Ashes 2023: ಇಷ್ಟು ರನ್‌ಗಳಿಸಿದರೆ ಆಸ್ಟ್ರೇಲಿಯಾ ವಿರುದ್ಧ ನಾವು ಗೆಲ್ಲುತ್ತೇವೆ ಎಂದ ಇಂಗ್ಲೆಂಡ್ ವೇಗಿ
ಪ್ರತಿಷ್ಠಿತ ಆಶಸ್ ಸರಣಿಯ ಮೊದಲ ಪಂದ್ಯದಲ್ಲಿ ಎರಡು ತಂಡಗಳು ಕೂಡ ತೀವ್ರ ಪೈಪೋಟಿಯ ಹೋರಾಟವನ್ನು ನಡೆಸಿದ್ದು ಪಂದ್ಯದ ಕುತೂಹಲ ಹೆಚ್ಚಾಗಿದೆ. ಆದರೆ ಮೂರನೇ ದಿನದಾಟವಾದ ಭಾನುವಾರ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ಪಂದ್ಯದ ರೋಚಕತೆಯನ್ನು ಕಸಿದುಕೊಂಡಿತ್ತು. ಆದರೆ ಕೊನೆಯ ಎರಡು ದಿನಗಳ ಆಟ ಇನ್ನೂ ಬಾಕಿರುವ ಕಾರಣ ಸಾಕಷ್ಟು ರೋಚಕ ಕ್ಷಣಗಳಿಗೆ ಅಭಿಮಾನಿಗಳು ಸಾಕ್ಷಿಯಾಗಬಹುದು.
ಇನ್ನು ಮೊದಲ ಇನ್ನಿಂಗ್ಸ್‌ನಲ್ಲಿ 7 ರನ್‌ಗಳ ಅಲ್ಪ ಮುನ್ನಡೆಯನ್ನು ಪಡೆದ ಬಳಿಕ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದಿರುವ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಘಾತವುಂಟಾಗಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಕೇವಲ 10.3 ಓವರ್‌ಗಳ ಬ್ಯಾಟಿಂಗ್ ನಡೆಸುವ ಅವಕಾಶ ಮಾತ್ರವೇ ದೊರೆತಿದೆ. ಆದರೆ ಈ ಸಂದರ್ಭದಲ್ಲಿ 28 ರನ್‌ಗಳನ್ನು ಗಳಿಸಿರುವ ಇಂಗ್ಲೆಂಡ್ ತಂಡದ 35 ರನ್‌ಗಳ ಮುನ್ನಡೆ ಪಡೆದಿದೆ ಆರಂಭಿಕರಿಬ್ಬರನ್ನು ಕೂಡ ಕಳೆದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡದ ವೇಗದ ಬೌಲರ್ ಒಲೀ ರಾಬಿನ್ಸನ್ ಮಾತನಾಡಿದ್ದು ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 300ಕ್ಕೂ ಅಧಿಕ ರನ್‌ಗಳನ್ನು ಗಳಿಸಿದರೆ ಖಂಡಿಯವಾಗಿಯೂ ಈ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಲಿದ್ದೇವೆ ಎಂಬ ವಿಶ್ವಾಸದ ಮಾತುಗಳನ್ನಾಡಿದ್ದಾರೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ 300 ರನ್‌ಗಳ ಗುರಿ ನೀಡಲು ಸಾಧ್ತೌಆದರೆ ಅದು ಸ್ಪರ್ಧಾತ್ಮಕ ಮೊತ್ತವೆನಿಸಲಿದೆ ಎಂದಿದ್ದಾರೆ.
ಮೊದಲ ಇನ್ನಿಂಗ್ಸ್‌ನಲ್ಲಿ 7 ರನ್‌ಗಳ ಅಲ್ಪ ಮೊತ್ತದ ಮುನ್ನಡೆ ಸಾಧಿಸಿದ ಬಳಿಕ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಆಸ್ಟ್ರೇಲಿಯಾ ವೇಗಿಗಳು ತಿರುಗೇಟು ನೀಡಿದ್ದಾರೆ. ಮೊದಲಿಗೆ ಬೆನ್ ಡಕೆಟ್ ಅವರನ್ನು 19 ರನ್‌ಗಳಿಸಿದ್ದಾಗ ನಾಯಕ ಪ್ಯಾಟ್ ಕಮ್ಮಿನ್ಸ್ ಔಟ್ ಮಾಡಿದ್ದರೆ ಮುಂದಿನ ಓವರ್‌ನಲ್ಲಿಯೇ ಜಾಕ್ ಕ್ರಾವ್ಲೆ ಕೂಡ ಬೊಲಾಂಡ್ ಎಸೆತಕ್ಕೆ ಔಟಾಗಿದ್ದಾರೆ. ಈ ಇಬ್ಬರು ಆಟಗಾರರು ಔಟಾದ ಬಳಿಕ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ನಂತರ ಆಡಲು ಅವಕಾಶವನ್ನೇ ನೀಡಲಿಲ್ಲ.
ಉಸ್ಮಾನ್ ಖವಾಜ ಅಮೋಘ ಶತಕ ಹಾಗೂ ಅಲೆಕ್ಸ್ ಕ್ಯಾರಿ ಹಾಗೂ ಟ್ರೆವಿಸ್ ಹೆಡ್ ಅವರ ಅರ್ಧ ಶತಕದ ನೆರವಿನಿಂದ ಆಸ್ಟ್ರೇಲಿಯಾ ಇಂಗ್ಲೆಂಡ್ ಸ್ಕೋರ್ ಹಿಂದಿಕ್ಕುವ ವಿಶ್ವಾಸ ಮೂಡಿಸಿತ್ತು. ಆದರೆ ಮೂರನೇ ದಿನದಾಟದಲ್ಲಿ ಬೌಲಿಂಗ್ ಹಾಗೂ ಫಿಲ್ಡೀಂಗ್‌ನಲ್ಲಿಯೂ ಆಕ್ರಮಣಕಾರಿ ಆಟಕ್ಕೆ ಮುಂದಾದ ಇಂಗ್ಲೆಂಡ್ ಆಸ್ಟ್ರೇಲಿಯಾ ತಂಡವನ್ನು 386 ರನ್‌ಗಳಿಗೆ ಆಲವಟ್ ಮಾಡುವಲ್ಲಿ ಯಶಸ್ವಿಯಾಯಿತು. ಅದರಲ್ಲೂ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಉಸ್ಮಾನ್ ಖವಾಕ ಅವರನ್ನು ಔಟ್ ಮಾಡಲು ಇಂಗ್ಲೆಂಡ್ ಬಳಸಿದ ರಣತಂತ್ರ ಅದ್ಭುತವಾಗಿ ಯಶಸ್ಸು ಕಂಡಿತು. ಪ್ಯಾಟ್ ಕಮ್ಮನ್ಸ್ ಹೊರತುಪಡಿಸಿ ಆಸಿಸ್ ಬಾಲಂಗೋಚಿಗಳು ಸುಲಭವಾಗಿ ಔಟಾಗಿದ್ದು ಇಂಗ್ಲೆಂಡ್ ಕೆಲಸ ಸುಲಭವಾಯಿತು.
ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಮೊಯಿನ್ ಅಲಿ, ಸ್ಟುವರ್ಟ್ ಬ್ರಾಡ್, ಒಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್
ಬೆಂಚ್: ಡೇನಿಯಲ್ ಲಾರೆನ್ಸ್, ಜೋಶ್ ಟಂಗ್, ಮ್ಯಾಥ್ಯೂ ಪಾಟ್ಸ್, ಮಾರ್ಕ್ ವುಡ್, ಕ್ರಿಸ್ ವೋಕ್ಸ್
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್, ಸ್ಕಾಟ್ ಬೋಲ್ಯಾಂಡ್ ಆಡುತ್ತಿದ್ದಾರೆ
ಬೆಂಚ್: ಮಿಚೆಲ್ ಮಾರ್ಷ್, ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ಜೋಶ್ ಇಂಗ್ಲಿಸ್, ಮ್ಯಾಟ್ ರೆನ್ಶಾ, ಮಾರ್ಕಸ್ ಹ್ಯಾರಿಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications