ಆಶಸ್ ಸರಣಿಯ ಎರಡನೇ ಪಂದ್ಯದ ಕೊನೆಯ ದಿನದಾಟ ಆರಂಭವಾಗಿದೆ. ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಬಿಗಿಹಿಡಿತವನ್ನು ಮುಂದುವರಿಸಿದ್ದು ನಾಲ್ಕಬೇ ದಿನದಾಟದಲಿಯೂ ಉತ್ತಮ ಯಶಸ್ಸು ಸಾಧಿಸಿತ್ತು. ಇದೀಗ ಪಂದ್ಯದ ಕೊನೆಯ ದಿನವಾದ ಇಂದು ಇಂಗ್ಲೆಂಡ್ ಆಸಿಸ್ ದಾಳಿಯನ್ನು ಹೇಗೆ ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಲಾರ್ಡ್ಸ್ ಪಂದ್ಯದಲ್ಲಿಯೂ ಇಂಗ್ಲೆಂಡ್ ಸೋಲಿನ ಸುಳಿಗೆ ಸಿಲುಕಿದ್ದು ಈ ಸುಳಿಯಿಂದ ಪವಾಡ ಸದೃಶವಾಗಿ ಪಾರಾಗಲಿದೆಯಾ ಎಂಬುದಷ್ಟೇ ಈಗಿರುವ ಕುತೂಹಲ.
ನಾಲ್ಕನೇ ದಿನದಾಟದಲ್ಲಿ ಎರಡನೇ ಇನ್ನಿಂಗ್ಸ್‌ನ ಬ್ಯಾಟಿಂಗ್‌ನಲ್ಲಿ ಆಸ್ಟ್ರೇಲಿಯಾಗೆ ನಿರೀಕ್ಷಿತ ಯಶಸ್ಸು ಸಾಧ್ಯವಾಗಲಿಲ್ಲ. ಮೂರನೇ ದಿನದಾಟದ ಅಂತ್ಯದ ವೇಳೆಗೆ ಕೇವಲ 2 ವಿಕೆಟ್ ಕಳೆದುಕೊಂಡು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತ್ತು. ಉಸ್ಮಾನ್ ಖವಾಜ ಹಾಗೂ ಸ್ಟೀವ್ ಸ್ಮಿತ್ ಕ್ರೀಸ್‌ಲ್ಲಿದ್ದು ದೊಡ್ಡ ಮೊತ್ತದ ಗುರಿ ನೀಡುವ ವಿಶ್ವಾಸ ಮೂಡಿಸಿದ್ದರು.

Live ಸ್ಕೋರ್ ಹೀಗಿದೆ
ಆದರೆ ನಾಲ್ಕನೇ ದಿನದಾಟದಲ್ಲಿ ಎಲ್ಲಾ ಬ್ಯಾಟರ್‌ಗಳು ಕೂಡ ವಿಫಲವಾಗಿದ್ದು ಖವಾಜ 77 ರನ್‌ಗಳಿಸಿ ಔಟಾದರೆ ಸ್ಟೀವ್ ಸ್ಮಿತ್ 34 ರನ್‌ಗೆ ಔಟಾದರು. ಉಳಿದ ಆಟಗಾರರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲು ಸಾಧ್ಯವಾಗಲಿಲ್ಲ. ಹೀಗಾಗಿ ಆಸ್ಟ್ರೇಲಿಯಾ 279 ರನ್‌ಗೆ ಆಲೌಟ್ ಆಯಿತು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ 91 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದ ಕಾರಣ ಇಂಗ್ಲೆಂಡ್ ಗೆಲುವಿಗೆ 371 ರನ್‌ಗಳ ಕಠಿಣ ಗುರಿಯನ್ನು ನಿಗದಿಪಡಿಸಿದೆ.
ನಂತರ ಎರಡನೇ ಇನ್ನಿಂಗ್ಸ್‌ನ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್‌ಗೆ ಆರಂಭದಲ್ಲಿಯೇ ಆಘಾತಕ್ಕೆ ಒಳಗಾಯಿತು. ಜಾಕ್ ಕ್ರಾವ್ಲೆ 3 ರನ್‌ಗಳಿಸಿ ಔಟಾದರೆ ಒಲಿ ಪೋಪ್ ಕೂಡ 3 ರನ್ ಮಾತ್ರವೇ ಸೇರಿಸಲು ಯಶಸ್ವಿಯಾದರು. ನಂತರ ಜೋ ರೂಟ್ 18 ರನ್‌ಗಳನ್ನು ಗಳಿಸಿ ವಿಕೆಟ್ ಕಳೆದುಕೊಂಡರೆ ಹ್ಯಾರಿ ಬ್ರೂಕ್ 4 ರನ್ ಮಾತ್ರವೇ ಸೇರಿಸಲು ಯಶಸ್ವಿಯಾದರು. ಹೀಗಾಗಿ 45 ರನ್ ಆಗುವಷ್ಟರಲ್ಲಿ ಇಂಗ್ಲೆಂಡ್ ತಂಡ 4 ವಿಕೆಟ್‌ಗಳನ್ನು ಕಳೆದುಕೊಂಡಿತು.
ನಂತರ ಬೆನ್ ಡಕೆಟ್ ಹಾಗೂ ನಾಯಕ ಬೆನ್ನ ಸ್ಟೋಕ್ಸ್ ಅವರಿಂದ ಚೇತರಿಕೆಯ ಜೊತೆಯಾಟವೊಂದು ಬಂದಿದ್ದು ಅರ್ಧ ಶತಕದ ಜೊತೆಯಾಟ ನೀಡಿದ್ದು ನಾಲ್ಕನೇ ದಿನದಾಟವನ್ನು ಈ ಜೋಡಿ ಆರಂಭಿಸಿದ್ದಾರೆ. ಕೊನೆಯ ದಿನದಾಟದಲ್ಲಿ ಈ ಜೋಡಿಯ ಮೇಲೆ ದೊಡ್ಡ ನಿರೀಕ್ಷೆಯೊದ್ದು ತಂಡವನ್ನು ಸೋಲಿನಿಂದ ಪಾರುಗೊಳಿಸಲಬೇಕಾದರೆ ಇವರಿಬ್ಬರಿಂದ ಉತ್ತಮ ಕೊಡುಗೆ ಅಗತ್ಯವಾಗಿದೆ.
ಇಂಗ್ಲೆಂಡ್ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಓಲಿ ರಾಬಿನ್ಸನ್, ಜೋಶ್ ಟಂಗ್, ಜೇಮ್ಸ್ ಆಂಡರ್ಸನ್
ಬೆಂಚ್: ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಡೇನಿಯಲ್ ಲಾರೆನ್ಸ್, ಮ್ಯಾಥ್ಯೂ ಪಾಟ್ಸ್, ರೆಹಾನ್ ಅಹ್ಮದ್
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್
ಬೆಂಚ್: ಮಿಚೆಲ್ ಮಾರ್ಷ್, ಮಾರ್ಕಸ್ ಹ್ಯಾರಿಸ್, ಮ್ಯಾಟ್ ರೆನ್ಶಾ, ಜೋಶ್ ಇಂಗ್ಲಿಸ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್