ನು ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಭರ್ಜರಿ 393 ರನ್‌ಗಳನ್ನು ಗಳಿಸಿ 8 ವಿಕೆಟ್ ಕಳೆದುಕೊಂಡಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿತ್ತು. ಜೋ ರೂಟ್ ಅಮೋಘ ಶತಕ ಸಿಡಿಸಿದರೆ ಜಾಕ್ ಕ್ರಾವ್ಲೆ 61 ರನ್ ಜಾನಿ ಬೈರ್‌ಸ್ಟೋವ್ 78 ರನ್‌ಗಳನ್ನು ಗಳಿಸಿದರು. ಮೂಲಕ ಮೊದಲ ದಿನದಲ್ಲಿಯೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ ಇಂಗ್ಲೆಂಡ್ ತಂಡದ ನಿರ್ಧಾರ.

ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಮೊಯಿನ್ ಅಲಿ, ಸ್ಟುವರ್ಟ್ ಬ್ರಾಡ್, ಒಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್
ಬೆಂಚ್: ಡೇನಿಯಲ್ ಲಾರೆನ್ಸ್, ಜೋಶ್ ಟಂಗ್, ಮ್ಯಾಥ್ಯೂ ಪಾಟ್ಸ್, ಮಾರ್ಕ್ ವುಡ್, ಕ್ರಿಸ್ ವೋಕ್ಸ್

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್, ಸ್ಕಾಟ್ ಬೋಲ್ಯಾಂಡ್ ಆಡುತ್ತಿದ್ದಾರೆ
ಬೆಂಚ್: ಮಿಚೆಲ್ ಮಾರ್ಷ್, ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ಜೋಶ್ ಇಂಗ್ಲಿಸ್, ಮ್ಯಾಟ್ ರೆನ್ಶಾ, ಮಾರ್ಕಸ್ ಹ್ಯಾರಿಸ್

Story first published: Sunday, June 18, 2023, 16:04 [IST]
Other articles published on Jun 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+