For Quick Alerts
ALLOW NOTIFICATIONS  
For Daily Alerts
 

ಬ್ಯಾಟಿಂಗ್‌ನಲ್ಲಿ ನಂಬರ್ 1 ಸ್ಥಾನಕ್ಕೇರಿದ ಬಳಿಕ ಬೌಲಿಂಗ್‌ನತ್ತ ರೂಟ್ ಚಿತ್ತ? ಲಾರ್ಡ್ಸ್ ಟೆಸ್ಟ್‌ಗೂ ಮುನ್ನ ಆಸಿಸ್‌ಗೆ ಎಚ್ಚರಿಕೆ

ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಸೋಲು ಅನುಭವಿಸಿದ್ದು ಇದೀಗ ಎರಡನೇ ಪಂದ್ಯಕ್ಕೆ ಸಿದ್ಧವಾಗುತ್ತಿದೆ. ಲಾರ್ಡ್ಸ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯ ಆಯೋಜನೆಯಾಗಲಿದ್ದು ಈ ಪಂದ್ಯದಲ್ಲಿ ಗೆಲುವು ಸಾಧಿಸಿ ಸರಣಿಯನ್ನು ಸಮಬಲಗೊಳಿಸಲೇಬೇಕೆಂದು ಇಂಗ್ಲೆಂಡ್ ಹಠಕ್ಕೆ ಬಿದ್ದಿದೆ. ಪಂದ್ಯದ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾ ತಂಡಕ್ಕೆ ಮಾತಿನ ಮೂಲಕ ಪದೇ ಪದೇ ಎಚ್ಚರಿಕೆ ನೀಡುತ್ತಿರುವ ಇಂಗ್ಲೆಂಡ್ ತಂಡದ ಮುಂದಿನ ಪಂದ್ಯದ ರಣತಂತ್ರ ಹೇಗಿರಲಿದೆ ಎಂಬುದು ಕುತೂಹಲ ಮೂಡಿಸಿದೆ.

ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಪ್ರಮುಖ ಆಟಗಾರ ಜೋ ರೂಟ್ ಆಸ್ಟ್ರೇಲಿಯಾ ತಂಡಕ್ಕೆ ಎಚ್ಚರಿಕೆ ನೀಡಿದ್ದಾರೆ. ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಜೋ ರೂಟ್ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಆದರೆ ಇದೀಗ ಜೋ ರೂಟ್ ಲಾರ್ಡ್ಸ್ ಪಂದ್ಯದಲ್ಲಿ ತಮ್ಮ ಬೌಲಿಂಗ್ ಮೂಲಕ ಎದುರಾಳಿಗೆ ಆಘಾತ ನೀಡುವ ಬಗ್ಗೆ ಮಾತನಾಡಿದ್ದಾರೆ.

Joe Root sends message to Australia

ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಬಿಬಿಸಿ ಸ್ಪೋರ್ಟ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜೋ ರೂಟ್ ಟೆಸ್ಟ್ ಪಂದ್ಯದಲ್ಲಿ ಯಾವಾಗಲೂ ತಾನು ವಿಕೆಟ್ ಪಡೆಯಲು ಸಿದ್ಧವಾಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ತಂಡಕ್ಕೆ ದೊಡ್ಡ ಯಶಸ್ಸು ತಂದುಕೊಡುವುದು ತನ್ನ ಉದ್ದೇಶ ಎಂದಿದ್ದಾರೆ. ಮೊದಲ ಪಂದ್ಯದಲ್ಲಿ ರೂನ್ ಟ್ರೆವಿಸ್ ಹೆಡ್ ವಿಕೆಟ್ ಪಡೆದು ತಂಡಕ್ಕೆ ಮೇಲುಗೈ ಒದಗಿಸಿದ್ದರು ಜೋ ರೂಟ್.

"ನಿಮ್ಮ ತಂಡಕ್ಕೆ ಕೊಡುಗೆ ಈಡಲು ಅವಕಾಶ ದೊರೆತರೆ ಅದು ಶ್ರೇಷ್ಠವಾದ ಸಂಗತಿ. ಆಗ ನಾವು ಅದರಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ಬಯಸುತ್ತೇವೆ ಮತ್ತು ದೊಡ್ಡ ಕ್ಷಣಗಳನ್ನು ನಮ್ಮದಾಗಿಸಿಕೊಳ್ಳುವ ಪ್ರಯತ್ನ ನಡೆಸುತ್ತೇವೆ" ಎಂದಿದ್ದಾರೆ ಜೋ ರೂಟ್. ಜೋ ರೂಟ್ ಟೆಸ್ಟ್‌ ಕ್ರಿಕೆಟ್‌ನ ಇತಿಹಾಸದಲ್ಲಿ 10,000ಕ್ಕೂ ಅಧಿಕ ರನ್‌ಗಳಿಸಿ 50ಕ್ಕೂ ಅಧಿಕ ವಿಕೆಟ್ ಪಡೆದುಕೊಂಡ ಕೇವಲ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ ಜಾಕಸ್ ಕ್ಯಾಲಿಸ್ ಹಾಗೂ ಸ್ಟೀವ್ ವಾ ಮಾತ್ರವೇ ಈ ಸಾಧನೆ ಮಾಡಿರುವ ಉಳಿದ ಇಬ್ಬರು ಕ್ರಿಕೆಟಿಗರು.

ಇನ್ನು ಈ ಸಂದರ್ಭದಲ್ಲಿ ಜೋ ರೂಟ್ ಮುಂದಿನ ಪಂದ್ಯಗಳಲ್ಲಿಯೂ ಇಂಗ್ಲೆಂಡ್ ತಂಡದಿಂದ ಇದೇ ಶೈಲಿಯ ಪಂದ್ಯಗಳನ್ನು ಎಲ್ಲರೂ ನಿರೀಕ್ಷಿಸಬಹುದು ಎಂದಿದ್ದಾರೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಕ್ರಮಣಕಾರಿಯಾಗಿ ಆಡಿ ಒಂದು ಹಂತದಕ್ಕೆ ಯಶಸ್ಸು ಸಾಧಿಸಿದ್ದರೂ ತನ್ನ ಕೆಲ ನಿರ್ಧಾರಗಳಿಂದಾಗಿ ಹಿನ್ನಡೆ ಅನುಭವಿಸಿತು. ಇನ್ನು ಕೊನೆಯ ದಿನದಾಟಲ್ಲಿ 174 ರನ್‌ಗಳ ಗುರಿಯನ್ನು ಬೆನ್ನಟ್ಟುವ ಸವಾಲಿದ್ದಾಗ ನಾಯಕ ಪ್ಯಾಟ್ ಕಮ್ಮಿನ್ಸ್ ಅವರ ಜವಾಬ್ಧಾರಿಯುತ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ 2 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತು.

"ನಾವು ಇದೇ ರೀತಿಯಲ್ಲಿ ಲಾರ್ಡ್ಸ್‌ ಟೆಸ್ಟ್‌ಗೂ ತೆರಳಲಿದ್ದೇವೆ ಅದಾದ ಬಳಿಕ ಮೂರು ಟೆಸ್ಟ್ ಪಮದ್ಯಗಳಿವೆ. ಎಲ್ಲರೂ ನಮ್ಮಿಂದ ಇಂಥಾ ಕ್ರಿಕೆಟ್ ಪ್ರದರ್ಶನವನ್ನೇ ನಿರೀಕ್ಷಿಸಬಹುದು. ತಂಡವಾಗಿ ನಾವು ಮಾಡಲು ಬಯಸಿರುವುದು ಇದನ್ನು. ನಾವು ಈ ಮೂಲಕ ಸವಾಲೊಡ್ಡುತ್ತಿದ್ದು ಅದೇ ರೀತಿಯಾಗಿ ಸ್ಪರ್ಧಿಸಲಿದ್ದೇವೆ" ಎಂದು ಜೋ ರೂಟ್ ಹೇಳಿಕೆ ನೀಡಿದ್ದಾರೆ.

Story first published: Friday, June 23, 2023, 10:54 [IST]
Other articles published on Jun 23, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+