Ashes 2023: ಇಂಗ್ಲೆಂಡ್ vs ಆಸ್ಟ್ರೇಲಿಯಾ ನಡುವಿನ ಆಶಸ್ ಸರಣಿ; ನೇರಪ್ರಸಾರ, ಸಮಯ, ಪೂರ್ಣ ತಂಡಗಳು
ಶುಕ್ರವಾರ, ಜೂನ್ 16ರಿಂದ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಬಹು ನಿರೀಕ್ಷಿತ 2023ರ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ.
ಜುಲೈ 27ರಿಂದ ಜುಲೈ 31ರವರೆಗೆ ಲಂಡನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಐದು ಪಂದ್ಯಗಳ ಸರಣಿಯು ಅಂತಿಮ ಟೆಸ್ಟ್ ಪಂದ್ಯನೊಂದಿಗೆ 2023ರ ಆಶಸ್ ಟೆಸ್ಟ್ ಸರಣಿಗೆ ತೆರೆ ಬೀಳಲಿದೆ.
ಕಳೆದ ಭಾನುವಾರ ಜೂನ್ 11ರಂದು ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನಲ್ಲಿ ಭಾರತ ತಂಡವನ್ನು 209 ರನ್‌ಗಳಿಂದ ಸೋಲಿಸಿದ ನಂತರ ಆಸ್ಟ್ರೇಲಿಯ ತಂಡ ಅತ್ಯಂತ ಹೆಚ್ಚಿನ ಆತ್ಮವಿಶ್ವಾಸದಲ್ಲಿದೆ.
ಟ್ರಾವಿಸ್ ಹೆಡ್ ಮತ್ತು ಸ್ಟೀವ್ ಸ್ಮಿತ್ ಅಮೋಘ ಶತಕ ಗಳಿಸಿದ ಕಾರಣ ಭಾರತ ತಂಡದ ವಿರುದ್ಧ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್ ಗಳಿಸಿತು. ನಂತರ ಆಸೀಸ್ ಬೌಲರ್‌ಗಳು ಕೂಡ ಮಿಂಚಿದರು ಮತ್ತು ಭಾರತ ತಂಡವನ್ನು ಎರಡೂ ಇನ್ನಿಂಗ್ಸ್‌ಗಳಲ್ಲಿ 296 ಮತ್ತು 234 ರನ್‌ಗಳಿಗೆ ನಿರ್ಬಂಧಿಸಿದರು.
ಇನ್ನು ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್ ತನ್ನ 'ಬಜ್‌ಬಾಲ್' ತತ್ವದಿಂದ ವಿಮುಖವಾಗುವುದಿಲ್ಲ ಎಂದು ನಾಯಕ ಬೆನ್ ಸ್ಟೋಕ್ಸ್ ಸ್ಪಷ್ಟಪಡಿಸಿದ್ದಾರೆ.

ನಾಯಕ ಬೆನ್ ಸ್ಟೋಕ್ಸ್ ಮತ್ತು ಕೋಚ್ ಬ್ರೆಂಡನ್ ಮೆಕಲಮ್ ಸಂಯೋಜನೆಯಲ್ಲಿ ಇಂಗ್ಲೆಂಡ್ 13 ಟೆಸ್ಟ್‌ಗಳಲ್ಲಿ 11 ಪಂದ್ಯಗಳನ್ನು ಗೆದ್ದಿದೆ. ಇಂಗ್ಲೆಂಡ್‌ನ ಆಕ್ರಮಣಕಾರಿ ಆಟದ ನೀತಿ ಆಸ್ಟ್ರೇಲಿಯಾ ತಂಡದ ವಿರುದ್ಧ ಫಲ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಭಾರತದಲ್ಲಿ 2023ರ ಆಶಸ್ ಸರಣಿ ನೇರಪ್ರಸಾರಗಳ ಚಾನೆಲ್‌ಗಳು
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ 2023ರ ಆಶಸ್ ಟೆಸ್ಟ್ ಸರಣಿಯ ನೇರಪ್ರಸಾರ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಲಭ್ಯವಿರುತ್ತದೆ. ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನ ಅಧಿಕೃತ ಟ್ವಿಟ್ಟರ್ ಪ್ರಕಾರ, ಆಶಸ್ ಸರಣಿಯ ಪಂದ್ಯಗಳು ಸೋನಿ ಸ್ಪೋರ್ಟ್ಸ್ 5ನಲ್ಲಿ ಲೈವ್ ಆಗಿರುತ್ತವೆ. ಎಲ್ಲಾ ಐದು ಟೆಸ್ಟ್ ಪಂದ್ಯಗಳು ಭಾರತೀಯ ಕಾಲಮಾನ ಮಧ್ಯಾಹ್ನ 3:30ಕ್ಕೆ ಪ್ರಾರಂಭವಾಗುತ್ತವೆ.
ಭಾರತದಲ್ಲಿ 2023ರ ಆಶಸ್ ಲೈವ್ ಸ್ಟ್ರೀಮಿಂಗ್
2023ರ ಆಶಸ್ ಟೆಸ್ಟ್ ಸರಣಿಯ ಲೈವ್ ಸ್ಟ್ರೀಮಿಂಗ್ SonyLiv ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಲಭ್ಯವಿರಲಿದೆ. ಈ ಪಂದ್ಯಗಳನ್ನು ವೀಕ್ಷಿಸಲು ವೀಕ್ಷಕರು ಚಂದಾದಾರಿಕೆಯನ್ನು ಖರೀದಿಸಬೇಕು. SonyLiv ನೀಡುತ್ತಿರುವ ಚಂದಾದಾರಿಕೆ ಯೋಜನೆಗಳು 299 ರೂ. (ಮಾಸಿಕ), 699 ರೂ. (ಆರು ತಿಂಗಳು) ಮತ್ತು 599 ರೂ. (ವಾರ್ಷಿಕ) ಇದು ಮೊಬೈಲ್ ಮಾತ್ರವಾಗಿದೆ.

2023ರ ಆಶಸ್: ಇಂಗ್ಲೆಂಡ್ vs ಆಸ್ಟ್ರೇಲಿಯಾ ಟೆಸ್ಟ್ ಸರಣಿ ವೇಳಾಪಟ್ಟಿ
1ನೇ ಟೆಸ್ಟ್ - ಜೂನ್ 16ರಿಂದ ಜೂನ್ 20: ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್
2ನೇ ಟೆಸ್ಟ್ - ಜೂನ್ 28ರಿಂದ ಜುಲೈ 02: ಲಂಡನ್‌ನ ಲಾರ್ಡ್ಸ್ ಮೈದಾನ
3ನೇ ಟೆಸ್ಟ್ - ಜುಲೈ 06ರಿಂದ ಜುಲೈ 10: ಲೀಡ್ಸ್‌ನ ಹೆಡಿಂಗ್ಲಿ
4ನೇ ಟೆಸ್ಟ್ - ಜುಲೈ 19ರಿಂದ ಜುಲೈ 23: ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್
5ನೇ ಟೆಸ್ಟ್- ಜುಲೈ 27ರಿಂದ ಜುಲೈ 31: ಲಂಡನ್‌ನ ಕೆನ್ನಿಂಗ್ಟನ್ ಓವಲ್
2023ರ ಆಶಸ್ ಸರಣಿಗಾಗಿ ಪೂರ್ಣ ತಂಡಗಳು (1ನೇ, 2ನೇ ಟೆಸ್ಟ್)
ಇಂಗ್ಲೆಂಡ್: ಬೆನ್ ಸ್ಟೋಕ್ಸ್ (ನಾಯಕ), ಅಲಿ ಪೋಪ್ (ಉಪ ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಜೋ ರೂಟ್, ಮೊಯಿನ್ ಅಲಿ, ಜೇಮ್ಸ್ ಆಂಡರ್ಸನ್, ಸ್ಟುವರ್ಟ್ ಬ್ರಾಡ್, ಹ್ಯಾರಿ ಬ್ರೂಕ್, ಬೆನ್ ಡಕೆಟ್, ಝಾಕ್ ಕ್ರಾಲಿ, ಮ್ಯಾಥ್ಯೂ ಪಾಟ್ಸ್, ಆಲಿ ರಾಬಿನ್ಸನ್, ಡಾನ್ ಲಾರೆನ್ಸ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಜೋಶ್ ಟಂಗ್.
ಆಸ್ಟ್ರೇಲಿಯಾ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸ್ಟೀವ್ ಸ್ಮಿತ್ (ಉಪ ನಾಯಕ), ಡೇವಿಡ್ ವಾರ್ನರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ನಾಥನ್ ಲಿಯಾನ್, ಮಿಚೆಲ್ ಮಾರ್ಷ್, ಟಾಡ್ ಮರ್ಫಿ, ಮ್ಯಾಟ್ ರೆನ್ಶಾ, ಮಿಚೆಲ್ ಸ್ಟಾರ್ಕ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications