Ashes 2023: 3ನೇ ದಿನದಾಟದಲ್ಲಿ ಮಳೆಯದ್ದೇ ಆಟ; ಅಲ್ಪ ಮೊತ್ತಕ್ಕೆ 2 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್
ಆಶಸ್ ಸರಣಿಯ ಮೊದಲ ಪಂದ್ಯದ ಮೂರನೇ ದಿನದಾಟ ಅಂತ್ಯವಾಗಿದೆ. ಮೂರನೇ ದಿನದಾಟದಲ್ಲಿ ಪಂದ್ಯದ ಬಹುತೇಕ ಅವಧಿಯನ್ನು ಮಳೆ ಆಹುತಿ ಪಡೆದುಕೊಂಡಿದ್ದು ನಿರಾಸೆ ಮೂಡಿಸಿದೆ. ಮೊದಲ ಸೆಶನ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡಿದ ಇಂಗ್ಲೆಂಡ್ ಬೌಲರ್‌ಗಳು ಪಂದ್ಯದಲ್ಲಿ ಆಸ್ಟ್ರೇಲಿಯಾ ಮುನ್ನಡೆ ಸಾಧಿಸದಂತೆ ತಡೆಯಲು ಯಶಸ್ವಿಯಾದರು. ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ ತನ್ನದೇ ಶೈಲಿಯಲ್ಲಿ ಬ್ಯಾಟಿಂಗ್ ಆರಂಭಿಸಿತಾದರೂ ಆರಂಭಿಕರಿಬ್ಬರ ವಿಕೆಟನ್ನು ಕೂಡ ಶೀಘ್ರದಲ್ಲಿಯೇ ಕಳೆದುಕೊಂಡಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ 7 ರನ್‌ಗಳ ಅಲ್ಪ ಮೊತ್ತದ ಮುನ್ನಡೆ ಸಾಧಿಸಿದ ಬಳಿಕ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಆಸ್ಟ್ರೇಲಿಯಾ ವೇಗಿಗಳು ತಿರುಗೇಟು ನೀಡಿದ್ದಾರೆ. ಮೊದಲಿಗೆ ಬೆನ್ ಡಕೆಟ್ ಅವರನ್ನು 19 ರನ್‌ಗಳಿಸಿದ್ದಾಗ ನಾಯಕ ಪ್ಯಾಟ್ ಕಮ್ಮಿನ್ಸ್ ಔಟ್ ಮಾಡಿದ್ದರೆ ಮುಂದಿನ ಓವರ್‌ನಲ್ಲಿಯೇ ಜಾಕ್ ಕ್ರಾವ್ಲೆ ಕೂಡ ಬೊಲಾಂಡ್ ಎಸೆತಕ್ಕೆ ಔಟಾಗಿದ್ದಾರೆ. ಈ ಇಬ್ಬರು ಆಟಗಾರರು ಔಟಾದ ಬಳಿಕ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ನಂತರ ಆಡಲು ಅವಕಾಶವನ್ನೇ ನೀಡಲಿಲ್ಲ. ಹೀಗಾಗಿ ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 28 ರನ್‌ಗಳಿಸಿ 2 ವಿಕೆಟ್ ಕಳೆದುಕೊಂಡಿದ್ದು 35 ರನ್‌ಗಳ ಮುನ್ನಡೆ ಸಾಧಿಸಿದೆ.

ಉಸ್ಮಾನ್ ಖವಾಜ ಅಮೋಘ ಶತಕ ಹಾಗೂ ಅಲೆಕ್ಸ್ ಕ್ಯಾರಿ ಹಾಗೂ ಟ್ರೆವಿಸ್ ಹೆಡ್ ಅವರ ಅರ್ಧ ಶತಕದ ನೆರವಿನಿಂದ ಆಸ್ಟ್ರೇಲಿಯಾ ಇಂಗ್ಲೆಂಡ್ ಸ್ಕೋರ್ ಹಿಂದಿಕ್ಕುವ ವಿಶ್ವಾಸ ಮೂಡಿಸಿತ್ತು. ಆದರೆ ಮೂರನೇ ದಿನದಾಟದಲ್ಲಿ ಬೌಲಿಂಗ್ ಹಾಗೂ ಫಿಲ್ಡೀಂಗ್‌ನಲ್ಲಿಯೂ ಆಕ್ರಮಣಕಾರಿ ಆಟಕ್ಕೆ ಮುಂದಾದ ಇಂಗ್ಲೆಂಡ್ ಆಸ್ಟ್ರೇಲಿಯಾ ತಂಡವನ್ನು 386 ರನ್‌ಗಳಿಗೆ ಆಲವಟ್ ಮಾಡುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಉಸ್ಮಾನ್ ಖವಾಕ ಅವರನ್ನು ಔಟ್ ಮಾಡಲು ಇಂಗ್ಲೆಂಡ್ ಬಳಸಿದ ರಣತಂತ್ರ ಅದ್ಭುತವಾಗಿ ಯಶಸ್ಸು ಕಂಡಿತು. ಪ್ಯಾಟ್ ಕಮ್ಮನ್ಸ್ ಹೊರತುಪಡಿಸಿ ಆಸಿಸ್ ಬಾಲಂಗೋಚಿಗಳು ಸುಲಭವಾಗಿ ಔಟಾಗಿದ್ದು ಇಂಗ್ಲೆಂಡ್ ಕೆಲಸ ಸುಲಭವಾಯಿತು.
ಎರಡನೇ ದಿನದಾಟದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಉಸ್ಮಾನ್ ಖವಾಜ ಅಬ್ಬಿರಿಸಿದ್ದು ಪ್ರಮುಖ ಅಂಶ. ಶತಕ ಸಿಡಿಸಿದ್ದು ಮಾತ್ರವಲ್ಲದೆ ತಮ್ಮ ಆಟವನ್ನು ಮೂರನೇ ದಿನಕ್ಕೂ ಅವರು ಕ್ರೀಸ್ ಕಾಯ್ದಿರಿಸಿಕೊಂಡಿದ್ದ ಕಾರಣ ಅವರನ್ನು ಔಟ್ ಮಾಡುವುದು ಇಂಗ್ಲೆಂಡ್ ಬೌಲರ್‌ಗಳ ಮುಂದಿದ್ದ ದೊಡ್ಡ ಸವಾಲಾಗಿತ್ತು. ಎರಡನೇ ದಿನದಾಟದಲ್ಲಿ ಖವಾಜಾಗೆ ಭರ್ಜರಿ ಸಾಥ್ ನೀಡಿದ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಮೂರನೇ ದಿನದಾಟದಲ್ಲಿ ಶೀಘ್ರದಲ್ಲೇ ವಿಕೆಟ್ ಕಳೆದುಕೊಳ್ಳುವ ಮೂಲಕ ಇಂಗ್ಲೆಂಡ್ ಮೇಲುಗೈ ಸಾಧಿಸಿತ್ತು. ನಂತರ ಖವಾಜ ಕೂಡ 141 ರನ್‌ಗಳಿಗೆ ಔಟಾದರು. ಮೂರನೇ ದಿನ 75ರನ್‌ಗಳನ್ನು ಮಾತ್ರವೇ ಸೇರಿಸಿದ ಆಸ್ಟ್ರೇಲಿಯಾ ಉಳಿದ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಾಗಿ ನಿರೀಕ್ಷಿತ ರನ್‌ಗಳಿಸಲು ಆಸಿಸ್ ವಿಫಲವಾಗಿದೆ.
ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಮೊಯಿನ್ ಅಲಿ, ಸ್ಟುವರ್ಟ್ ಬ್ರಾಡ್, ಒಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್
ಬೆಂಚ್: ಡೇನಿಯಲ್ ಲಾರೆನ್ಸ್, ಜೋಶ್ ಟಂಗ್, ಮ್ಯಾಥ್ಯೂ ಪಾಟ್ಸ್, ಮಾರ್ಕ್ ವುಡ್, ಕ್ರಿಸ್ ವೋಕ್ಸ್
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್, ಸ್ಕಾಟ್ ಬೋಲ್ಯಾಂಡ್ ಆಡುತ್ತಿದ್ದಾರೆ
ಬೆಂಚ್: ಮಿಚೆಲ್ ಮಾರ್ಷ್, ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ಜೋಶ್ ಇಂಗ್ಲಿಸ್, ಮ್ಯಾಟ್ ರೆನ್ಶಾ, ಮಾರ್ಕಸ್ ಹ್ಯಾರಿಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications