Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬೈರ್‌ಸ್ಟೋವ್ ಔಟ್ ವಿವಾದದ ಬಳಿಕ ವೈರಲ್ ಆಯ್ತು ಧೋನಿಯ ಆ ನಿರ್ಧಾರದ ವಿಡಿಯೋ!

ಆಶಸ್ ಸರಣಿಯ ಕೊನೆಯ ದಿನದಾಟದಲ್ಲಿ ಜಾನಿ ಬೈರ್‌ಸ್ಟೋವ್ ಔಟ್ ವಿವಾದ ಈಗ ಕ್ರಿಕೆಟ್ ವಲಯದಲ್ಲಿ ಚರ್ಚೆಯ ಕೇಂದ್ರ ವಸ್ತು. ಟ್ವಿಟ್ಟರ್‌ನಲ್ಲಿ ಕ್ರಿಕೆಟ್ ಅಭಿಮಾನಿಗಳು ಈ ವಿಚಾರವಾಗಿ ತಮ್ಮ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಇಂಗ್ಲೆಂಡ್ ವಿರುದ್ಧವೇ ತೆಗೆದುಕೊಂಡ ನಿರ್ಧಾರವೊಂದರ ವಿಡಿಯೋವೊಂದು ಈಗ ಟ್ವಿಟ್ಟರ್‌ನಲ್ಲಿ ಸಾಕಷ್ಟು ವೈರಲ್ ಆಗಿದೆ.

ಎಂಎಸ್ ಧೋನಿ ನಾಯಕನಾಗಿದ್ದಾಗ ಇಂಗ್ಲೆಂಡ್ ತಂಡದ ಬ್ಯಾಟರ್ ಇಯಾನ್ ಬೆಲ್ ಅವರು ರನೌಟ್ ಆಗಿದ್ದರೂ ಭಾರತದ ನಾಯಕ ಧೋನಿ ಆ ನಿರ್ಧಾರವನ್ನು ಬದಲಿಸುವಂತೆ ಮನವಿ ಮಾಡಿ ಮತ್ತೆ ಆಡಲು ಅವಕಾಶ ನೀಡುವಂತೆ ಮಾಡಿದ್ದರು. ಇದರ ವಿಡಿಯೋ ಈಗ ವೈರಲ್ ಆಗಿದೆ. ಇಂಗ್ಲೆಂಡ್ ವಿರುದ್ಧದ ಟಸ್ಟ್ ಪಂದ್ಯದ ಮೂರನೇ ದಿನದಾಟ ಟೀ ವಿರಾಮಕ್ಕೂ ಮುನ್ನ ಕೊನೆಯ ಎಸೆತದಲ್ಲಿ ಸ್ಟ್ರೈಕ್‌ನಲ್ಲಿದ್ದ ಇಯಾನ್ ಮಾರ್ಗನ್ ಚೆಂಡನ್ನು ಲೆಗ್‌ಸೈಡ್‌ಗೆ ಬಾರಿಸಿದ್ದರು.

Ashes 2023: MS Dhoni decision goes viral after Jonny Bairstows controversial dismissal

ಈ ಹೊಡೆತವನ್ನು ಭಾರತದ ಫೀಲ್ಡರ್ ಬೌಂಡರಿ ದಾಟದಂತೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ಚೆಂಡು ಬೌಂಡರಿ ದಾಟಿದೆಯೆಂದು ಭಾವಿಸಿದ ಇಯಾನ್ ಬೆಲ್ ಕ್ರೀಸ್ ಬಿಟ್ಟು ಹೊರ ನಡೆದಿದ್ದರು. ಆದರೆ ಈ ಭಾರತದ ಫಿಲ್ಡರ್ ಬೆಲ್ಸ್ ಎಗರಿಸಿದ್ದಾರೆ. ಇದನ್ನು ಮೂರನೇ ಅಂಪಾಯರ್ ಕೂಡ ಪರಿಶೀಲನೆ ನಡೆಸಿದ್ದು ವಟ್ ಎಂದು ತೀರ್ಪು ನೀಡಿದ್ದರು. ಮೈದಾನದ ದೊಡ್ಡ ಪರದೆಯಲ್ಲೂ ಇದು ಬಿತ್ತರವಾಗಿತ್ತು.

ಹಾಗಿದ್ದರೂ ಟೀಮ್ ಇಂಡಿಯಾ ನಾಯಕ ಎಂಎಸ್ ಧೋನಿ ವಿರಾಮದ ಬಳಿಕ ಇಯಾನ್‌ಬೆಲ್‌ಗೆ ಬ್ಯಾಟಿಂಗ್ ಮುಂದುವರಿಸಲು ಅವಕಾಶ ನೀಡಿದ್ದರು. ಹೀಗಾಗಿ ವಿರಾಮದ ಬಳಿಕ ಇಯಾನ್ ಬೆಲ್ ಬ್ಯಾಟಿಂಗ್ ನಡೆಸಿದ್ದರು. ಇದು ಎಲ್ಲರಿಂದ ಪ್ರಶಂಸೆಗೆ ಪಾತ್ರವಾಗಿದ್ದಲ್ಲದೆ 2020ರಲ್ಲಿ ಧೋನಿ ಸ್ಪಿರಿಟ್ ಆಫ್ ಕ್ರಿಕೆಟ್ ಪ್ರಶಸ್ತಿಗೆ ಪಾತ್ರವಾಗಿದ್ದರು.

ಇದೀಗ ಜಾನಿ ಬೈರ್‌ಸ್ಟೋವ್ ಅವರ ಔಟ್ ತೀರ್ಪು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು ಅಭಿಮಾನಿಗಳು ಆ ವಿಡಿಯೋ ಜೊತೆಗೆ ಹೋಲಿಕೆ ಮಾಡಲಾಗುತ್ತಿದೆ.

ಪಂದ್ಯದ ಮುಕ್ತಾಯದ ಬಳಿಕ ಮಾತನಾಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಇಡೀ ಘಟನೆಯ ಬಗ್ಗೆ ತನ್ನ ನಿಲುವನ್ನು ಹಂಚಿಕೊಂಡಿದ್ದಾರೆ. ತಾನಾಗಿದ್ದರೆ ಈ ಪಂದ್ಯವನ್ನು ರೀತಿಯಾಗಿ ಬಯಸುತ್ತಿರಲಿಲ್ಲ ಎಂದು ಹೇಳುವ ಮೂಲಕ ಆಸ್ಟ್ರೇಲಿಯಾ ತಂಡದ ನಡೆಯ ಬಗ್ಗೆ ಭಿನ್ನಾಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

"ಅದು ಔಟ್ ಎಂಬ ಸತ್ಯವನ್ನು ನಾನು ಅಲ್ಲಗಳೆಯುವುದಿಲ್ಲ ಯಾಕೆಂದರೆ ಅದು ಔಟ್. ಆದರೆ ನಾನು ಅವರ ಭಾಗದಲ್ಲಿದ್ದರೆ ಅಂಪಯರ್‌ಗಳ ಮೇಲೆ ಒತ್ತಡವನ್ನು ಹಾಕಿ ಬ್ಯಾಟರ್‌ಗೆ ಮತ್ತೆ ಆಡಿಸಲು ಅವಕಾಶ ನೀಡಿರುತ್ತಿದ್ದೆ. ನಾನು ಕ್ರೀಡಾಸ್ಪೂರ್ತಿಯ ಬಗ್ಗೆ ಆಳವಾದ ನಂಬಿಕೆಯನ್ನು ಹೊಂದಿದ್ದು ನಾನು ಅಂಥಾ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೆ" ಎಂದಿದ್ದಾರೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್.

ಮುಂದುವರಿದು ಬೆನ್ ಸ್ಟೋಕ್ಸ್ "ಆಸ್ಟ್ರೇಲಿಯಾ ತಂಡಕ್ಕೆ ಅದು ಮ್ಯಾಚ್ ವಿನ್ನಿಂಗ್ ಕ್ಷಣ. ಆದರೆ ನಾನು ಆ ರೀತಿಯಲ್ಲಿ ಪಂದ್ಯವ್ನು ಗೆಲ್ಲಲು ಬಯಸುತ್ತಿದ್ದೆನಾ? ಅದಕ್ಕೆ ನನ್ನ ಉತ್ತರ ಇಲ್ಲ" ಎಂದು ಆಸ್ಟ್ರೇಲಿಯಾ ತಂಡದ ನಿಲುವಿನ ಬಗ್ಗೆ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಮತ್ತೊಂದೆಡೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಇಂಗ್ಲೆಂಡ್ ನಾಯಕನ ಅನಿಸಿಕೆಗೆ ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು ಇದು ನಿಯಮದ ಒಳಗೇ ಇರುವ ಈತಿಯಲ್ಲಿ ಮಾಡಿರುವ ಔಟ್ ಎಂದು ಹೇಳಿಕೊಂಡಿದ್ದಾರೆ. "ಅಲೆಕ್ಸ್ ಕ್ಯಾರಿ ಇದಕ್ಕೂ ಮುನ್ನವೇ ಹಲವು ಬಾರಿ ಇದೇ ರೀತಿ ಆಗಿರುವುದನ್ನು ನೋಡಿದ್ದಾರೆ. ಅಲ್ಲಿ ಯಾವುದೇ ತಡೆ ಇರಲಿಲ್ಲ. ಕ್ಯಾಚ್ ಪಡೆದರು ಹಾಗೂ ನೇರವಾಗಿ ವಿಕೆಟ್‌ಗೆ ಚೆಂಡು ಎಸೆದಿದ್ದಾರೆ"

"ನನ್ನ ಪ್ರಕಾರ ಇದು ಸಂಪೂರ್ಣವಾಗಿ ನ್ಯಾಯಯುತವಾದ ಆಟ. ನಿಯಮ ಇರುವುದೇ ಹಾಗೆ. ಕೆಲವರು ಇದನ್ನು ಒಪ್ಪಿಕೊಳ್ಳದೆ ಇರಬಹುದು. ನಿನ್ನೆ ಕ್ಯಾಚ್ ವಿಚಾರದಲ್ಲಿ ಇದ್ದ ಹಾಗೆಯೇ ಇಲ್ಲಿಯೂ ನಿಯಮ ಇದೆ. ನಾನು ಇದನ್ನು ಆ ದೃಷ್ಟಿಕೋನದಲ್ಲಿ ನೋಡುತ್ತೇನೆ" ಎಂದಿದ್ದಾರೆ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್.

Story first published: Monday, July 3, 2023, 20:23 [IST]
Other articles published on Jul 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+