ವಾರ್ನರ್, ಸ್ಮಿತ್ ನಿವೃತ್ತಿ!: ಮೈಕಲ್ ವಾನ್ ನೀಡಿದ ಸ್ಪೋಟಕ ಹೇಳಿಕೆಗೆ ಬೆಚ್ಚಿಬಿದ್ದ ಆಸ್ಟ್ರೇಲಿಯಾ ಅಭಿಮಾನಿಗಳು!!
ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಆಗಾಗ ವಿಚಿತ್ರ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಾಗುವುದು ಸಾಮಾನ್ಯ. ಇಂಗ್ಲೆಂಡ್ ತಂಡ ಯಾವುದೇ ತಂಡದ ವಿರುದ್ಧ ಆಡುತ್ತಿದ್ದರೂ ಎದುರಾಳಿ ತಂಡದ ವಿರುದ್ಧ ಮೈಕಲ್ ವಾನ್ ಅವರ ಮೈಂಡ್ ಗೇಮ್ ನಿವೃತ್ತಿಯ ನಂತರವೂ ಮುಂದುವರಿದಿದೆ. ಇದೀಗ ಆಶಸ್ ಸರಣಿಯ ಅಂತಿಮ ಹಂತದಲ್ಲಿರುವ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಅಭಿಮಾನಿಗಳಿಗೆ ಆಘಾತ ನೀಡುವಂತಾ ಹೇಳಿಕೆಯೊಂದನ್ನು ನೀಡಿ ಸುದ್ದಿಯಾಗಿದ್ದಾರೆ.
ಆಸ್ಟ್ರೇಲಿಯಾ ತಂಡದ ಇಬ್ಬರು ದಿಗ್ಗಜ ಆಟಗಾರರಾದ ಸ್ಟೀವ್ ಸ್ಮಿತ್ ಹಾಗೂ ಮೈಕಲ್ ವಾನ್ ಆಶಸ್ ಸರಣಿಯ ಕೊನೆಯ ಪಂದ್ಯ ಓವಲ್ ಟೆಸ್ಟ್‌ನ ಬಳಿಕ ನಿವೃತ್ತಿಯಾಗಲಿದ್ದಾರೆ ಎಂಬ ಗಾಳಿಸುದ್ದುಯನ್ನು ನಾನು ಕೇಳಿಕೊಂಡಿದ್ದೇನೆ ಎಂದಿದ್ದಾರೆ ಮೈಕಲ್ ವಾನ್. ಇಂಗ್ಲೆಂಡ್ ನಾಯಕನ ಈ ಹೇಳಿಕೆ ಆಸ್ಟ್ರೇಲಿಯಾ ಅಭಿಮಾನಿಗಳಿಗೆ ಶಾಕ್ ನೀಡಿದ್ದರೆ ಉಳಿದ ಕ್ರಿಕೆಟ್ ಅಭಿಮಾನಿಗಳಿಗೆ ಕೂಡ ಕುತೂಹಲ ಮೂಡುವಂತೆ ಮಾಡಿದೆ.

ಸ್ಟೀವ್ ಸ್ಮಿತ್ ಆಶಸ್ ಸರಣಿಯ ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ 32ನೇ ಟೆಸ್ಟ್ ಶತಕ ಸಿಡಿಸಿ ಈ ಟೆಸ್ಟ್‌ನ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಈ ಸಾಧನೆಯಿಂದಾಗಿ ಆಸ್ಟ್ರೇಲಿಯಾದ ದಿಗ್ಗಜ ಸ್ಟೀವ್ ವಾ ಅವರನ್ನು ಟೆಸ್ಟ್ ಶತಕದ ಪಟ್ಟಿಯಲ್ಲಿ ಹಿಂದಿಕ್ಕಿದರು. ಇದು ಆಶಸ್‌ನಲ್ಲಿ ಸ್ಮಿತ್ ಬಾರಿಸಿದ 12ನೇ ಶತಕ ಎಂಬುದು ಮತ್ತೊಂದು ಗಮನಾರ್ಹ ಅಂಶ. ಸಾಂಪ್ರದಾಯಿದ ಎದುರಾಳಿಗಳ ವಿರುದ್ಧ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು ಈಗ ಇಂಗ್ಲೆಂಡ್ ವಿರುದ್ಧ ಸ್ಮಿತ್ ಅವರಿಗಿಂತ ಹಚ್ಚು ಶತಕ ಸಿಡಿಸಿದ ಆಟಗಾರನಾಗಿ 19 ಶತಕ ಸಿಡಿಸಿರುವ ಬ್ರಾಡ್ಮನ್ ಮಾತ್ರವೇ ಉಳಿದುಕೊಂಡಿದ್ದಾರೆ.
ಮತ್ತೊಂದೆಡೆ ಡೇವಿಡ್ ವಾರ್ನರ್ ಈ ಇಂಗ್ಲೆಂಡ್ ಪ್ರವಾಸದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಅವರು ಸ್ಥಿರವಾದ ಪ್ರದರ್ಶನ ನೀಡಲು ಪರದಾಡುತ್ತಿರುವುದು ಸ್ಪಷ್ಟವಾಗಿದೆ. ಲಾರ್ಡ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಲೀಡ್ಸ್ ಹಾಗೂ ಮ್ಯಾಂಚೆಸ್ಟರ್‌ನಲ್ಲಿ ನೀಡಿದ ಪ್ರದರ್ಶನ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ಇನ್ನು ವಾರ್ನರ್ ಈ ವರ್ಷಾರಂಭದಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ಬಗ್ಗೆ ಸುಳಿವು ನೀಡಿದ್ದರು. ಇತ್ತ ಸ್ಟೀವ್ ಸ್ಮಿತ್ ಇಂಗ್ಲೆಂಡ್ ನೆಲದಲ್ಲಿ ಆಡುವ ಕೊನೆಯ ಆಶಸ್ ಸರಣಿ ಇದು ಎಂಬ ಮಾತುಗಳು ಕೇಳಿಬರುತ್ತಿದೆ. ಈ ಸಂದರ್ಭದಲ್ಲಿಯೇ ಮೈಕಲ್ ವಾನ್ ಈ ಇಬ್ಬರು ದಿಗ್ಗಜ ಆಟಗಾರರ ನಿವೃತ್ತಿಯ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳಿಂದ ಈ ರೀತಿಯ ಮಾತುಗಳು ಕೇಳಿ ಬರುತ್ತಿವೆ ಎಂದು ಮೈಕಲ್ ವಾನ್ ಹೇಳಿಕೊಂಡಿದ್ದಾರೆ. "ಮೈಳೆಯ ಸಂದರ್ಭದಲ್ಲಿ ಪತ್ರಕರ್ತರಿಗೆ ಸ್ವಲ್ ಬೋರ್ ಆಗುತ್ತದೆ. ಆ ಸಂದರ್ಭದಲ್ಲಿ ಕೆಲ ವಿಚಾರಗಳನ್ನು ಚರ್ಚಿಸುತ್ತಾರೆ. ಓವಲ್ ಟೆಸ್ಟ್‌ನಲ್ಲಿ ವಾರ್ನರ್ ಆಡಿದರೆ ಅದು ಅವರ ಅಂತಿಮ ಟೆಸ್ಟ್ ಪಂದ್ಯವಾಗಲಿದೆ ಎಂಬ ಪಿಸು ಮಾತು ಕೇಳಿಸಿಕೊಂಡಿದ್ದೇನೆ. ಆದರೆ ಎಲ್ಲಿಂದ ಅವರಿಗೆ ಆ ಸುದ್ದಿ ದೊರೆತಿದೆ ಎಂಬುದು ನನಗೆ ತಿಳಿದಿಲ್ಲ" ಎಂದಿದ್ದಾರೆ ಮೈಕಲ್ ವಾನ್.
"ಸ್ಟೀವ್ ಸ್ಮಿತ್ ವಿಚಾರವಾಗಿಯೂ ನಾನು ಪಿಸು ಮಾತನ್ನು ಕೇಳಿಸಿಕೊಂಡಿದ್ದು ಅದು ಕೂಡ ಗಟ್ಟಿಯಾಗಿಯೇ ಇತ್ತು ಮತ್ತು ಈ ಬಗ್ಗೆಯೂ ಎಲ್ಲಿಂದ ಈ ಮಾಹಿತಿ ದೊರೆತಿದೆ ಎನ್ನುವುದು ನನಗೆ ತಿಳಿದಿಲ್ಲ. ಆಸ್ಟ್ರೇಲಿಯಾ ಪರವಾಗಿ ಓವಲ್‌ನಲ್ಲಿ ಸ್ಮಿತ್ ಅವರ ಕೊನೆಯ ಟೆಸ್ಟ್ ಎನ್ನಲಾಗಿದೆ. ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಲ್ಲ, ಇದ ಒಂದು ಗಾಸಿಪ್" ಎಂದು ಆಸ್ಟ್ರೇಲಿಯಾ ಅಭಿಮಾನಿಗಳ ತಲೆಗೆ ಹುಳಬಿಟ್ಟಿದ್ದಾರೆ ಮೈಕಲ್ ವಾನ್.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆಶಸ್ ಸರಣಿಯ ನಾಲ್ಕನೇ ಪಂದ್ಯ ಮಳೆಯಿಂದಾಗಿ ಡ್ರಾದಲ್ಲಿ ಅಂತ್ಯಕಂಡಿದೆ. ಹೀಗಾಗಿ ಇಂಗ್ಲೆಂಡ್ ಗೆಲ್ಲಬಹುದಾಗಿದ್ದ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಹೀಗಾಗಿ ಆಸ್ಟ್ರೇಲಿಯಾ 2-1 ಅಂತರದಿಂದ ಸರಣಿಯಲ್ಲಿ ಮುನ್ನಡೆ ಮುಂದುವರಿಸಿದ್ದು ಟ್ರೋಫಿಯನ್ನು ತನ್ನಲ್ಲಿಯೇ ಉಳಿಸಿಕೊಂಡಿಂತಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications