Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಶಸ್ 2023: ಸರಣಿಯ ಆರಂಭಕ್ಕೂ ಮುನ್ನ ದಿಗ್ಗಜ ಶೇನ್ ವಾರ್ನ್‌ರನ್ನು ಸ್ಮರಿಸಿದ ನಥನ್ ಲಿಯಾನ್

ಆಸ್ಟ್ರೇಲಿಯಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದು ಇದೀಗ ಆಶ್ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಈ ಬಾರಿಯ ಆಶಸ್ ಸರಣಿ ಇಂಗ್ಲೆಂಡ್ ನೆಲದಲ್ಲಿ ನಡೆಯಲಿದ್ದು ಆಸ್ಟ್ರೇಲಿಯಾ ತಂಡ ಈ ಸರಣಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಹಿರಿಯ ಆಟಗಾರ ನಥನ್ ಲಿಯಾನ್ ಪ್ರತಿಕ್ರಿಯೆ ನೀಡಿದ್ದು ಈ ಬಾರಿಯ ಆಶಸ್ ಸರಣಿಯಲ್ಲಿ ಶೇನ್ ವಾರ್ನ್ ಅವರ ಅನುಪಸ್ಥಿತಿ ಕಾಡಲಿದೆ ಎಂದಿದ್ದಾರೆ.

"ಇದು ಬಹಳ ಕಠಿಣವಾದ ಸಂದರ್ಭ. ಅವರ ಧ್ವನಿಯನ್ನು ಈ ಬಾರಿ ಕೇಳಿಕೊಳ್ಳುವುದಿಲ್ಲ. ಮೈಕ್ ಹಿಡಿದುಕೊಂಡರೆ ಆತ ರಿಚಿ ಬೆನೌಡ್ ರೀತಿ. ಆತನಲ್ಲಿರುವ ಅಗಾಧವಾದ ಜ್ಞಾನವನ್ನು ಅವರು ತಮ್ಮಂತಾ ಆಟಗಾರರಿಗೆ ಹಾಗೂ ಪ್ರೇಕ್ಷಕರಿಗೂ ಹಂಚುತ್ತಿದ್ದರು" ಎಂದು ನಥನ್ ಲಿಯಾನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಇಎಸ್‌ಪಿಎನ್ ಕ್ರಿಕ್‌ ಇನ್‌ಫೋ ವರದಿ ಮಾಡಿದೆ.

Ashes 2023: Nathan Lyon remembered Shane Warne ahead of Ashes said Australia will make him proud

ಆಸ್ಟ್ರೇಲಿಯನ್ ಕ್ರಿಕೆಟಿಗರು ಮತ್ತು ಸ್ಪಿನ್ನರ್‌ಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಪ್ರದರ್ಶನದ ಮೂಲಕ ದಿಗ್ಗಜ ಆಟಗಾರ ಹೆಮ್ಮೆ ಪಡುವಂತೆ ಮಾಡಬಹುದು ಎಂದು ನಥನ್ ಲಿಯಾನ್ ಭರವಸೆ ವ್ಯಕ್ತಪಡಿಸಿದ್ದಾರೆ. "ಕ್ರಿಕೆಟ್ ಜಗತ್ತು ಅವರನ್ನು ಪ್ರತಿದಿನವೂ ಮಿಸ್ ಮಾಡಿಕೊಳ್ಳುತ್ತದೆ. ನಾವು ಆಸ್ಟ್ರೇಲಿಯಾದ ಕ್ರಿಕೆಟಿಗರು, ಆಸ್ಟ್ರೇಲಿಯಾದ ಸ್ಪಿನ್ನರ್‌ಗಳು ಮೈದಾನಕ್ಕಿಳಿದು ಅವರು ಹೆಮ್ಮೆ ಪಡುವಂತೆ ಮಾಡಬಹುದು" ಎಂದಿದ್ದಾರೆ ಲಿಯಾನ್.

ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಕಳೆದ ವರ್ಷ ತಮ್ಮ 52ನೇ ವಯಸ್ಸಿನಲ್ಲಿ ಥಾಯ್ಲೆಂಡ್‌ನ ಕೊಹ್ ಸಮುಯಿಯಲ್ಲಿ ಪ್ರದೇಶದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಗೆಳೆಯರ ಜೊತೆಗೆ ರಜಾ ಸಮಯವನ್ನು ಕಳೆಯಲು ತೆರಳಿದ್ದಾಗ ಈ ಘಟನೆ ನಡೆಸಿತ್ತು. ಶೇನ್ ವಾರ್ನ್ 1992ರಿಂದ 2007ರ ಮಧ್ಯೆ 145 ಟೆಸ್ಟ್ ಪಂದ್ಯಗಳನ್ನಾಡಿದ್ದು 194 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 1001 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಈ ದಿಗ್ಗಜ ಆಟಗಾರ.

Story first published: Tuesday, June 13, 2023, 23:41 [IST]
Other articles published on Jun 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+