For Quick Alerts
ALLOW NOTIFICATIONS  
For Daily Alerts
 

ಸ್ಮಿತ್, ಲ್ಯಾಬುಶೇನ್ ಶ್ರೇಷ್ಠ ಆಟಗಾರರು: 4ನೇ ಪಂದ್ಯಕ್ಕೂ ಮುನ್ನ ಆಟಗಾರರ ಬಗ್ಗೆ ನಾಯಕನ ವಿಶ್ವಾಸ

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಆಶಸ್ ಸರಣಿಯ ನಾಲ್ಕನೇ ಪಂದ್ಯ ಇಂದು ಆರಂಭವಾಗಲಿದೆ. ಈ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ ಪ್ರತಿಕ್ರಿಯೆ ನೀಡಿದ್ದು ನಾಲ್ಕನೇ ಪಂದ್ಯವನ್ನು ಗೆದ್ದು ಸರಣಿಯನ್ನು ವಶಕ್ಕೆ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಈ ಹಿಂದಿನ ಪಂದ್ಯದಲ್ಲಿ ನಿರಾಸೆ ಮೂಡಿಸಿದ ಆಸ್ಟ್ರೇಲಿಯಾದ ಪ್ರಮುಖ ಆಟಗಾರರಾದ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲ್ಯಾಬುಶೇನ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಈ ಇಬ್ಬರು ಕೂಡ ಶ್ರೇಷ್ಠ ಆಟಗಾರರಾಗಿದ್ದು ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ಆಶಸ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ಹಾಗೂ ಮಾರ್ನಸ್ ಲ್ಯಾಬುಶೇನ್ ಇಬ್ಬರು ಕೂಡ ತಮ್ಮ ಎಂದಿನ ಗುಣಮಟ್ಟದ ಆಟವನ್ನು ಪ್ರದರ್ಶಿಸಲು ವಿಫಲವಾಗಿದ್ದಾರೆ. ಈ ಇಬ್ಬರು ಆಟಗಾರರು ಕೂಡ ಒಟ್ಟಾರೆಯಾಗಿ ಅತ್ಯುತ್ತಮ ದಾಖಲೆ ಹೊಂದಿದ್ದರು ಕೂಡ ಕಳೆದ 12 ಇನ್ನಿಂಗ್ಸ್‌ಗಳಲ್ಲಿ ಲಾರ್ಡ್ಸ್‌ನಲ್ಲಿ ಸ್ಮಿತ್ ಶತಕ ಬಾರಿಸಿದ್ದು ಮಾತ್ರವೇ 50+ ಸಾಧನೆ ಎನಿಸಿಕೊಂಡಿದೆ. ಇದು ಆಸಿಸ್ ಪಾಳಯದಲ್ಲಿ ಸಣ್ಣ ಕಳವಳಕ್ಕೆ ಕಾರಣವಾಗಿದೆ.

Ashes 2023: Pat Cummins backs Steve Smith and Marnus Labuschagne said they are class players

ಆಸಿಸ್ ದಿಗ್ಗಜ ಆಟಗಾರ ಸ್ಟೀವ್ ಸ್ಮಿತ್ ಈ ಸರಣಿಯನ್ನು ಆರಂಭಿಸುವಾಗ 59.68ರಷ್ಟು ಸರಾಸರಿಯನ್ನು ಹೊಂದಿದ್ದರು(ಇಂಗ್ಲೆಂಡ್‌ನಲ್ಲಿ ಅದು 65.08ರಷ್ಟಿತ್ತು). 2019ರ ಸರಣಿಯಲ್ಲಿ 774 ರನ್ ಕೂಡ ಇದರಲ್ಲಿ ಸೇರಿದೆ. ಆದರೆ ಓಲ್ಡ್ ಟ್ರಾಫರ್ಡ್‌ಗೆ ತೆರಳುವ ಮುನ್ನ ಅವರ ಈ ಸರಾಸರಿ 31.66 ಕ್ಕೆ ಇಳಿದಿದೆ. ಅದೇ ರೀತಿ ಲ್ಯಾಬಿಶೇನ್ 45.86 ರ ಸರಾಸರಿಯೊಂದಿಗೆ ಸರಣಿಯನ್ನು ಪ್ರಾರಂಭಿಸಿದ್ದರು ಈಗ ಅವರ ಈ ಸರಾಸರಿ 24.00ಕ್ಕೆ ಇಳಿದಿದೆ. ಆಸ್ಟ್ರೇಲಿಯದ ಈ ಇಬ್ಬರು ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವುದು ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾಗದ ದೊಡ್ಡ ಯಶಸ್ಸು ಎನ್ನುವುದರಲ್ಲಿ ಅನುಮಾನವಿಲ್ಲ.

ಲ್ಯಾಬುಶೇನ್ ಪ್ರಸ್ತುತ ಎಂಟು ಇನ್ನಿಂಗ್ಸ್‌ಗಳಲ್ಲಿ ಅರ್ಧ ಶತಕವಿಲ್ಲದೆ ಕಳೆದಿದ್ದಾರೆ. ಇದು ಅವರ ಟೆಸ್ಟ್ ವೃತ್ತಿಜೀವನದಲ್ಲಿ ಅರ್ಧ ಶತಕವಿಲ್ಲದೆ ಕಳೆದ ಸುದೀರ್ಘ ಅವಧಿ. ಈ ಮೂಲಕ ಫಾರ್ಮ್ ಕಳೆದುಕೊಂಡಿರುವುದು ಸ್ಪಷ್ಟವಾಗಿದೆ. ಆದರೆ ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಈ ಜೋಡಿಯಿಂದ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.

"ಅವರಿಬ್ಬರು ಕೂಡ ಕ್ಲಾಸ್ ಪ್ಲೇಯರ್‌ಗಳಾಗಿದ್ದು ಹೆಚ್ಚಿನ ಸಂದರ್ಭಗಳಲ್ಲಿ ಅವರು ವಿಫಲವಾಗುವುದಿಲ್ಲ. ಅವರಿಬ್ಬರು ಕೂಡ ನಿಜಕ್ಕೂ ಉತ್ತಮವಾಗಿ ಕಾಣಿಸುತ್ತಿದ್ದಾರೆ. ಸ್ಟೀವ್ ಸ್ಮಿತ್ ಈ ಪ್ರವಾಸದಲ್ಲಿ ಶತಕವನ್ನು ಕೂಡ ಗಳಿಸಿದ್ದಾರೆ. ಎಂದಿನಂತೆಯೇ ಅವರಿಂದ ನಾನು ಹೆಚ್ಚಿನದನ್ನು ನಿರೀಕ್ಷಿಸುತ್ತೇನೆ" ಎಂದಿದ್ದಾರೆ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್.

ಇಂಗ್ಲೆಂಡ್ ಸ್ಕ್ವಾಡ್: ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್ (ನಾಯಕ), ಬೆನ್ ಡಕೆಟ್, ಝಾಕ್ ಕ್ರಾಲಿ, ಹ್ಯಾರಿ ಬ್ರೂಕ್, ಜೋ ರೂಟ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್, ಆಲಿ ರಾಬಿನ್ಸನ್, ಡೇನಿಯಲ್ ಲಾರೆನ್ಸ್, ಜೋಶ್ ಟಂಗ್

ಆಸ್ಟ್ರೇಲಿಯಾ ಸ್ಕ್ವಾಡ್: ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್, ಜೋಶ್ ಹ್ಯಾಜಲ್ವುಡ್, ಮಾರ್ಕಸ್ ಹ್ಯಾರಿಸ್, ಮೈಕೆಲ್ ನೆಸರ್, ಜೋಶ್ ಇಂಗ್ಲಿಸ್ , ಕ್ಯಾಮರೂನ್ ಗ್ರೀನ್

Story first published: Wednesday, July 19, 2023, 12:16 [IST]
Other articles published on Jul 19, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+