For Quick Alerts
ALLOW NOTIFICATIONS  
For Daily Alerts
 

ಮೊಯೀನ್ ಅಲಿಗೆ ಅದ ಪರಿಸ್ಥಿತಿಗೆ ಮರುಕ ವ್ಯಕ್ತಪಡಿಸಿದ ಎದುರಾಳಿ ನಾಥನ್ ಲಿಯಾನ್!

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಪ್ರತಿಷ್ಠಿತ ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ ಜಿದ್ದಾಜಿದ್ದಿನ ಪ್ರದರ್ಶನ ನೀಡುತ್ತಿದ್ದು ಕೊನೆಯ ದಿನದಾಟದಲ್ಲಿ ಮೇಲುಗೈ ಸಾಧಿಸಿ ಪಂದ್ಯವನ್ನು ವಶಕ್ಕೆ ಪಡೆಯಲು ಎರಡು ತಂಡಗಳು ಹಾತೊರೆಯುತ್ತಿದೆ. ಈ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎಂಬುದನ್ನು ವಿಶ್ವ ಕ್ರಿಕೆಟ್‌ನ ಅಭಿಮಾನಿಗಳು ಕಾಯುತ್ತಿದ್ದು ಅಂತಿಮ ದಿನವೂ ಭರಪೂರ ಮನರಂಜನೆ ದೊರೆಯುವುದರಲ್ಲಿ ಅನುಮಾನವಿಲ್ಲ.

ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ದಿಗ್ಗಜ ಸ್ಪಿನ್ನರ್ ನಾಥನ್ ಲಿಯಾನ್ ಎದುರಾಳಿ ಇಂಗ್ಲೆಂಡ್ ತಂಡದ ಸ್ಪಿನ್ನರ್ ಮೊಯೀನ್ ಅಲಿ ಪರಿಸ್ಥಿತಿಯ ಬಗ್ಗೆ ಮರಿಕ ವ್ಯಕ್ತಪಡಿಸಿ ಮಾತನಾಡಿದ್ದಾರೆ. ಮೊಯೀನ್ ಲಿ ಈಗ ಎದುರಿಸುತ್ತಿರುವ ಪರಿಸ್ಥಿತಿಯನ್ನು ಅವರು ಗಾಯಕನೊಬ್ಬ ಸಂಗಿತ ಕಾರ್ಯಕ್ರಮಕ್ಕೂ ಮುನ್ನ ತನ್ನ ಧ್ವನಿಯನ್ನೇ ಕಳೆದುಕೊಂಡಂತಿದೆ ಎಂದಿದ್ದಾರೆ. ಅಷ್ಟಕ್ಕೂ ನಥನ್ ಲಿಯಾನ್ ಮೊಯೀನ್ ಅಲಿ ಬಗ್ಗೆ ಇಂಥಾ ಮಾತುಗಳನ್ನಾಡಲು ಕಾರಣವೇನು? ಮೊಯೀನ್ ಅಲಿ ಎದುರಿಸುತ್ತಿರುವ ಅಂಥಾ ಸಂಕಷ್ಟದ ಸ್ಥಿತಿ ಏನು? ಮುಂದೆ ಓದಿ..

Nathan Lyon Sympathetic On Moeen Ali

ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬಳಿಕ ಎರಡು ವರ್ಷಗಳ ಟೆಸ್ಟ್ ತಂಡಕ್ಕೆ ಮರಳಿ ಆಶಸ್ ಸರಣಿಯಲ್ಲಿ ಭಾಗವಹಿಸಿದ್ದಾರೆ ಮೊಯಿನ್ ಅಲಿ. ಆದರೆ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನದಲ್ಲಿ ಮೊಯೀನ್ ಅಲಿ ಅವರ ಬಲ ತೋರುಬೆರಳಿಗೆ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಬೌಲಿಂಗ್ ಸಂದರ್ಭದಲ್ಲಿ ಹಲವು ಸಂದರ್ಭದಲ್ಲಿ ಅವರು ಮೈದಾನ ಬಿಟ್ಟು ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಗಾಯದ ಹೊರತಾಗಿಯೂ ಮೊಯಿನ್ ಅಲಿ ಮೊದಲ ಇನ್ನಿಂಗ್ಸ್‌ನಲ್ಲಿ ಕ್ಯಾಮರೂನ್ ಗ್ರೀನ್ ಮತ್ತು ಟ್ರಾವಿಸ್ ಹೆಡ್ ಅವರ ವಿಕೆಟ್‌ ಪಡೆದು ಇಂಗ್ಲೆಂಡ್‌ಗೆ ಮೇಲುಗೈ ಒದಗಿಸಿದ್ದರು. ಆದರೆ ಚೆಂಡಿನ ಸೀಮ್ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದ ಕಾರಣ ರನ್ ಹರಿದುಹೋಯಿತು. ಮೂರನೇ ದಿನದಾಟದಲ್ಲಿ ಚಿಕಿತ್ಸೆಗಾಗಿ ಅಂಗಳ ತೊರೆಯುವುದಕ್ಕೂ ಮುನ್ನ ಎಸೆದ ನಾಲ್ಕು ಓವರ್‌ಗಳಲ್ಲಿ 26 ರನ್ ಬಿಟ್ಟುಕೊಟ್ಟಿದ್ದರು ಮೊಯೀನ್ ಅಲಿ. ಅದರಲ್ಲಿ ಪ್ಯಾ್ಟ ಕಮ್ಮಿನ್ಸ್ ಒಂದೇ ಓವರ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿದ್ದು ಕೂಡ ಸೇರಿದೆ.

ಈ ಬಗ್ಗೆ ನಾಥನ್ ಲಿಯಾನ್ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಪ್ರತಿಕ್ರಿಯೆ ನೀಡಿದ್ದಾರೆ. "ನಿಜಕ್ಕೂ ಅದು ಬಹಳ ದೊಡ್ಡ ವಿಚಾರ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇಲ್ಲಿ ನನಗೆ ಮೊಯಿನ್ ಬಗ್ಗೆ ಸಾಕಷ್ಟು ಸಹಾನುಭೂತಿ ಇದೆ. ಎರಡು ವರ್ಷಗಳ ಕಾಲ ಆತ ರೆಡ್ ಬಾಲ್ ಕ್ರಿಕೆಟ್ ಆಡಿರಲಿಲ್ಲ. ಈಗ ಒಮ್ಮೆಲೆ ಸಾಕಷ್ಟು ಓವರ್‌ಗಳ ಬೌಲಿಂಗ್ ಮಾಡಿದ್ದಾರೆ. ಇದು ಒಬ್ಬ ಗಾಯಕನೊಬ್ಬ ಸಂಗೀತ ಕಚೇರಿಗೂ ಮುನ್ನ ಧ್ವನಿಯನ್ನು ಕಳೆದುಕೊಂಡಂಥಾ ಸ್ಥಿತಿ" ಎಂದಿದ್ದಾರೆ ನಾಥನ್ ಲಿಯಾನ್.

ಆಶಸ್ ಸರಣಿಯ ಮೊದಲ ಪಂದ್ಯದ ಕೊನೆಯ ದಿನದಾಟದಲ್ಲಿ ಈಗ ಎರಡು ತಂಡಗಳಿಗೂ ಕೂಡ ಗೆಲುವಿನ ಸಮಾನವಾದ ಅವಕಾಶವಿದೆ. ನಾಲ್ಕನೇ ದಿನದಾಟದ ಅಂತ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ಮೂರು ವಿಕೆಟ್‌ಗಳನ್ನು ಇಂಗ್ಲೆಂಡ್ ಕಬಳಿಸಿದ್ದರೂ ಆಸಿಸ್ ತಂಡದಲ್ಲಿ ಇನ್ನೂ ಬಲಿಷ್ಠ ಆಟಗಾರರ ಪಡೆಯಿದೆ. ಸದ್ಯ ಉಸ್ಮಾನ್ ಖವಾಜ 34 ರನ್‌ಗಳನ್ನು ಗಳಿಸಿ ಕ್ರೀಸ್‌ನಲ್ಲಿದ್ದರೆ ಬೈಟ್‌ ವಾಚ್‌ಮನ್ ಆಗಿ ಕಣಕ್ಕಿಳಿದಿರುವ ಸ್ಕಾಟ್ ಬೋಲಂಡ್ ಕೊನೆಯ ದಿನದಾಟನ ಬ್ಯಾಟಿಂಗ್ ಆರಂಭಿಸಲಿದ್ದಾರೆ.

ಆಸ್ಟ್ರೇಲಿಯಾ ತಂಡ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕಿದ್ದರೆ ಅಂತಿಮ ದಿನ 174 ರನ್‌ಗಳನ್ನು ಗಳಿಸುವ ಸವಾಲುಪಡೆದುಕೊಂಡಿದ್ದರೆ ಇಂಗ್ಲೆಂಡ್ ತಂಡಕ್ಕೆ 7 ವಿಕೆಟ್‌ಗಳನ್ನು ಕಬಳಿಸಬೇಕಾದ ಸವಾಲಿದೆ. ಐದು ಪಂದ್ಯಗಳ ಈ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದು ಮುನ್ನಡೆ ಸಾಧಿಸುವುದು ಎರಡು ತಂಡಗಳಿಗೂ ಮಹತ್ವವಾಗಿದೆ.

Story first published: Tuesday, June 20, 2023, 12:48 [IST]
Other articles published on Jun 20, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+