Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಶಸ್ 2023: ಇಂಗ್ಲೆಂಡ್ 3-2 ಅಂತರದಿಂದ ಸರಣಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಸಂಗಕ್ಕರ

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧದ ಪ್ರತಿಷ್ಠಿತ ಆಶಸ್ ಸರಣಿಯ ನಾಲ್ಕನೇ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೊದಲ ಎರಡು ದಿನಗಳಲ್ಲಿ ಆತಿಥೇಯ ಇಂಗ್ಲೆಂಡ್ ಭರ್ಜರಿ ಮೇಲುಗೈ ಸಾಧಿಸಿದ್ದು ಪಂದ್ಯದಲ್ಲಿ ಹಿಡಿತ ಸಾಧಿಸಿದೆ. ಹೀಗಾಗಿ ಈ ಪಂದ್ಯವನ್ನು ಗೆಲ್ಲುವುದು ಆಸ್ಟ್ರೇಲಿಯಾಗೆ ಕಠಿಣ. ಈ ಸಂದರ್ಭದಲ್ಲಿ ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಕುಮಾರ್ ಸಂಗಕ್ಕರ ಪ್ರತಿಕ್ರಿಯೆ ನೀಡಿದ್ದು ಈ ಪಂದ್ಯವನ್ನು ಇಂಗ್ಲೆಂಡ್ ಗೆಲುವು ಸಾಧಿಸಿದರೆ ಕೊನೆಯ ಪಂದ್ಯವನ್ನು ಕೂಡ ಗೆದ್ದು 3-2 ಅಂತರದಿಂದ ಸರಣಿ ವಶಕ್ಕೆ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಸ್ಕೈ ಸ್ಪೋರ್ಟ್ಸ್‌ನೊಂದಿಗೆ ಮಾತನಾಡಿದ ಸಂಗಕ್ಕರ ಮೈದಾನದಲ್ಲಿ ಆಸ್ಟ್ರೇಲಿಯಾ ತಂಡವು ಗೊಂದಲಕ್ಕೊಳಗಾಗಿರುವುದನ್ನು ನೋಡಿ ಬಹಳ ಸಮಯವಾಗಿದೆ ಎಂದಿದ್ದಾರೆ. ಆಸ್ಟ್ರೇಲಿಯಾ ತಂಡವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 317 ರನ್‌ಗಳಿಗೆ ಆಲೌಟ್ ಮಾಡಿದ ಬಳಿಕ ಭರ್ಜರಿ ಬ್ಯಾಟಿಂಗ್ ನಡೆಸಿರುವ ಇಂಗ್ಲೆಂಡ್ ತಂಡ ಭಾರೀ ಅಂತರದ ಮುನ್ನಡೆಯತ್ತ ಚಿತ್ತ ನೆಟ್ಟಿದೆ.

Ashes 2023: Kumar Sangakkara predicts England win this series by 3-2

"ಬೌಲಿಂಗ್‌ನಲ್ಲಿ ಆಸ್ಟ್ರೇಲಿಯನ್ನರು ಮೈದಾನದಲ್ಲಿ ಗೊಂದಲಕ್ಕೊಳಗಾಗುವುದನ್ನು ನಾನು ಬಹಳ ಸಮಯದ ಬಳಿಕ ನೋಡುತ್ತಿದ್ದೇನೆ. ಏನು ಮಾಡಬೇಕು, ಯಾವ ರೀತಿಯಾಗಿ ಫೀಲ್ಡಿಂಗ್ ಹೊಂದಿಸಬೇಕು ಎಂಬುದರ ಬಗ್ಗೆ ಸಾಖಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ. ನಂತರ ಫೀಲ್ಡಿಂಗ್ ನಿಲ್ಲಸಿರುವುದಕ್ಕಿಂತ ಸಂಪೂರ್ಣ ಭಿನ್ನವಾಗಿ ಬೌಲಿಂಗ್ ನಡೆಸುತ್ತಿದ್ದಾರೆ. ಇದು ನಿಜವಾಗಿಯೂ ಅವರ ಮೇಲೆ ಪರಿಣಾಮ ಬೀರಿದೆ" ಎಂದಿದ್ದಾರೆ ಕುಮಾರ್ ಸಂಗಕ್ಕರ.

ಮುಂದುವರಿದು ಮಾತನಾಡಿದ ಸಂಗಕ್ಕರ ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ಗೆದ್ದರೆ ಅವರು ಈ ಸರಣಿಯನ್ನು 3-2 ಅಂತರದಿಂದ ವಶಪಡಿಸಿಕೊಳ್ಳುತ್ತಾರೆ ಎಂದು ಹೇಳಿದರು. ಇಂಗ್ಲೆಂಡ್ ಎಡ್ಜ್‌ಬಾಸ್ಟನ್ ಮತ್ತು ಲಾರ್ಡ್ಸ್‌ನಲ್ಲಿ ಸೋತಿತ್ತು. ಆದರೆ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಮೂರು ವಿಕೆಟ್‌ಗಳಿಂದ ಆಸೀಸ್ ತಂಡವನ್ನು ಸೋಲಿಸಿತ್ತು.

"ಇಂಗ್ಲೆಂಡ್ ಈ ಟೆಸ್ಟ್ ಗೆದ್ದರೆ ಅವರು ಆಶಸ್ ಅನ್ನು 3-2 ರಿಂದ ವಶಪಡಿಸಿಕೊಳ್ಳಲಿದ್ದಾರೆ. ಇದು ಇಂಗ್ಲೆಂಡ್‌ ತಂಡದ ಪರವಾಗಿ ಸಾಗಿ ಗೆಲುವು ಸಾಧಿಸಿದರೆ ಮುಂದಿನ ಟೆಸ್ಟ್‌ಗೆ ಮೂರು ದಿನಗಳ ಅಂತರ ಮಾತ್ರವೇ ಇರುವ ಕಾರಣ ಇದು ಆಸಿಸ್ ತಂಡಕ್ಕೆ ಬಹಳವಾಗಿ ಕಾಡಲಿದೆ. ಇಂಗ್ಲೆಂಡ್ ಯಾವಾಗ ತಾನು ಮುನ್ನಡೆಯಲ್ಲಿದ್ದು ವೇಗವನ್ನು ಹೆಚ್ಚಿಸಬೇಕು ಎಂಬುದನ್ನು ಕಂಡುಕೊಂಡಿದೆ. ಹೀಗಾಗಿ ಆಟದ ಮೇಲೆ ನಿಯಂತ್ರಣ ಸಾಧಿಸಿದೆ" ಎಂದಿದ್ದಾರೆ ಲಂಕಾ ದಿಗ್ಗಜ ಸಂಗಕ್ಕರ.

ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಮೊಯಿನ್ ಅಲಿ, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
ಬೆಂಚ್: ಆಲಿ ರಾಬಿನ್ಸನ್, ಡೇನಿಯಲ್ ಲಾರೆನ್ಸ್, ಜೋಶ್ ಟಂಗ್

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್
ಬೆಂಚ್: ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್, ಮಾರ್ಕಸ್ ಹ್ಯಾರಿಸ್, ಮೈಕೆಲ್ ನೆಸರ್, ಜೋಶ್ ಇಂಗ್ಲಿಸ್

Story first published: Friday, July 21, 2023, 17:49 [IST]
Other articles published on Jul 21, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+