Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಶಸ್ 2023, 2ನೇ ಟೆಸ್ಟ್: ಮೊದಲ ದಿನ ಆಸ್ಟ್ರೇಲಿಯಾ ಬ್ಯಾಟರ್‌ಗಳ ಭರ್ಜರಿ ಆಟ

ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಐದು ಪಂದ್ಯಗಳ ಆಶಸ್ ಟೆಸ್ಟ್ ಸರಣಿಯ ಎರಡನೇ ಪಂದ್ಯ ಲಂಡನ್‌ನ ಲಾರ್ಡ್ಸ್‌ನಲ್ಲಿ ಆರಂಭವಾಗಿದ್ದು ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ ಭರ್ಜರಿ ಯಶಸ್ಸು ಸಾಧಿಸಿದೆ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಆರಂಭ ದೊರೆತಿತು. ಉಸ್ಮಾನ್ ಖವಾಜ ಹಾಗೂ ಡೇವಿಡ್ ವಾರ್ನರ್ ಅರ್ಧ ಶತಕದ ಜೊತೆಯಾಟ ನೀಡಿದರು. ಡೇವಿಡ್ ವಾರ್ನರ್ ಅರ್ಧ ಶತಕ ಸಿಡಿಸಿ ಮಿಂಚಿದ್ದು ಉತ್ತಮ ಅಡಿಪಾಯ ಹಾಕಿಕೊಟ್ಟರು. ಉಸ್ಮಾನ್ ಖವಾಜ ಈ ಇನ್ನಿಂಗ್ಸ್‌ನಲ್ಲಿ 17 ರನ್‌ಗಳನ್ನು ಗಳಿಸಲು ಮಾತ್ರವೇ ಶಕ್ತವಾದರು.

ಇನ್ನು ನಂತರ ಮಾರ್ನಸ್ ಲ್ಯಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ಜೋಡಿ ಶತಕದ ಜೊತೆಯಾಟ ನೀಡಿ ಮತ್ತೊಂದು ಉತ್ತಮ ಜೊತೆಯಾಟದಲ್ಲಿ ಭಾಗಿಯಾದರು. 47 ರನ್‌ಗಳಿಸಿ ಲ್ಯಾಬೈಶೇನ್ ಔಟ್ಆದ ಬಳಿಕ ಟ್ರೆವಿಡ್ ಹೆಡ್ ಕಣಕ್ಕಿಳಿದು ಮತ್ತೊಂದು ಸ್ಪೋಟಕ ಇನ್ನಿಂಗ್ಸ್ ಆಡಿದರು. ಸ್ಟೀವ್ ಸ್ಮಿತ್ ಹಾಗೂ ಹೆಡ್ ಜೋಡಿ ಕೂಡ ಶತಕದ ಜೊತೆಯಾಟ ನೀಡಿ ಮುನ್ನುಗ್ಗುತ್ತಿದ್ದಂತೆಯೇ ದಿನದಾಟದ ಅಂತ್ಯದ ಸಂದರ್ಭದಲ್ಲಿ ಟ್ರೆವಿಡ್ ಹೆಡ್ ಜೋ ರೂಟ್‌ಗೆ ಬಲಿಯಾದರು.

Ashes 2023: England vs Australia 2nd Test, day 1 Highlights, Lords

ಅದರ ಬೆನ್ನಿಗೇ ಕ್ಯಾಮರೂನ್ ಗ್ರೀನ್ ಅವರನ್ನು ಕೂಡ ಜೋ ರೂಟ್ ಬಲಿ ಪಡೆಯುವ ಮೂಲಕ ಸತತ ಎರಡು ವಿಕೆಟ್ ಪಡೆದು ದಿನದಾಟದ ಅಂತ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ ಸಣ್ಣ ಚೇತರಿಕೆ ನೀಡಿದರು. ಈ ಮೂಲಕ ಇಂಗ್ಲೆಂಡ್ ತಂಡ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾದ ಐದು ವಿಕೆಟ್‌ಗಳನ್ನು ಪಡೆದಂತಾಗಿದ್ದು ಆಸ್ಟ್ರೇಲಿಯಾ 339 ರನ್‌ಗಳನ್ನು ಗಳಿಸಿದೆ. ಸ್ಟೀವ್ ಸ್ಮಿತ್ 85 ರನ್‌ಗಳಿಸಿ ಅಜೇಯವಾಗುಳಿದರೆ ಅಲೆಕ್ಸ್ ಕ್ಯಾರಿ 11 ರನ್‌ಗಳಿಸಿದ್ದು ಎರಡನೇ ದಿನಕ್ಕೆ ಕ್ರೀಸ್‌ ಕಾಯ್ದಿರಿಸಿಕೊಂಡಿದ್ದಾರೆ.

ಇಂಗ್ಲೆಂಡ್ ಪರವಾಗಿ ಯಶಸ್ವಿ ಬೌಲರ್ ಎನಿಸಿದ್ದು ಮಾಜಿ ನಾಯಕ ಜೋ ರೂಟ್. ಇಂಗ್ಲೆಂಡ್ ವೇಗಿಗಳು ವಿಕೆಟ್ ಪಡೆಯಲು ಸರ್ವ ಪ್ರಯತ್ನ ನಡೆಸಿದರೂ ವಿಫಲವಾದಾಗ ಅಪಾಯಕಾರಿ ಜೋಡಿಯಾದ ಸ್ಮಿತ್ ಹೆಡ್ ಅವರನ್ನು ಬೇರ್ಪಡಿಸಿದ್ದಲ್ಲದೆ ಕ್ಯಾಮರೂನ್ ಗ್ರೀನ್ ಅವರನ್ನು ಕೂಡ ಔಟ್ ಮಾಡಿದ್ದಾರೆ. ರೂಟ್ ಎರಡು ವಿಕೆಟ್ ಕಬಳಿಸಿದ್ದು ಜೋಶ್ ಟಂಗ್ ಕೂಡ ಎರಡು ವಿಕೆಟ್ ಪಡೆದಿದ್ದಾರೆ. ಒಂದು ವಿಕೆಟ್ ಒಲಿ ರಾಬಿನ್ಸನ್ ಪಾಲಾಗಿದೆ. ಜೇಮ್ಸ್ ಆಂಡರ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಮೊದಲ ದಿನದಾಟದಲ್ಲಿ ನಿರಾಸೆ ಅನುಭವಿಸಿದ್ದಾರೆ

ಇಂಗ್ಲೆಂಡ್ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಓಲಿ ರಾಬಿನ್ಸನ್, ಜೋಶ್ ಟಂಗ್, ಜೇಮ್ಸ್ ಆಂಡರ್ಸನ್

ಬೆಂಚ್: ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಡೇನಿಯಲ್ ಲಾರೆನ್ಸ್, ಮ್ಯಾಥ್ಯೂ ಪಾಟ್ಸ್, ರೆಹಾನ್ ಅಹ್ಮದ್

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್
ಬೆಂಚ್: ಮಿಚೆಲ್ ಮಾರ್ಷ್, ಮಾರ್ಕಸ್ ಹ್ಯಾರಿಸ್, ಮ್ಯಾಟ್ ರೆನ್ಶಾ, ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್

Story first published: Wednesday, June 28, 2023, 23:58 [IST]
Other articles published on Jun 28, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+