ಗುರುವಾರ, ಜುಲೈ 27ರಂದು ಲಂಡನ್‌ನ ಓವಲ್‌ನಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ 2023ರ ಆಶಸ್ ಟೆಸ್ಟ್ ಸರಣಿಯ ಅಂತಿಮ ಪಂದ್ಯ ನಡೆಯಲಿದೆ. ಪ್ಯಾಟ್ ಕಮ್ಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ಪ್ರಶಸ್ತಿ ಉಳಿಸಿಕೊಂಡಿದೆ.
ಆದರೆ 2001ರ ನಂತರ ಮೊದಲ ಬಾರಿಗೆ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಯನ್ನು ಗೆಲ್ಲಲು ಅಂತಿಮ ಪಂದ್ಯವನ್ನು ಆಸ್ಟ್ರೇಲಿಯಾ ತಂಡ ಗೆಲ್ಲಲೇಬೇಕಾಗಿದೆ.

ಇದೇ ವೇಳೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಅಂತಿಮ ಆಶಸ್ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳ ಆಡುವ 11ರ ಬಳಗವನ್ನು ಆಯ್ಕೆ ಮಾಡಿದ್ದಾರೆ.
ಮಿಚೆಲ್ ಮಾರ್ಷ್ ಮತ್ತು ಕ್ಯಾಮೆರಾನ್ ಗ್ರೀನ್ ಇಬ್ಬರು ಆಲ್ ರೌಂಡರ್‌ಗಳನ್ನು ಒಳಗೊಂಡ ಆಡುವ 11ರ ಬಳಗದಲ್ಲಿ ಸ್ಪೆಷಲಿಸ್ಟ್ ಸ್ಪಿನ್ನರ್ ಇಲ್ಲದೆ ಓಲ್ಡ್ ಟ್ರ್ಯಾಫೋರ್ಡ್‌ನಲ್ಲಿ ಆಸ್ಟ್ರೇಲಿಯಾ ತಂಡ ನಾಲ್ಕನೇ ಟೆಸ್ಟ್ ಪಂದ್ಯವಾಡಿತು. ಮತ್ತೊಂದೆಡೆ, ಇಂಗ್ಲೆಂಡ್ ತಂಡ ತನ್ನ ತವರು ಸ್ಥಳದಲ್ಲಿ ಜೇಮ್ಸ್ ಆಂಡರ್ಸನ್ ಅವರನ್ನು ಆಡಿಸಿತು.
ಆಸ್ಟ್ರೇಲಿಯಾ ತಂಡಕ್ಕೆ ಅದೃಷ್ಟದ ರೀತಿಯಲ್ಲಿ ಮಳೆಯಿಂದಾಗಿ ನಾಲ್ಕನೇ ಪಂದ್ಯ ಡ್ರಾಗೊಂಡಿತು. ಇದೀಗ ಅಂತಿಮ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಕೆಲವು ಬದಲಾವಣೆಗೆ ಕೈ ಹಾಕಿಲಿದೆ.

ಇಂಗ್ಲೆಂಡ್ ತಂಡದ ಜೇಮ್ಸ್ ಆಂಡರ್ಸನ್ ಅವರ ಅತ್ಯುತ್ತಮ ನೀಡುವಲ್ಲಿ ವಿಫಲರಾದರು. ಅವರ ಕಳಪೆ ಆಶಸ್ ಸರಣಿಯನ್ನು ರಿಕಿ ಪಾಂಟಿಂಗ್ ಹೈಲೈಟ್ ಮಾಡಿದ್ದಾರೆ. ಆದರೆ ಕ್ಯಾಮೆರಾನ್ ಗ್ರೀನ್ ಸಹ ಗಾಯದಿಂದ ಹಿಂದಿರುಗಿದ ನಂತರ ಪ್ರಭಾವಿ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ.
ಐಸಿಸಿ ವಿಮರ್ಶೆಯ ಇತ್ತೀಚಿನ ಆವೃತ್ತಿಯಲ್ಲಿ, ಕೊನೆಯ ಟೆಸ್ಟ್ ಪಂದ್ಯಕ್ಕೆ ಕ್ಯಾಮರೂನ್ ಗ್ರೀನ್ ಬದಲಿಗೆ ಸ್ಪಿನ್ನರ್ ಟಾಡ್ ಮರ್ಫಿ ಅವರನ್ನು ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳಲು ರಿಕಿ ಪಾಂಟಿಂಗ್ ಬೆಂಬಲ ನೀಡಿದ್ದಾರೆ.
"ಕೊನೆಯ ಟೆಸ್ಟ್‌ಗೆ ಟಾಡ್ ಮರ್ಫಿಯನ್ನು ಕರೆತರಲು ಬಯಸುತ್ತೇನೆ. ಲಂಡನ್‌ನ ಓವಲ್ ಪಿಚ್ ಸಾಮಾನ್ಯವಾಗಿ ಸ್ವಲ್ಪ ಟರ್ನ್ ಇರಲಿದೆ. ಈ ವಾರದ ಮಳೆ ಮುನ್ಸೂಚನೆಯು ಕಳೆದ ವಾರಕ್ಕಿಂತ ಉತ್ತಮವಾಗಿ ಕಾಣುತ್ತದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಟಾಡ್ ಮರ್ಫಿ ಮರಳಿ ಬಂದರೆ ನನಗೆ ಆಶ್ಚರ್ಯವಾಗುವುದಿಲ್ಲ," ಎಂದು ರಿಕಿ ಪಾಂಟಿಂಗ್ ತಿಳಿಸಿದರು.
"ಟಾಡ್ ಮರ್ಫಿ ಆಯ್ಕೆಯಾದರೆ, ನಿಜವಾಗಿಯೂ ದೊಡ್ಡ ನಿರ್ಧಾರವಾಗುತ್ತದೆ. ಎಲ್ಲಾ ವೇಗದ ಬೌಲರ್‌ಗಳು ದೈಹಿಕವಾಗಿ ಚೆನ್ನಾಗಿದ್ದಾರೆ. ಮ್ಯಾಂಚೆಸ್ಟರ್‌ನಲ್ಲಿ ಕೊನೆಯ ಎರಡು ದಿನಗಳು ಮಳೆಯಿಂದ ಕೊಚ್ಚಿ ಹೋದ ಕಾರಣ, ಒಂದೆರಡು ದಿನಗಳ ಹೆಚ್ಚುವರಿ ರಜೆ ಪಡೆದಿದ್ದಾರೆ. ಆದ್ದರಿಂದ ಅಂತಿಮವಾಗಿ, ಟಾಡ್ ಮರ್ಫಿ ಮತ್ತು ಕ್ಯಾಮೆರಾನ್ ಗ್ರೀನ್ ನಡುವೆ ಟಾಸ್ ಆಗಲಿದೆ," ಎಂದರು.
ಇನ್ನು ಆಶಸ್ ಸರಣಿಯನ್ನು ಡ್ರಾ ಮಾಡಿಕೊಳ್ಳಲು ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರದಲ್ಲಿ ಮೌಲ್ಯಯುತವಾದ ಅಂಕಗಳನ್ನು ಪಡೆಯಲು ಇಂಗ್ಲೆಂಡ್ ತಂಡ ಬಯಸುತ್ತದೆ. 2019ರ ಆಶಸ್‌ನ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇದೇ ರೀತಿಯ ಪರಿಸ್ಥಿತಿಯಿದ್ದಾಗ ಆತಿಥೇಯ ಇಂಗ್ಲೆಂಡ್ ಗೆಲುವು ಸಾಧಿಸಿತ್ತು ಎಂಬುದನ್ನು ಮರೆಯುವಂತಿಲ್ಲ.
ಕಳೆದ ಎರಡು ಟೆಸ್ಟ್‌ಗಳಲ್ಲಿ ಉತ್ತಮವಾಗಿ ಆಡಿರುವ ಇಂಗ್ಲೆಂಡ್ ತಂಡ ತಮ್ಮ ಬ್ಯಾಟಿಂಗ್ ಸಂಯೋಜನೆಯಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ. ಆದರೆ, ಜೇಮ್ಸ್ ಆಂಡರ್ಸನ್ ಮೂರು ಟೆಸ್ಟ್‌ಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದು, ಇದು ಅವರ ಸಾಮರ್ಥ್ಯಕ್ಕೆ ತಕ್ಕಂತೆ ಬೌಲಿಂಗ್ ಮಾಡಿಲ್ಲ.
ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಅಂತಿಮ ಆಶಸ್ ಟೆಸ್ಟ್‌ಕ್ಕಾಗಿ ಆಡುವ 11ರ ಬಳಗದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಂಡಿದ್ದು ಆಶ್ಚರ್ಯವಾಗುತ್ತದೆ ಎಂದು ರಿಕಿ ಪಾಂಟಿಂಗ್ ಹೇಳಿದರು.
"ಲಾರ್ಡ್ಸ್ ಪಂದ್ಯದಲ್ಲಿ ಜೋಶ್ ಟಂಗ್ ಅವರ ಆಟವನ್ನು ನೋಡಿದ್ದು, ಇಂಗ್ಲೆಂಡ್ ತಂಡದ ಪರ ಉತ್ತಮ ಪ್ರದರ್ಶನ ನೀಡಿದ್ದರು. ನಂತರ ಅವರನ್ನು ಹೊರಗಿಡಲಾಯಿತು. ಹಾಗಾಗಿ, ಜೇಮ್ಸ್ ಆಂಡರ್ಸನ್ ಅವರು ಮತ್ತೆ ಕೊನೆಯ ಟೆಸ್ಟ್ ಆಡುತ್ತಿರುವುದಕ್ಕೆ ನನಗೆ ತುಂಬಾ ಆಶ್ಚರ್ಯವಾಗುತ್ತದೆ," ಎಂದು ರಿಕಿ ಪಾಂಟಿಂಗ್ ತಿಳಿಸಿದರು.
ಆಶಸ್ 5ನೇ ಟೆಸ್ಟ್: ರಿಕಿ ಪಾಂಟಿಂಗ್ ಆಯ್ಕೆಯ ಇಂಗ್ಲೆಂಡ್ vs ಆಸ್ಟ್ರೇಲಿಯಾ ಆಡುವ 11ರ ಬಳಗ
ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಟಾಡ್ ಮರ್ಫಿ, ಜೋಶ್ ಹ್ಯಾಝಲ್‌ವುಡ್.
ಇಂಗ್ಲೆಂಡ್: ಝಾಕ್ ಕ್ರಾಲಿ, ಬೆನ್ ಡಕೆಟ್, ಮೊಯಿನ್ ಅಲಿ, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೋಶ್ ಟಂಗ್.