Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ashes 2023: ಆಸ್ಟ್ರೇಲಿಯಾ ವಿರುದ್ಧವೂ "ಬೇಸ್‌ಬಾಲ್" ಆಟ ಮುಂದುವರಿಯಲಿದೆ ಎಂದ ಸ್ಟುವರ್ಟ್ ಬ್ರಾಡ್

ಇಂಗ್ಲೆಂಡ್ ತಂಡ ಬೆನ್ ಸ್ಟೋಕ್ಸ್ ಟೆಸ್ಟ್ ನಾಯಕತ್ವ ವಹಿಸಿಕೊಂಡ ಬಳಿಕ ಆಕ್ರಮಣಕಾರಿ ಆಟದ ಮಾದರಿಯನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದು ತಿಳಿದೇ ಇದೆ. ಈ ಆಕ್ರಮಣಕಾರಿ ಆಟ ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಆಶಸ್ ಟೆಸ್ಟ್ ಸರಣಿಯಲ್ಲಿಯೂ ಮುಂದುವರಿಯಲಿದೆ ಎಂದಿದ್ದಾರೆ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್. ಈ ಮೂಲಕ ತಮ್ಮ ತಂಡ ಮುಂದಿನ ಆಶಸ್ ಸರಣಿಗೆ ಆತ್ಮವಿಶ್ವಾಸದಿಂದ ಸಿದ್ಧವಾಗಿರುವುದನ್ನು ತಿಳಿಸಿದ್ದಾರೆ.

ಮುಂದಿನ ಜೂನ್ 16ರಿಂದ ಜುಲೈ 31ರವರೆಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಪ್ರತಿಷ್ಠತ ಆಶಸ್ ಟೆಸ್ಟ್ ಸರಣಿ ನಡೆಯಲಿದೆ. 2015ರ ಬಳಿಕ ಇಂಗ್ಲೆಂಡ್ ತಂಡ ಒಮ್ಮೆಯೂ ಆಶಸ್ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಹಾಗೂ ಬ್ರೆಂಡನ್ ಮೆಕ್ಕಲಮ್ ಮಾರ್ಗದರ್ಶನದಲ್ಲಿ ಅದ್ಭುತ ಯಶಸ್ಸು ಸಾಧಿಸಿಕೊಂಡು ಬಂದಿರುವ ಆಸ್ಟ್ರೇಲಿಯಾ ತಂಡ ಸರಣಿ ಗೆಲ್ಲುವ ವಿಶ್ವಾಸದಲ್ಲಿದೆ.

Ashes 2023: England pacer Stuart Broad said England will continue Bazball against Australia

ಈ ಸರಣಿಯ ಬಗ್ಗೆ ಮಾತನಾಡಿರುವ ಸ್ಟುವರ್ಟ್ ಬ್ರಾಡ್, "ಇದೊಂದು ಅದ್ಭುತವಾದ ಬೇಸಿಗೆಯಾಗಿರಲಿದೆ. ಈಗ ನಾವು ಆಡುತ್ತಿರುವ ಶೈಲಿಯಲ್ಲಿಯೃ ಆಟವನ್ನು ನಾವು ಮುಂದುವರಿಸಲಿದ್ದು ಆ ಶೈಲಿಯಲ್ಲಿಯೇ ಫಲಿತಾಂಶವನ್ನು ಪಡೆಯಲಿದ್ದೇವೆ" ಎಂದಿದ್ದಾರೆ ಇಂಗ್ಲೆಂಡ್ ತಂಡದ ಸ್ಟಾರ್ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್.

"ಇದು ಕ್ರಿಕೆಟ್ ಆಟವನ್ನು ನೋಡಲು ಆಗಮಿಸಿರುವ ಪ್ರೇಕ್ಷಕರು ಹಾಗೂ ಟಿವಿಯಲ್ಲಿ ನೋಡುವ ಪ್ರೇಕ್ಷಕರು ಇಂಥಾ ಆಟವನ್ನು ನೋಡಲು ಇಷ್ಟ ಪಡುತ್ತಾರೆ. ಇದುವೇ ನಮ್ಮ ಆಟದ ಶೈಲಿಯಾಗಿದೆ. ಎದುರಾಳಿ ಯಾರೇ ಆಗಿರಲಿ, ನಾವು ಆಡುವುದು ಇದೇ ಶೈಲಿಯಲ್ಲಿ. ನಾವು ಮನರಂಜಿಸಲು ಹಾಗೂ ಆಟವನ್ನು ಆನಂದಿಸಲು ಬಯಸುತ್ತೇವೆ. ಆಸ್ಟ್ರೇಲಿಯಾ ವಿರುದ್ಧವೂ ಅದನ್ನು ಮಾಡಲು ಸಾಧ್ಯವಾದರೆ ಉತ್ತಮ ಸಂಗತಿ" ಎಂದಿದ್ದಾರೆ ಸ್ಟುವರ್ಟ್ ಬ್ರಾಡ್.

ಇನ್ನು ಇದೇ ಸಂದರ್ಭದಲ್ಲಿ ಸ್ಟುವರ್ಟ್ ಬ್ರಾಡ್ ಈ ಬಾರಿಯ ಆಶಸ್ ಸರಣಿಗೆ ಆಸ್ಟ್ರೇಲಿಯಾ ತಂಡ ಸಾಕಷ್ಟು ಆತ್ಮವಿಶ್ವಾಸದೊಂದಿಗೆ ಆಗಮಿಸಲಿದೆ ಎಂದಿದ್ದಾರೆ. ಆಸ್ಟ್ರೇಲಿಯಾ ತಮಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿರುವ ಕಾರಣ ಹೆಚ್ಚಿನ ಹುಮ್ಮಸ್ಸಿನಿಂದಿಗೆ ಆಸಿಸ್ ಪಡೆ ಕಣಕ್ಕಿಳಿಯುವುದು ಸ್ಪಷ್ಟ ಎಂದಿದ್ದಾರೆ ಇಂಗ್ಲೆಂಡ್ ವೇಗಿ.

"ಆಸ್ಟ್ರೇಲಿಯಾ ತಂಡ ಇಲ್ಲಿಗೆ ಈ ಬಾರಿ ತಾಜಾತನದಿಂದ, ಫಿಟ್ ಆಗಿ ಹಾಗೂ ಸಿದ್ಧವಾಗಿ ಆಗಮಿಸಲಿದೆ. ಆದರೆ ಎದುರಾಳಿ ತಂಡ ಬಲಿಷ್ಠವಾದ ಬೌಲಿಂಗ್ ದಾಳಿಯನ್ನು ಹೊಂದಿದ್ದರೂ ನಾವು ನಮ್ಮದೇಶ ಶೈಲಿಯ ಆಟವನ್ನು ಆಡಲಿದ್ದೇವೆ ಎಂದಿದ್ದಾರೆ ಇಂಗ್ಲೆಂಡ್ ತಂಡದ ವೇಗಿ ಸ್ಟುವರ್ಟ್ ಬ್ರಾಡ್.

Story first published: Thursday, April 6, 2023, 5:40 [IST]
Other articles published on Apr 6, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+