ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಆಶಸ್ ಸರಣಿಯ ಎರಡನೇ ಪಂದ್ಯ ಕುತೂಹಲ ಘಟ್ಟಕ್ಕೆ ತಲುಪಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಎರಡು ತಂಡಗಳು ಕೂಡ ಪೈಪೋಟಿಯ ಪ್ರದರ್ಶನ ನೀಡುತ್ತಿದ್ದು ಯಾರಿಗೆ ಮೇಲುಗೈ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಪೈಪೋಟಿ ನೀಡಿತ್ತು. ಮೊದಲಿಗೆ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮೊದಲ ಸೆಶನ್‌ನಲ್ಲಿ ಆಸ್ಟ್ರೇಲಿಯಾವನ್ನು ಆಲೌಟ್ ಮಾಡಿದ ಇಂಗ್ಲೆಂಡ್ ಬಳಿಕ ಬ್ಯಾಟಿಂಗ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಗಮನಸೆಳೆದಿದೆ.
ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಪರವಾಗಿ ಸ್ಟೀವ್ ಸ್ಮಿತ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದು ಟೆಸ್ಟ್ ಮಾದರಿಯಲ್ಲಿ ತಮ್ಮ 32ನೇ ಶತಕವನ್ನು ಪೂರ್ತಿಗೊಳಿಸಿದರು. 184 ಎಸೆತಗಳನ್ನು ಎದುರಿಸಿದ ಅವರು 110 ರನ್‌ಗಳಿಸಿ ಔಟಾದರು. ಹೀಗಾಗಿ ಆಸ್ಟ್ರೇಲಿಯಾ ತಂಡ 416 ರನ್‌ಗಳನ್ನು ಗಳಿಸಿ ಮೊದಲ ಇನ್ನಿಂಗ್ಸ್‌ನ ಆಟ ವನ್ನು ಅಂತ್ಯಗೊಳಿಸಿತು. ಇಂಗ್ಲೆಂಡ್ ಪರವಾಗಿ ಜೋಶ್ ಟಂಗ್ ಹಾಗೂ ರಾಬಿನ್ಸನ್ ತಲಾ ಮೂರು ವಿಕೆಟ್ ಪಡೆದರೆ ಜೋ ರೂಟ್ ಎರಡು ವಿಕೆಟ್ ಕಬಳಿಸಿದ್ದರು. ಇನ್ನು ಆಂಡರ್ಸನ್ ಮತ್ತು ಬ್ರಾಡ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

Live ಸ್ಕೋರ್ ಹೀಗಿದೆ
ನಂತರ ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್‌ಗೆ ಭರ್ಜರಿ ಆರಂಭ ಪಡೆದುಕೊಮಡಿತು. ಜಾಕ್ ಕ್ರಾವ್ಲೆ ಹಾಗೂ ಬೆನ್ ಡಕೆಟ್ 91 ರನ್‌ಗಳ ಜೊತೆಯಾಟ ನೀಡಿದ ನಂತರ ಕ್ರಾವ್ಲೆ 48 ರನ್‌ಗಳಿಸಿ ಔಟಾದರು. ನಂತರ ಡಕೆಟ್ ಹಾಗೂ ಒಲಿ ಪೋಪ್ ಕೂಡ ಉತ್ತಮ ಜೊತೆಯಾಟದಲ್ಲಿ ಭಾಗಿಯಾಗಿದ್ದಾರೆ. ಬಳೀಕ ಒಲಿ ಪೋಪ್ 42 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ನಂತರ 98 ರನ್‌ಗಳಿಸಿದ್ದ ಬೆನ್ ಡಕೆಟ್ ಶತಕದ ಅಂಚಿನಲ್ಲಿ ಎಡವಿದರು. ಅನುಭವಿ ಆಟಗಾರ ಜೋ ರೂಟ್ 10 ರನ್‌ಗಳಿಸಿದ್ದಾಗ ಔಟ್ ಆಗುವ ಮೂಲಕ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿತು.
ಹ್ಯಾರಿ ಬ್ರೂಕ್ ಹಾಗೂ ಬೆನ್ ಸ್ಟೋಕ್ಸ್ ಮೂರನೇ ದಿನದಾಟವನ್ನು ಆರಂಭಿಸಿದ್ದು ಬ್ರೂಕ್ 45 ರನ್‌ಗಳನ್ನು ಗಳಿಸಿದಲ್ಲಿಂದ ಮೂರನೇ ದಿನದಾಟ ಆರಂಭಿಸಿದ್ದು ಸ್ಟೋಕ್ಸ್ 17ದಲ್ಲಿಂ ದಾಟ ಮುಂದುವರಿಸಿದ್ದಾರೆ. 2ನೇ ದಿನದಾಟದ ಅಂತ್ಯದಲ್ಲಿ ಇಂಗ್ಲೆಂಡ್ 278 ರನ್‌ಗಳನ್ನು ಗಳಿಸಿದ್ದು 4 ವಿಕೆಟ್ ಕಳೆದುಕೊಂಡು 138 ರನ್‌ಗಳ ಹಿನ್ನಡೆಯಲ್ಲಿತ್ತು.
ಇಂಗ್ಲೆಂಡ್ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಓಲಿ ರಾಬಿನ್ಸನ್, ಜೋಶ್ ಟಂಗ್, ಜೇಮ್ಸ್ ಆಂಡರ್ಸನ್
ಬೆಂಚ್: ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಡೇನಿಯಲ್ ಲಾರೆನ್ಸ್, ಮ್ಯಾಥ್ಯೂ ಪಾಟ್ಸ್, ರೆಹಾನ್ ಅಹ್ಮದ್
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್
ಬೆಂಚ್: ಮಿಚೆಲ್ ಮಾರ್ಷ್, ಮಾರ್ಕಸ್ ಹ್ಯಾರಿಸ್, ಮ್ಯಾಟ್ ರೆನ್ಶಾ, ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್