Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ENG vs AUS Ashes 2023: ಆಸ್ಟ್ರೇಲಿಯಾ ಗೆಲುವಿಗೆ ಮಳೆ ಅಡ್ಡಿ; 5ನೇ ದಿನದಾಟ ತಾತ್ಕಾಲಿಕ ಸ್ಥಗಿತ

ಮಂಗಳವಾರ, ಜೂನ್ 20ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಆಶಸ್ ಸರಣಿಯ ಮೊದಲ ಪಂದ್ಯದ 5ನೇ ದಿನದಾಟಕ್ಕೆ ಮಳೆ ಅಡ್ಡಿಯನ್ನುಂಟು ಮಾಡಿದೆ.

ಬೆಳಗ್ಗೆಯಿಂದಲೂ ಮಳೆ ಸುರಿಯುತ್ತಿದ್ದು, ಭೋಜನ ಸಮಯದವರೆಗೂ ಒಂದು ಎಸೆತ ಕಾಣದೆ ತಾತ್ಕಾಲಿಕ ಸ್ಥಗಿತಗೊಂಡಿತು. ಇದು ಪ್ರವಾಸಿ ಆಸ್ಟ್ರೇಲಿಯಾ ತಂಡದ ಗೆಲುವಿಗೆ ವರುಣ ತಣ್ಣೀರೆರಚಿದೆ.

Ashes 2023: ENG vs AUS Match Suspended Due To Rain On Day 5

ಮೈದಾನದಲ್ಲಿ ಹೊದಿಕೆಯಾಗಿದ್ದ ಕವರ್‌ಗಳನ್ನು ಸದ್ಯ ತೆಗೆಯಲಾಗಿದೆ ಮತ್ತು ಅಂತಿಮ ಎರಡು ಸೆಷನ್‌ಗಳು ನಡೆಯಬಹುದು ಎಂದು ಆಶಿಸಲಾಗಿದೆ. ಈಗಾಗಲೇ ಪಿಚ್ ಪರಿಶೀಲನೆ ನಡೆಸಿದ್ದು, ಸ್ಥಳೀಯ ಕಾಲಮಾನ ಮಧ್ಯಾಹ್ನ 2.15ಕ್ಕೆ ಪಂದ್ಯ ಆರಂಭವಾಗಲಿದೆ.

ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 281 ರನ್‌ಗಳ ಗೆಲುವಿನ ಗುರಿ ಪಡೆದಿರುವ ಆಸ್ಟ್ರೇಲಿಯಾ ನಾಲ್ಕನೇ ದಿನದಾಟದಂತ್ಯಕ್ಕೆ 107 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಉಸ್ಮಾನ್ ಖವಾಜಾ ಅಜೇಯ 34 ರನ್ ಮತ್ತು ಸ್ಕಾಟ್ ಬೋಲ್ಯಾಂಡ್ ಅಜೇಯ 13 ರನ್ ಗಳಿಸಿ ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಆಶಸ್ ಸರಣಿಯ ಮೊದಲ ಪಂದ್ಯದ ಅಂತಿಮ ದಿನದಲ್ಲಿ ಗೆಲುವಿಗೆ ಇಂಗ್ಲೆಂಡ್ ತಂಡಕ್ಕೆ ಏಳು ವಿಕೆಟ್‌ಗಳು ಬೇಕಿದ್ದರೆ, ಪ್ರವಾಸಿ ಆಸ್ಟ್ರೇಲಿಯಾದ ಗೆಲುವಿಗೆ 174 ರನ್‌ಗಳ ಅವಶ್ಯಕತೆ ಇದೆ.

ನಾಲ್ಕನೇ ದಿನದಂದು 281 ರನ್‌ಗಳ ಗೆಲುವಿನ ಗುರಿ ಪಡೆದ ಆಸ್ಟ್ರೇಲಿಯಾ 78 ರನ್‌ಗೆ 1 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದಾಗ, ಸ್ಟುವರ್ಟ್ ಬ್ರಾಡ್ ಅವರು ವಿಶ್ವದ ಇಬ್ಬರು ಅಗ್ರ ಶ್ರೇಯಾಂಕಿತ ಟೆಸ್ಟ್ ಬ್ಯಾಟ್ಸ್‌ಮನ್‌ಗಳಾದ ಮಾರ್ನಸ್ ಲ್ಯಾಬುಸ್‌ಚಾಗ್ನೆ ಮತ್ತು ಸ್ಟೀವ್ ಸ್ಮಿತ್ ಅವರ ವಿಕೆಟ್ ತೆಗೆದು ಆಘಾತ ನೀಡಿದರು.

ಮೊದಲ ದಿನದಂದು ಟಾಸ್ ಗೆದ್ದ ಇಂಗ್ಲೆಂಡ್ 78 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 393 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ವೇಳೆ ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ ಭರ್ಜರಿ ಶತಕ ಬಾರಿಸಿದರು.

ಪ್ರವಾಸಿ ತಂಡದ ಪರ ನಾಥನ್ ಲಿಯಾನ್ ಅತ್ಯುತ್ತಮ ಬೌಲರ್ ಎನಿಸಿದ್ದು, ಅವರು 149 ರನ್‌ ನೀಡಿ ನಾಲ್ಕು ವಿಕೆಟ್ ಪಡೆದರೆ, ಜೋಶ್ ಹ್ಯಾಜಲ್‌ವುಡ್ ಎರಡು ವಿಕೆಟ್ ಪಡೆದರು. ಸ್ಕಾಟ್ ಬೋಲ್ಯಾಂಡ್ ಮತ್ತು ಕ್ಯಾಮರೂನ್ ಗ್ರೀನ್ ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಆ ಬಳಿಕ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 116.1 ಓವರ್‌ಗಳಲ್ಲಿ 386 ರನ್‌ಗಳಿಗೆ ಸರ್ವಪತನ ಕಂಡಿತು. ಆಸೀಸ್ ತಂಡದ ಪರ ಉಸ್ಮಾನ್ ಖವಾಜಾ 141 ರನ್‌ಗಳ ಅಮೋಘ ಶತಕ ಬಾರಿಸಿ ತಂಡಕ್ಕೆ ನೆರವಾದರು.

ಇಂಗ್ಲೆಂಡ್ ಪರ ಬೌಲಿಂಗ್‌ನಲ್ಲಿ ಸ್ಟುವರ್ಟ್ ಬ್ರಾಡ್ 23 ಓವರ್‌ಗಳಲ್ಲಿ 68 ರನ್ ನೀಡಿ 3 ವಿಕೆಟ್ ಪಡೆದರೆ, ಒಲ್ಲಇ ರಾಬಿನ್‌ಸನ್ 3 ವಿಕೆಟ್, ಮೊಯಿನ್ ಅಲಿ 2 ವಿಕೆಟ್ ಮತ್ತು ಬೆನ್ ಸ್ಟೋಕ್ಸ್ 1 ವಿಕೆಟ್ ಪಡೆದರು.

Story first published: Tuesday, June 20, 2023, 19:19 [IST]
Other articles published on Jun 20, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+