ಆಶಸ್ 2023: ಲಾರ್ಡ್ಸ್ ಮುಖಾಮುಖಿಗೂ ಮುನ್ನ ಇಂಗ್ಲೆಂಡ್ ತಂಡಕ್ಕೆ ಮಹತ್ವದ ಸಲಹೆ ನೀಡಿದ ನಾಸಿರ್ ಹುಸೇನ್
ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಆಶಸ್ ಟೆಸ್ಟ್ ಪಂದ್ಯ ಜೂನ್ 28 ಬುಧವಾರದಿಂದ ಲಾರ್ಡ್ಸ್‌ನಲ್ಲಿ ಆರಂಭವಾಗಲಿದೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಸೋಲು ಅನುಭವಿಸಿದ ಬಳಿಕ ಇಂಗ್ಲೆಂಡ್ ಮತ್ತೆ ಸರಣಿಯಲ್ಲಿ ಕಮ್‌ಬ್ಯಾಕ್ ಮಾಡಲು ರಣತಂತ್ರಗಳನ್ನು ಸಿದ್ಧಪಡಿಸುತ್ತಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಕಾಮೆಂಟೇಟರ್ ನಾಸಿರ್ ಹುಸೇನ್ ಇಂಗ್ಲೆಂಡ್ ತಂಡಕ್ಕೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ.
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನಾಲ್ವರು ವೇಗಿಗಳೊಂದಿಗೆ ಕಣಕ್ಕಿಳಿಯಲಿ ಎಂದು ನಾಸಿರ್ ಹುಸೇ್ ಸಲಹೆ ನೀಡಿದ್ದು ಸ್ಪಿನ್ನರ್ ಆಗಿ ಜೋ ರೂಟ್ ಅವರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಗಾಯಾಳುವಾಗಿರುವ ಮೊಯೀನ್ ಅಲಿ ಬದಲಿಗೆ ಮಾರ್ಕ್ ವುಡ್ ಅಥವಾ ಕ್ರಿಸ್ ವೋಕ್ಸ್‌ಗೆ ಅವಕಾಶ ನೀಡಬೇಕು ಎಂದಿದ್ದಾರೆ ನಾಸಿರ್ ಹುಸೇನ್.

ಲಾರ್ಡ್ಸ್ ಪಂದ್ಯಕ್ಕೆ ಮಾಜಿ ಇಂಗ್ಲೆಂಡ್ ನಾಯಕ ನಾಸರ್ ಹುಸೇನ್ ವೇಗಿ ಮಾರ್ಕ್ ವುಡ್ ಅವರನ್ನು ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ. 2021/22ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಮಾರ್ಕ್ ವುಡ್ ಅವರ ಬೌಲಿಂಗ್ ದಾಳಿಯನ್ನು ಹುಸೇನ್ ಉಲ್ಲೇಖಿಸಿದರು. ಆ ಸರಣಿಯಲ್ಲಿ, ವುಡ್ ಇಂಗ್ಲೆಂಡ್‌ನ ಪ್ರಮುಖ ವಿಕೆಟ್ ಟೇಕರ್ ಆಗಿ ಹೊರಹೊಮ್ಮಿದರು.
ಇನ್ನು ಮಾರ್ಕ್ ವೋಕ್ಸ್ ಲಾರ್ಡ್ಸ್ ಮೈದಾಣದಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಮಾರ್ಚ್ 2022ರಲ್ಲಿ ಕೊನೆಯ ಬಾರಿಗೆ ಟೆಸ್ಟ್ ಆಡಿದ್ದ ವೋಕ್ಸ್ ಲಾರ್ಡ್ಸ್‌ನಲ್ಲಿ ನಡೆದ ಐದು ಪಂದ್ಯಗಳಲ್ಲಿ ಆಡಿದ್ದು ಇಲ್ಲಿ ಗಮನಾರ್ಹ ದಾಖಲೆಯನ್ನು ಹೊಂದಿದ್ದಾರೆ. ಈ ಐತಿಹಾಸಿಕ ಮೈದಾನದಲ್ಲಿ 34 ವರ್ಷದ ಆಲ್‌ರೌಂಡರ್ 11.33 ಸರಾಸರಿಯಲ್ಲಿ 27 ವಿಕೆಟ್‌ಗಳನ್ನು ಮತ್ತು 61.2 ರ ಅದ್ಭುತ ಸರಾಸರಿಯೊಂದಿಗೆ 306 ರನ್ ಗಳಿಸಿದ್ದಾರೆ.
ಎಡ್ಜ್‌ಬಾಸ್ಟನ್‌ನಲ್ಲಿ ಎರಡು ವಿಕೆಟ್‌ಗಳ ಸೋಲನ್ನು ಅನುಭವಿಸಿದ ನಂತರ ಲಾರ್ಡ್ಸ್ ಟೆಸ್ಟ್‌ನಲ್ಲಿ ಕಣಕ್ಕಿಳಿಯುವ ಮುನ್ನ ಇಂಗ್ಲೆಂಡ್ ತಂಡ ಆಶಸ್ ಸರಣಿಯಲ್ಲಿ 0-1 ಅಂತರದಿಂದ ಹಿಂದಿದೆ. ಹಾಗಿದ್ದರೂ ಈ ವರ್ಷ ಇಂಗ್ಲೆಂಡ್ ತಂಡದ ಒಟ್ಟಾರೆ ಪ್ರದರ್ಶನದ ಅಂಕಿಅಂಶಗಳು ಅದ್ಭುತವಾಗಿದ್ದು ನಾಯಕ ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ 14 ಟೆಸ್ಟ್‌ಗಳಲ್ಲಿ 11 ಪಂದ್ಯಗಳನ್ನು ಇಂಗ್ಲೆಂಡ್ ಗೆದ್ದಿರುವುದು ಆತ್ಮವಿಶ್ವಾಸದಲ್ಲಿರುವಂತೆ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications