Ashes 2023: ಪಂದ್ಯದ ವೇಳೆ ಮೈದಾನಕ್ಕೆ ನುಗ್ಗಿದ ಪ್ರತಿಭಟನಾಕಾರರು: ಎತ್ತಿಕೊಂಡು ಹೋದ ಬೈರ್‌ಸ್ಟೋವ್!: ವಿಡಿಯೋ
ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ಆಶಸ್ ಸರಣಿಯ ಎರಡನೇ ಪಂದ್ಯ ಆರಂಭವಾಗಿದೆ. ಈ ಪಂದ್ಯ ಆರಂಬವಾದ ಕೆಲವೇ ಹೊತ್ತಿನಲ್ಲಿ ಮೈದಾನದಲ್ಲಿ ನಾಟಕೀಯ ಘಟನೆಯೊಂದು ನಡೆದಿದ್ದು ಆಟಗಾರರು ಹಾಗೂ ಲಾರ್ಡ್ಸ್ ಅಂಗಳದಲ್ಲಿ ನೆರೆದಿದ್ದ ಅಭಿಮಾನಿಗಳನ್ನು ಚಕಿತಗೊಳಿಸಿದೆ. ಪಂದ್ಯ ನಡೆಯುತ್ತಿದ್ದಂತೆಯೇ ಇಬ್ಬರು ಪ್ರತಿಭಟನಾಕಾರರು ಮೈದಾನದೊಳಕ್ಕೆ ನುಗ್ಗಿದ್ದು ಕೇಸರಿ ಬಣ್ಣದ ಪುಡಿಯನ್ನು ಮೈದಾನದಲ್ಲಿ ಎರಚಿದ್ದಾರೆ. ಈ ಸಂದರ್ಭದಲ್ಲಿ ಮೈದಾನದಲ್ಲಿ ಆಟಗಾರರೇ ಈ ಪ್ರತಿಭಟನಾ ನಿರತರನ್ನು ತಡೆದಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಪಂದ್ಯ ಆರಂಬವಾಗಿದ್ದು ಮೊದಲ ಓವರನ್ನು ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ನಡೆಸಿದ್ದು ಡೇವಿಡ್ ವಾರ್ನರ್ ಈ ಓವರ್‌ನಲ್ಲಿ ನಾಲ್ಕು ರನ್‌ಗಳನ್ನು ಗಳಿಸಿದರು. ಈ ಓವರ್ ಮುಕ್ತಾಯದ ಬಳಿಕ ಎರಡನೇ ಓವರ್ ಎಸೆಯಲು ಸ್ಟುವರ್ಟ್ ಬ್ರಾಡ್ ಸಜ್ಜಾಗಿದ್ದರೆ ಉಸ್ಮಾನ್ ಖವಾಜ ಬ್ಯಾಟಿಂಗ್‌ಗೆ ಸಿದ್ಧವಾಗಿದ್ದರು.

ಆದರೆ ಈ ಓವರ್‌ನ ಆರಂಭಕ್ಕೂ ಮುನ್ನವೇ ಇಬ್ಬರು ಪ್ರತಿಭಟನಾ ನಿರತರು ಮೈದಾನಕ್ಕೆ ನುಗ್ಗಿದ್ದು ಬಣ್ಣದ ಪುಡಿಯನ್ನು ಹಾರಿಸುತ್ತಾ ಓಡಿದ್ದಾರೆ. ಇದು 'ಜಸ್ಟ್ ಸ್ಟಾಪ್ ಆಯಿಲ್' ಪ್ರತಿಭಟನೆ ಎಂದು ಕ್ರಿಕ್‌ಇನ್‌ಫೋ ವರದಿ ಮಾಡಿದೆ. ಜಸ್ಟ್ ಸ್ಟಾಪ್ ಆಯಿಲ್ ಯುಕೆಯಲ್ಲಿ ಹೊಸ ತೈಲ, ಅನಿಲ ಮತ್ತು ಕಲ್ಲಿದ್ದಲು ಯೋಜನೆಗಳನ್ನು ಅಂತ್ಯಗೊಳಿಸಲು ಕರೆ ನೀಡುತ್ತಿರುವ ಒಂದು ಪ್ರತಿಭಟನೆ.
ಮೈದಾನಕ್ಕೆ ನುಗ್ಗಿದ ಪ್ರತಿಭಟನಾ ನಿರತರ ಪೈಕಿ ಓರ್ವನನ್ನು ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟರ್ ಜಾನಿ ಬೈರ್‌ಸ್ಟೋವ್ ತಡೆದು ನಿಲ್ಲಿಸಿದ್ದು ಆತನನ್ನು ಎತ್ತಿಕೊಂಡು ಮೈದಾನದಾಚೆ ಬಿಟ್ಟಿದ್ದಾರೆ. ಇನ್ನೋರ್ವನನ್ನು ಆಟಗಾರರತ್ತ ನುಗ್ಗುವ ಮುನ್ನವೇ ತಡೆಯಲಾಗಿದೆ ಎಂದು ವರದಿಯಾಗಿದೆ.
ಇನ್ನು ಈ ಘಟನೆಯ ಬಳಿಕ ಜಾನಿ ಬೈರ್‌ಸ್ಟೋವ್ ಕೆಲ ಕಾಲ ಮೈದಾನ ತೊರೆದು ಜರ್ಸಿಯನ್ನು ಬದಲಿಸಿಕೊಂಡು ಮೈದಾನಕ್ಕೆ ಇಳಿದಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಸಿಬ್ಬಂದಿಗಳು ಆಗಮಿಸಿ ಮೈದಾನದಲ್ಲಿದ್ದ ಬಣ್ಣದ ಪುಡಿಯನ್ನು ಸ್ವಚ್ಚಗೊಳಿಸಿದರು. ಜಾನಿ ಬೈರ್‌ಸ್ಟೋವ್ ಜರ್ಸ್ ಹಾಗೂ ಪ್ಯಾಡ್‌ಗಳನ್ನು ಬದಲಿಸಿಕೊಂಡ ಬಳಿಕ ಪಂದ್ಯ ಪುನಾರಂಭಗೊಂಡಿತು.
ಇನ್ನು ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಎರಡು ತಂಡಗಳು ಕೂಡ ಒಂದೊಂದು ಬದಲಾವಣೆಯೊಂದಿಗೆ ಆಡುತ್ತಿದೆ. ಇಂಗ್ಲೆಂಡ್ ತಂಡ ಆಲ್‌ರೌಂಡ್ ಮೊಯೀನ್ ಅಲಿ ಆಡುವ ಬಳಗದಿಂದ ಹೊರಬಿದ್ದಿದ್ದು ಜೋಶ್ ಟಂಗ್‌ಗೆ ಅವಕಾಶ ನೀಡಲಾಗಿದೆ. ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಬೋಲಂಡ್ ಬದಲಿಗೆ ಮಿಚೆಲ್ ಸ್ಟಾರ್ಕ್ ವಾಪಾಸಾಗಿದ್ದಾರೆ.
ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಓಲಿ ರಾಬಿನ್ಸನ್, ಜೋಶ್ ಟಂಗ್, ಜೇಮ್ಸ್ ಆಂಡರ್ಸನ್
ಬೆಂಚ್: ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಡೇನಿಯಲ್ ಲಾರೆನ್ಸ್, ಮಾರ್ಕ್ ವುಡ್, ಮ್ಯಾಥ್ಯೂ ಪಾಟ್ಸ್, ರೆಹಾನ್ ಅಹ್ಮದ್
ಆಸ್ಟ್ರೇಲಿಯಾ ಆಡುವ ಬಳಗ: ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಶೈನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್
ಬೆಂಚ್: ಮಿಚೆಲ್ ಮಾರ್ಷ್, ಮಾರ್ಕಸ್ ಹ್ಯಾರಿಸ್, ಜೋಶ್ ಇಂಗ್ಲಿಸ್, ಮ್ಯಾಟ್ ರೆನ್ಶಾ, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications