Ashes 2023: ಭರ್ಜರಿ ಶತಕ ಸಿಡಿಸಿ ಟೀಕೆಗಳಿಗೆ ಉತ್ತರ ನೀಡಿದ ಮಾರ್ನಸ್ ಲ್ಯಾಬುಶೇನ್
ಸತತ ವೈಫಲ್ಯವನ್ನು ಅನುಭವಿಸುತ್ತಿದ್ದ ಮಾರ್ನಸ್ ಲ್ಯಾಬುಶೇನ್ ಆಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ತಂಡಕ್ಕೆ ಅತ್ಯಂತ ಅಗತ್ಯವಿದ್ದ ಸಂದರ್ಭದಲ್ಲಿ ಕಮ್‌ಬ್ಯಾಕ್ ಮಾಡಿದ್ದು ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮಾರ್ನಸ್ ತಮ್ಮ ವೃತ್ತಿ ಜೀವನದ 11ನೇ ಟೆಸ್ಟ್ ಶತಕ ಸಿಡಿಸಿ ಮಿಂಚಿದ್ದು ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ.
ನಾಲ್ಕನೇ ದಿನದಾಟದ ಎರಡನೇ ಸೆಶನ್‌ನಲ್ಲಿ ಮಾರ್ನಸ್ 161ನೇ ಎಸೆತದಲ್ಲಿ ಶತಕವನ್ನು ಪೂರ್ಣಗೊಳಿಸಿದ್ದಾರೆ. ಇದು ಕಳೆದ 7 ತಿಂಗಳಿನಲ್ಲಿ ಮಾರ್ನಸ್ ಲ್ಯಾಬುಶೇನ್ ಸಿಡಿಸಿದ ಮೊದಲ ಶತಕವಾಗಿದ್ದು ಆಶಸ್ ಸರಣಿಯಲ್ಲಿ ಸತತವಾಗಿ ಅನುಭವಿಸುತ್ತಿದ್ದ ಟೀಕೆಗೆ ತಿರುಗೇಟು ನೀಡಿದಂತಾಗಿದೆ. ನಿರ್ಣಾಯಕ ಸಂದರ್ಭದಲ್ಲಿ ಈ ಶತಕ ಬಂದಿದ್ದು ತಂಡಕ್ಕೂ ಮಹತ್ವ ಪಡೆದುಕೊಂಡಿದೆ.

62ನೇ ಓವರ್‌ನ ಮೊದಲ ಎಸೆತದಲ್ಲಿ ಲ್ಯಾಬುಶೇನ್ ಜೋ ರೂಟ್ ಎಸೆತವನ್ನು ಬೃಹತ್ ಸಿಕ್ಸರ್‌ಗೆ ಬಾರಿಸಿ 90 ಗಡಿ ಪ್ರವೇಶಿಸಿದರು. ಅದೇ ಓವರ್‌ನಲ್ಲಿ ಸ್ಲಿಪ್ ಕಾರ್ಡನ್ ಮೂಲಕ ಬೌಂಡರಿ ಪಡೆದುಕೊಂಡರು. ಮುಂದಿನ ಓವರ್‌ನಲ್ಲಿ ಲ್ಯಾಬುಶೇನ್ ಸ್ಪಿನ್ನರ್ ಮೊಯಿನ್ ಅಲಿ ಎಸೆತವನ್ನು ಕವರ್ ಅಟ್ಟುವ ಮೂಲಕ ಸಿಂಗಲ್ ಪಡೆದು ತನ್ನ ಶತಕವನ್ನು ಪೂರ್ತಿಗೊಳಿಸಿದ್ದಾರೆ. ರೂಟ್‌ಗೆ ವಿಕೆಟ್ ಒಪ್ಪಿಸುವ ಮುನ್ನ ಲ್ಯಾಬುಶೇನ್ 111 ರನ್‌ಗಳನ್ನು ಗಳಿಸಿದ್ದರು.
ಪ್ರಸ್ತುತ ನಡೆಯುತ್ತಿರುವ ಆಶಸ್ ಸರಣಿಯಲ್ಲಿ ಮಾರ್ನಸ್ ಸಂಕಷ್ಟದ ಸಮಯವನ್ನು ಎದುರಿಸಿದ್ದಾರೆ. ಬ್ಯಾಟಿಂಗ್‌ನಲ್ಲಿ ತನ್ನ ಅದ್ಭುತ ಕೌಶಲ್ಯಕ್ಕೆ ಹೆಸರಾಗಿದ್ದರೂ ಮೊದಲ ಮೂರು ಪಂದ್ಯದಲ್ಲಿ ವೈಫಲ್ಯ ಕಂಡಿದ್ದರು. ಮಾರ್ನಸ್ ಲ್ಯಾಬುಶೇನ್ ಅವರ ಈ ಕಳಪೆ ಪ್ರದರ್ಶನ ಕ್ರಿಕೆಟ್ ಅಭಿಮಾನಿಗಳನ್ನು ಹುಬ್ಬೇರುವಂತೆ ಮಾಡಿತ್ತು. ಕಡೆಗೂ ಮಾರ್ನಸ್ ಫಾರ್ಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ನಾಲ್ಕನೇ ದಿನದಾಟದಲ್ಲಿ ಮಳೆ ಅಡ್ಡಿಯುಂಟು ಮಾಡಿದ್ದು ಆಸ್ಟ್ರೇಲಿಯಾ 214 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಮಿಚೆಲ್ ಮಾರ್ಶ್ ಹಾಗೂ ಕ್ಯಾಮರೂನ್ ಗ್ರೀನ್ ಕ್ರೀಸ್‌ನಲ್ಲಿದ್ದು ಮತ್ತೊಂದು ದೊಡ್ಡ ಜೊತೆಯಾಟದ ನಿರೀಕ್ಷೆ ಮೂಡಿಸಿದ್ದಾರೆ. ಈ ಪಂದ್ಯದಲ್ಲಿ ಇನ್ನು ಕೂಡ ಆಸ್ಟ್ರೇಲಿಯಾ 61 ರನ್‌ಗಳ ಹಿನ್ನಡೆಯಲ್ಲಿದ್ದು ಇಂಗ್ಲೆಂಡ್ ತಂಡ ಈ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ.
ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಮೊಯಿನ್ ಅಲಿ, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
ಬೆಂಚ್: ಆಲಿ ರಾಬಿನ್ಸನ್, ಡೇನಿಯಲ್ ಲಾರೆನ್ಸ್, ಜೋಶ್ ಟಂಗ್
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್
ಬೆಂಚ್: ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್, ಮಾರ್ಕಸ್ ಹ್ಯಾರಿಸ್, ಮೈಕೆಲ್ ನೆಸರ್, ಜೋಶ್ ಇಂಗ್ಲಿಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications