For Quick Alerts
ALLOW NOTIFICATIONS  
For Daily Alerts
 

Ashes 2023: ಆಸೀಸ್ ವಿರುದ್ಧ ಶತಕ ಸಿಡಿಸಿ ಬ್ರಾಡ್ಮನ್, ಅಲಸ್ಟೈರ್ ಕುಕ್ ದಾಖಲೆ ಮುರಿದ ಜೋ ರೂಟ್

ಶುಕ್ರವಾರ, ಜೂನ್ 16ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ 2023ರ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಶುರುವಾಗಿವೆ. ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಕಲೆ ಹಾಕಿ ಡಿಕ್ಲೇರ್ ಮಾಡಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್ ಮೊದಲ ದಿನದಾಟದಲ್ಲಿ 78 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 393 ರನ್ ಗಳಿಸಿ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

Ashes 2023: Joe Root Overtake Don Bradman And Alastair Cook Record After 30th Test Century

ಈ ವೇಳೆ ಇಂಗ್ಲೆಂಡ್‌ ತಂಡದ ಮಾಜಿ ನಾಯಕ ಹಾಗೂ ಮಧ್ಯಮ ಕ್ರಮಾಂಕದ ಸ್ಟಾರ್ ಬ್ಯಾಟ್ಸ್‌ಮನ್ ಜೋ ರೂಟ್ ಭರ್ಜರಿ ಶತಕ ಬಾರಿಸುತ್ತಿದ್ದಂತೆಯೇ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದ್ದಾರೆ.

32 ವರ್ಷದ ಜೋ ರೂಟ್ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಶತಕದೊಂದಿಗೆ ಕ್ರಿಕೆಟ್ ದಂತಕಥೆ ಸರ್ ಡಾನ್ ಬ್ರಾಡ್ಮನ್ ಮತ್ತು ಇಂಗ್ಲೆಂಡ್‌ನ ಮಾಜಿ ಸಹ ಆಟಗಾರ ಅಲಸ್ಟೈರ್ ಕುಕ್ ಅವರ ದಾಖಲೆಯನ್ನು ಅಳಿಸಿ ಹಾಕಿದರು.

ಜೋ ರೂಟ್ ತಮ್ಮ ವೃತ್ತಿಜೀವನದ 30ನೇ ಟೆಸ್ಟ್ ಶತಕವನ್ನು ಸಿಡಿಸುತ್ತಿದ್ದಂತೆಯೇ, ಆಸೀಸ್ ಮಾಜಿ ದಿಗ್ಗಜ ಡಾನ್ ಬ್ರಾಡ್ಮನ್ ಅವರ 29 ಟೆಸ್ಟ್ ಶತಕಗಳ ಸಾಧನೆಯನ್ನು ಮೀರಿಸಿದರು.

ಇನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ 30 ಶತಕಗಳ ನಂತರ, ಜೋ ರೂಟ್ ಅವರು ಇಂಗ್ಲೆಂಡ್ ತಂಡದ ಪರ ವೇಗವಾಗಿ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದ ಇಂಗ್ಲಿಷ್ ಆಟಗಾರನಾದರು. ಮಾಜಿ ನಾಯಕ ಅಲಸ್ಟೈರ್ ಕುಕ್ 239 ಇನ್ನಿಂಗ್ಸ್‌ಗಳಲ್ಲಿ 30ನೇ ಶತಕವನ್ನು ಗಳಿಸಿದ್ದರೆ, ಜೋ ರೂಟ್ 233ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದರು.

ಜೋ ರೂಟ್ 152 ಎಸೆತಗಳಲ್ಲಿ 118 ರನ್ ಗಳಿಸಿ ಅಜೇಯರಾಗುಳಿದರು ಮತ್ತು ಅವರ ಶತಕ ಸಹಾಯದಿಂದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 400 ರನ್‌ಗಳ ಗಡಿ ಸಮೀಪಿಸಿತು. ಮೊದಲ ದಿನದಾಟದ ಮುಕ್ತಾಯಕ್ಕೆ ಕೆಲವೇ ನಿಮಿಷಗಳು ಬಾಕಿ ಇರುವಾಗ ಇಂಗ್ಲೆಂಡ್ ತಂಡವು 8 ವಿಕೆಟ್‌ಗೆ 393 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು.

ಇನ್ನು ಝಾಕ್ ಕ್ರಾಲಿ ಮತ್ತು ಜಾನಿ ಬೈರ್‌ಸ್ಟೋವ್ ಕೂಡ ವೇಗದ ಅರ್ಧಶತಕಗಳನ್ನು ಬಾರಿಸಿದರು. ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಮ್ಮ "ಬಜ್‌ಬಾಲ್' ಶೈಲಿಯನ್ನು ಮುಂದುವರಿಸಿದರು. ಮೊದಲ ಸೆಷನ್‌ನಲ್ಲಿ ಇಂಗ್ಲೆಂಡ್ ತಂಡ 27 ಓವರ್‌ಗಳಲ್ಲಿ 124 ರನ್ ಗಳಿಸಿತು.

ಝಾಕ್ ಕ್ರಾಲಿ ಮೊದಲ ಸೆಷನ್‌ನಲ್ಲಿಯೇ ಅರ್ಧ ಶತಕ ಗಳಿಸಿದರು ಮತ್ತು ಅಂತಿಮವಾಗಿ ಭೋಜನ ವಿರಾಮದ ಮೊದಲು ಔಟಾಗುವ ಮುನ್ನ 73 ಎಸೆತಗಳಲ್ಲಿ 61 ರನ್ ಬಾರಿಸಿದರು.

ಈ ಮಧ್ಯೆ, ಹ್ಯಾರಿ ಬ್ರೂಕ್ ಮತ್ತು ಜೋ ರೂಟ್ ಎರಡನೇ ಅವಧಿಯಲ್ಲಿ ಇಂಗ್ಲೆಂಡ್ ತಂಡಕ್ಕೆ ರನ್ ಕೊಡುಗೆ ನೀಡಿದರು. ಹ್ಯಾರಿ ಬ್ರೂಕ್ 32 ರನ್‌ ಗಳಿಸಿದ್ದಾಗ ವಿಚಿತ್ರ ರೀತಿಯಲ್ಲಿ ಔಟಾದರು. ನಾಯಕ ಬೆನ್ ಸ್ಟೋಕ್ಸ್ ಕೇವಲ 1 ರನ್ ಗಳಿಸಿ ಔಟಾದಾಗ, ಇಂಗ್ಲೆಂಡ್ 176 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಆ ಬಳಿಕ ಜಾನಿ ಬೈರ್‌ಸ್ಟೋ ಮತ್ತು ಜೋ ರೂಟ್ 6ನೇ ವಿಕೆಟ್‌ಗೆ ಶತಕದ ಜೊತೆಯಾಟ ನಿರ್ಮಿಸಿ, ಸ್ಕೋರ್‌ಬೋರ್ಡ್‌ನಲ್ಲಿ ರನ್ ಹೆಚ್ಚಿಸಿದರು. ಜಾನಿ ಬೈರ್‌ಸ್ಟೋವ್ 78 ಎಸೆತಗಳಲ್ಲಿ 78 ರನ್ ಗಳಿಸಿ ಔಟಾದರು.

Story first published: Saturday, June 17, 2023, 10:37 [IST]
Other articles published on Jun 17, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+