For Quick Alerts
ALLOW NOTIFICATIONS  
For Daily Alerts
 

Ashes 2023: ನಾಲ್ಕನೇ ದಿನದಾಟದಲ್ಲೂ ಇಂಗ್ಲೆಂಡ್‌ಗೆ ಆಘಾತ: ಆಸಿಸ್ ಗೆಲುವಿಗೆ 6 ವಿಕೆಟ್ ಅಗತ್ಯ

ಆಶಸ್ ಸರಣಿಯ ನಾಲ್ಕನೇ ದಿನದಾಟದವೂ ಆಸ್ಟ್ರೇಲಿಯಾ ಪರವಾಗಿ ಆಗಿದೆ. ನಾಲ್ಕನೇ ದಿನದಾಟದಲ್ಲಿ ಎರಡನೇ ಇನ್ನಿಂಗ್ಸ್‌ನ ಬ್ಯಾಟಿಂಗ್‌ನಲ್ಲಿ ಆಸ್ಟ್ರೇಲಿಯಾಗೆ ನಿರೀಕ್ಷಿತ ಯಶಸ್ಸು ಸಾಧ್ಯವಾಗಲಿಲ್ಲ. ಮೀರನೇ ದಿನದಾಟದ ಅಂತ್ಯದ ವೇಳೆಗೆ ಕೇವಲ 2 ವಿಕೆಟ್ ಕಳೆದುಕೊಂಡು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತ್ತು. ಉಸ್ಮಾನ್ ಖವಾಜ ಹಾಗೂ ಸ್ಟೀವ್ ಸ್ಮಿತ್ ಕ್ರೀಸ್‌ಲ್ಲಿದ್ದು ದೊಡ್ಡ ಮೊತ್ತದ ಗುರಿ ನೀಡುವ ವಿಶ್ವಾಸ ಮೂಡಿಸಿದ್ದರು.

ಆದರೆ ನಾಲ್ಕನೇ ದಿನದಾಟದಲ್ಲಿ ಎಲ್ಲಾ ಬ್ಯಾಟರ್‌ಗಳು ಕೂಡ ವಿಫಲವಾದರು. ಖವಾಜ 77 ರನ್‌ಗಳಿಸಿ ಔಟಾದರೆ ಸ್ಟೀವ್ ಸ್ಮಿತ್ 34 ರನ್‌ಗೆ ಔಟಾದರು. ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ. ಹೀಗಾಗಿ ಆಸ್ಟ್ರೇಲಿಯಾ 279 ರನ್‌ಗೆ ಆಲೌಟ್ ಆಯಿತು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ 91 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದ ಕಾರಣ ಇಂಗ್ಲೆಂಡ್ ಗೆಲುವಿಗೆ 371 ರನ್‌ಗಳ ಕಠಿಣ ಗುರಿಯನ್ನು ನಿಗದಿಪಡಿಸಿದೆ.

Eng vs Aus: Australia eye on 2nd victory

ಇನ್ನು ನಂತರ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ ಆರಂಭದಿಂದಲೇ ಆಘಾತಕ್ಕೆ ಒಳಗಾಯಿತು. ಜಾಕ್ ಕ್ರಾವ್ಲೆ 3 ರನ್‌ಗಳಿಸಿ ತಂಡದ ಮೊತ್ತ 9 ರನ್‌ ಆಗಿದ್ದಾಗ ಔಟಾದರೆ ಒಲಿ ಪೋಪ್ ಕೂಡ 3 ರನ್ ಮಾತ್ರವೇ ಸೇರಿಸಲು ಯಶಸ್ವಿಯಾದರು. ನಂತರ ಜೋ ರೂಟ್ 18 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರೆ ಹ್ಯಾರಿ ಬ್ರೂಕ್ 4 ರನ್ ಮಾತ್ರವೇ ಸೇರಿಸಲು ಯಶಸ್ವಿಯಾದರು. ಹೀಗಾಗಿ 45 ರನ್‌ ಆಗುವಷ್ಟರಲ್ಲಿ ಇಂಗ್ಲೆಂಡ್ ತಂಡ 4 ವಿಕೆಟ್‌ಗಳನ್ನು ಕಳೆದುಕೊಂಡಿತು.

ನಂತರ ಬೆನ್ ಡಕಟ್ ಹಾಗೂ ನಾಯಕ ಬೆನ್ನ ಸ್ಟೋಕ್ಸ್ ಅವರಿಂದ ಚೇತರಿಕೆಯ ಜೊತೆಯಾಟವೊಂದು ಬಂದಿದ್ದು ಅರ್ಧ ಶತಕದ ಜೊತೆಯಾಟ ನೀಡಿದ್ದು ಕೊನೆಯ ದಿನಕ್ಕೆ ಕ್ರೀಸ್ ಕಾಯ್ದಿರಿಸಿಕೊಂಡಿದ್ದಾರೆ. ಕೊನೆಯ ದಿನದಾಟದಲ್ಲಿ ಇಂಗ್ಲೆಂಡ್‌ಗೆ ಈ ಜೋಡಿಯ ಮೇಲೆ ದೊಡ್ಡ ನಿರೀಕ್ಷೆಯೊದ್ದು ತಂಡವನ್ನು ಸೋಲಿನಿಂದ ಪಾರುಗೊಳಿಸಲಬೇಕಾದರೆ ಇವರಿಬ್ಬರಿಂದ ಉತ್ತಮ ಕೊಡುಗೆ ಅಗತ್ಯವಾಗಿದೆ. ಬೆನ್ ಡಕೆಟ್ 50 ರನ್‌ಗಳಿಸಿದ್ದು ಬೆನ್ ಸ್ಟೋಕ್ಸ್ 29 ರನ್‌ಗಳನ್ನು ಗಳಿಸಿದ್ದಾರೆ.

ಇಂಗ್ಲೆಂಡ್ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಓಲಿ ರಾಬಿನ್ಸನ್, ಜೋಶ್ ಟಂಗ್, ಜೇಮ್ಸ್ ಆಂಡರ್ಸನ್
ಬೆಂಚ್: ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಡೇನಿಯಲ್ ಲಾರೆನ್ಸ್, ಮ್ಯಾಥ್ಯೂ ಪಾಟ್ಸ್, ರೆಹಾನ್ ಅಹ್ಮದ್

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್
ಬೆಂಚ್: ಮಿಚೆಲ್ ಮಾರ್ಷ್, ಮಾರ್ಕಸ್ ಹ್ಯಾರಿಸ್, ಮ್ಯಾಟ್ ರೆನ್ಶಾ, ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್

Story first published: Sunday, July 2, 2023, 9:34 [IST]
Other articles published on Jul 2, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+