Ashes 2023: ಗಾಯಾಳು ಮೊಯಿನ್ ಅಲಿ ಬ್ಯಾಕಪ್ ಆಗಿ ರೆಹಾನ್ ಅಹ್ಮದ್ ಇಂಗ್ಲೆಂಡ್ ತಂಡಕ್ಕೆ ಆಯ್ಕೆ
ಆಸ್ಟ್ರೇಲಿಯಾ ವಿರುದ್ಧದ ಆಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಕೈಬೆರಳಿನ ಗಾಯಕ್ಕೆ ತುತ್ತಾಗಿರುವ ಸ್ಪಿನ್ನರ್ ಮೊಯಿನ್ ಅಲಿ ಎರಡನೇ ಪಂದ್ಯಕ್ಕೆ ಅನುಮಾನವೆನಿಸಿದ್ದಾರೆ. ಹೀಗಾಗಿ ಮೊಯಿನ್ ಅಲಿ ಬ್ಯಾಕಪ್ ಆಗಿ 18ರ ಹರೆಯದ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಇಂಗ್ಲೆಂಡ್ ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಅವರು ಲಾರ್ಡ್ಸ್‌ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ಇಂಗ್ಲೆಂಡ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಲೀಸೆಸ್ಟರ್‌ಶೈರ್ ಸ್ಪಿನ್ನರ್ ರೆಹಾನ್ ಅಹ್ಮದ್ ಅವರು ಮತ್ತೊಮ್ಮೆ ರಾಷ್ಟ್ರೀಯ ತಂಡದಿಂದ ಕರೆ ಪಡೆದಿದ್ದಾರೆ.

ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಅನುಭವಿ ಆಲ್‌ರೌಂಡರ್ ಮೊಯಿನ್ ಅಲಿ ತಮ್ಮ ಸ್ಪಿನ್ ಮಾಡುವ ಬೆರಳಿನಲ್ಲಿ ಗುಳ್ಳೆಗಳು ಎದ್ದಿವೆ. ಆಶಸ್ ಸರಣಿಯನ್ನು ಮರಳಿ ಪಡೆಯುವ ಇಂಗ್ಲೆಂಡ್ ತಂಡದ ಅವಕಾಶಕ್ಕೆ ಇದು ಭಾರೀ ಹೊಡೆತ ಬಿದ್ದಂತಾಗಿದೆ.
ಆಫ್ ಸ್ಪಿನ್ನರ್ ಮೊಯಿನ್ ಅಲಿ ಅವರ ಕೈಬೆರಳು ಗಾಯಗೊಂಡ ಕಾರಣ ಚೆಂಡನ್ನು ಸ್ಪಿನ್ ಮಾಡಲು ಕಷ್ಟಪಟ್ಟರು. ಎಡ್ಜ್‌ಬಾಸ್ಟನ್‌ನ ಸ್ಪಿನ್ನಿಂಗ್ ಟ್ರ್ಯಾಕ್‌ನಲ್ಲಿ ಮೊಯಿನ್ ಅಲಿ ಅವರ ಬಳಲುವಿಕೆ ಇಂಗ್ಲೆಂಡ್‌ನ ಬೌಲಿಂಗ್ ವಿಭಾಗಕ್ಕೆ ದೊಡ್ಡ ಏಟು ಬಿತ್ತು.
ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕ್ಕಲಮ್ ಅವರು ಎರಡನೇ ಟೆಸ್ಟ್‌ಗೆ ಮುನ್ನ ಮೊಯಿನ್ ಅಲಿ ಚೇತರಿಕೆಯ ಬಗ್ಗೆ ಸಕಾರಾತ್ಮಕವಾಗಿದ್ದರ, ಯಶಸ್ವಿ ಲೆಗ್ ಸ್ಪಿನ್ನರ್ ರೆಹಾನ್ ಅಹ್ಮದ್ ಅವರನ್ನು ತಂಡಕ್ಕೆ ಸೇರಿಸಲು ಸಮ್ಮತಿಸಿದ್ದಾರೆ.
ಬೌಲಿಂಗ್ ಆಲ್‌ರೌಂಡರ್ ರೆಹಾನ್ ಅಹ್ಮದ್ ಕಳೆದ ವರ್ಷ ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್ ತಂಡದ ಪರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಚೊಚ್ಚಲ ಪಂದ್ಯದಲ್ಲೇ 48 ರನ್ ನೀಡಿ 5 ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು.
ರೆಹಾನ್ ಅಹ್ಮದ್ ಅವರು ಕಳೆದ ಡಿಸೆಂಬರ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡಲು ಆಯ್ಕೆಯಾದಾಗ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್ ಆಡಿದ ಅತ್ಯಂತ ಕಿರಿಯ ಆಟಗಾರ ಎನಿಸಿದರು. ಲೀಸೆಸ್ಟರ್‌ಶೈರ್ ಆಟಗಾರ ಕರಾಚಿಯಲ್ಲಿ ಬೆನ್ ಸ್ಟೋಕ್ಸ್ ನಾಯಕತ್ವದ ತಂಡಕ್ಕಾಗಿ ಚೊಚ್ಚಲ ಪಂದ್ಯವನ್ನು ಆಡಿದರು.
ಆದರೆ, ಕೌಂಟಿ ಚಾಂಪಿಯನ್‌ಶಿಪ್‌ನ ಈ ಋತುವಿನ ಎರಡನೇ ವಿಭಾಗದಲ್ಲಿ ರೆಹಾನ್ ಅಹ್ಮದ್ ಏಳು ಪಂದ್ಯಗಳಲ್ಲಿ ಕೇವಲ ಆರು ವಿಕೆಟ್‌ಗಳನ್ನು ಗಳಿಸಿದ್ದಾರೆ.
2ನೇ ಟೆಸ್ಟ್ ಪಂದ್ಯದಲ್ಲಿ ಮೊಯಿನ್ ಅಲಿ ಬದಲಿಗೆ ರೆಹಾನ್ ಅಹ್ಮದ್ ಆಯ್ಕೆ ಸಾಧ್ಯತೆ
ಮೊಯಿನ್ ಅಲಿ ಗಾಯಗೊಂಡಿರುವುದು ಆತಿಥೇಯ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಚಿಂತೆಯಾಗಿ ಪರಿಣಮಿಸಿದೆ. ಏಕೆಂದರೆ ಆಂಗ್ಲರ ತಂಡದಲ್ಲಿ ಬೇರೆ ಯಾವುದೇ ಸ್ಪಿನ್-ಬೌಲಿಂಗ್ ಆಯ್ಕೆಗಳಿರಲಿಲ್ಲ. ಮೊಯಿನ್ ಅಲಿ ಎರಡನೇ ಟೆಸ್ಟ್ ಪಂದ್ಯದ ವೇಳೆಗೆ ಚೇತರಿಸಿಕೊಳ್ಳದಿದ್ದರೆ ಇಂಗ್ಲೆಂಡ್‌ನ ಮಾಜಿ ನಾಯಕ ಜೋ ರೂಟ್ ಏಕೈಕ ಸ್ಪಿನ್ನರ್ ಆಗಿದ್ದರು.
ಇದೇ ವೇಳೆ ರೆಹಾನ್ ಅಹ್ಮದ್ ಅವರ ಆಯ್ಕೆಯು ಇಂಗ್ಲೆಂಡ್ ತಂಡದ ಬೌಲಿಂಗ್ ದಾಳಿಗೆ ಮತ್ತೊಂದು ಆಯಾಮ ನೀಡುವ ಸಾಧ್ಯತೆ ಇದೆ. ಚೊಚ್ಚಲ ಟೆಸ್ಟ್ ಪಂದ್ಯದಂತೆ ಅದ್ಭುತ ಸಾಮರ್ಥ್ಯ ನೀಡಿದರೆ, ಇಂಗ್ಲೆಂಡ್ ಗೆಲುವಿನ ಹಳಿಗೆ ಮರಳಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications