Ashes 2023: ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ನಾಥನ್ ಲಿಯಾನ್; ಈ ಸಾಧನೆ ಮಾಡಿದ ಮೊದಲ ಬೌಲರ್!
ಬುಧವಾರ, ಜೂನ್ 28ರಂದು ಲಾರ್ಡ್ಸ್‌ನಲ್ಲಿ ಆಶಸ್ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಮಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಇದೇ ವೇಳೆ ಆಸ್ಟ್ರೇಲಿಯಾ ತಂಡದ ಸ್ಪಿನ್ನರ್ ನಾಥನ್ ಲಿಯಾನ್ ಅವರು ಬುಧವಾರ ಆಶಸ್ ಟೆಸ್ಟ್ ಪಂದ್ಯಕ್ಕಾಗಿ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುತ್ತಿದ್ದಂತೆಯೇ ಐತಿಹಾಸಿಕ ಮೈಲಿಗಲ್ಲು ಸಾಧಿಸಿದರು. ಆಸ್ಟ್ರೇಲಿಯಾ ರಾಷ್ಟ್ರೀಯ ತಂಡಕ್ಕಾಗಿ ಸತತ 100ನೇ ಟೆಸ್ಟ್ ಪಂದ್ಯವಾಡಿದ ಹೆಗ್ಗಳಿಕೆಗೆ ಪಾತ್ರರಾದರು.

ಇನ್ನು ನಾಥನ್ ಲಿಯಾನ್ ಅವರು ವಿಶ್ವದ ಯಾವುದೇ ಬೌಲರ್ ಮಾಡಿರದ ಸಾಧನೆ ಮಾಡಿದ್ದಾರೆ. ಸತತ 100 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡ ಏಕೈಕ ಬೌಲರ್ ಎನಿಸಿದರು. ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಇಂಗ್ಲೆಂಡ್‌ನ ಮಾಜಿ ನಾಯಕ ಅಲೈಸ್ಟರ್ ಕುಕ್ ಮೊದಲ ಸ್ಥಾನದಲ್ಲಿದ್ದಾರೆ.
ಸತತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ಆಟಗಾರರ ಪಟ್ಟಿ
* ಅಲೆಸ್ಟರ್ ಕುಕ್ - 159 ಪಂದ್ಯ
* ಅಲನ್ ಬಾರ್ಡರ್ - 153 ಪಂದ್ಯ
* ಮಾರ್ಕ್ ವಾ - 107 ಪಂದ್ಯ
* ಸುನಿಲ್ ಗವಾಸ್ಕರ್ - 106 ಪಂದ್ಯ
* ಬ್ರೆಂಡನ್ ಮೆಕಲಮ್ - 101 ಪಂದ್ಯ
* ನಾಥನ್ ಲಿಯಾನ್ - 100 ಪಂದ್ಯ
ಬುಧವಾರ, ಜೂನ್ 28ರಂದು ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ 2023ರ ಆಶಸ್ ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಅವರು ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಅವರನ್ನು ಹೊಗಳಿದರು.

ನಾಥನ್ ಲಿಯಾನ್ ತಮ್ಮ ಸತತ 100ನೇ ಟೆಸ್ಟ್ ಪಂದ್ಯವನ್ನು ಲಾರ್ಡ್ಸ್‌ನಲ್ಲಿ ಆಡಲಿದ್ದಾರೆ, ಇದು ಕ್ರಿಕೆಟ್ ಇತಿಹಾಸದಲ್ಲಿ ಯಾವುದೇ ಸ್ಪಿನ್ನರ್‌ಗೆ ಸಾಟಿಯಿಲ್ಲದ ಸಾಧನೆಯಾಗಿದೆ. ದೀರ್ಘಾಯುಷ್ಯವು ಅವರ ಅಸಾಧಾರಣ ಫಿಟ್‌ನೆಸ್ ಮತ್ತು ಫಾರ್ಮ್‌ಗೆ ಸಾಕ್ಷಿಯಾಗಿದೆ ಎಂದು ಪ್ಯಾಟ್ ಕಮ್ಮಿನ್ಸ್ ಹೇಳಿದರು.
2011ರಲ್ಲಿ ಶ್ರೀಲಂಕಾ ವಿರುದ್ಧ ಪದಾರ್ಪಣೆ ಮಾಡಿದ ನಂತರ, 35 ವರ್ಷದ ನಾಥನ್ ಲಿಯಾನ್ ಆಸ್ಟ್ರೇಲಿಯಾ ಪರ 121 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ನಾಥನ್ ಲಿಯಾನ್ ತನ್ನ ಟೆಸ್ಟ್ ವೃತ್ತಿಜೀವನದಲ್ಲಿ 121 ಪಂದ್ಯಗಳಲ್ಲಿ 30.99ರ ಸರಾಸರಿಯಲ್ಲಿ 495 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಆಸ್ಟ್ರೇಲಿಯಾ ಕ್ರಿಕೆಟ್ ಇತಿಹಾಸದಲ್ಲಿ ಲೆಜೆಂಡ್‌ಗಳಾದ ಶೇನ್ ವಾರ್ನ್ (708 ವಿಕೆಟ್) ಮತ್ತು ಗ್ಲೆನ್ ಮೆಕ್‌ಗ್ರಾತ್ (563 ವಿಕೆಟ್) ನಂತರ ನಾಥನ್ ಲಿಯಾನ್ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ಇದಲ್ಲದೆ, ನಾಥನ್ ಲಿಯಾನ್ 2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರದಲ್ಲಿ 20 ಪಂದ್ಯಗಳಿಂದ 88 ವಿಕೆಟ್ ಪಡೆಯುವ ಮೂಲಕ ಪ್ರಮುಖ ವಿಕೆಟ್-ಟೇಕರ್ ಆಗಿದ್ದಾರೆ.
ನ್ಯೂ ಸೌತ್ ವೇಲ್ಸ್ ಮೂಲದ ಸ್ಪಿನ್ನರ್ ನಾಥನ್ ಲಿಯಾನ್ 2023ರ ಆಶಸ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಸ್ಪಿನ್ ಬೌಲರ್ ಆಯ್ಕೆಯಾಗಿದ್ದರು. ಮೊದಲ ಪಂದ್ಯದ ಎರಡು ಇನ್ನಿಂಗ್ಸ್‌ಗಳಲ್ಲಿ 149/4 ಮತ್ತು 80/4 ಅಂಕಿಅಂಶ ಪಡೆದರು.
ಕುಮಾರ್ ಸಂಗಕ್ಕಾರ ರೂಪದಲ್ಲಿ ಮೊದಲ ಟೆಸ್ಟ್ ವಿಕೆಟ್
ನಾಥನ್ ಲಿಯಾನ್ ಅವರು ತಮ್ಮ ಟೆಸ್ಟ್ ವೃತ್ತಿಜೀವನವನ್ನು ಅಬ್ಬರದಿಂದ ಪ್ರಾರಂಭಿಸಿದರು. ಈ ಸ್ವರೂಪದಲ್ಲಿ ತಮ್ಮ ಮೊದಲ ಎಸೆತದಲ್ಲಿ ಶ್ರೀಲಂಕಾದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅವರ ವಿಕೆಟ್ ಪಡೆದರು.
ಆಫ್-ಸ್ಪಿನ್ನರ್ ನಾಥನ್ ಲಿಯಾನ್ ಇದುವರೆಗೆ ಆಶಸ್‌ನಲ್ಲಿ 109 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಸರಣಿಯ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಗ್ರ 15 ಬೌಲರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications