ಆಶಸ್ ಸರಣಿಯ ಮೊದಲ ಪಂದ್ಯದ ಕೊನೆಯ ದಿನದಾಟ ಮಾತ್ರವೇ ಬಾಕಿಯಿದ್ದು ಎರಡು ತಂಡಗಳು ಕೂಡ ಜಿದ್ದಾಜಿದ್ದಿನ ಪ್ರದರ್ಶನ ನೀಡುತ್ತಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಗೆಲ್ಲಲು 281 ರನ್‌ಗಳನ್ನು ಬೆನ್ನಟ್ಟುವ ಗುರಿ ನೀಡಿರುವ ಇಂಗ್ಲೆಂಡ್ ತಂಡ ನಾಲ್ಕನೇ ದಿನದಾಟದ ಅಂತ್ಯದಲ್ಲಿ ಒಂದು ಹಂತಕ್ಕೆ ಮೇಲುಗೈ ಸಾಧಿಸಿದೆ. ಆದರೆ ಆಸ್ಟ್ರೇಲಿಯಾ ಕೂಡ ಈ ಗುರಿಯನ್ನು ಬೆನ್ನಟ್ಟುವ ವಿಶ್ವಾಸದಲ್ಲಿದೆ.
ಇನ್ನು ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಇಂಗ್ಲೆಂಡ್ ವೇಗಿಯ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮೊದಲ ದಿನದಾಟದಲ್ಲಿ ಎರಡನೇ ಇನ್ನಿಂಗ್ಸ್‌ನ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾಗೆ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಆಘಾತ ನೀಡಿದ್ದು ಪ್ರಮುಖ ಎರಡು ವಿಕೆಟ್‌ಗಳನ್ನು ಕಿತ್ತಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಈಗಾಗಲೇ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದೆ. ಸ್ಟುವರ್ಟ್ ಬ್ರಾಡ್ ಅವರ ಈ ಪ್ರದರ್ಶನದ ಬಗ್ಎ ಪಾಂಟಿಂಗ್ ವಿಶೇಷ ಮಾತುಗಳನ್ನಾಡಿದ್ದು ಇಂಗ್ಲೆಂಡ್ ತಂಡಕ್ಕೆ ಸ್ಟುವರ್ಟ್ ಬ್ರಾಡ್ ಅವರಿಂದ ಅಂಥಾ ಪ್ರದರ್ಶನ ಅಗತ್ಯವಿತ್ತು ಎಂದಿದ್ದಾರೆ.

"ಈ ಪಂದ್ಯದಲ್ಲಿ ಎರಡು ತಂಡಗಳು ಕೂಡ ಸಾಕಷ್ಟ ಏರಿಳಿತಗಳನ್ನು ಕಂಡಿದೆ. ಮೊದಲ ದಿನದಲ್ಲಿ ಇಂಗ್ಲೆಂಡ್ ಹೆಚ್ಚು ಪ್ರಾಬಲ್ಯ ಸಾಧಿಸಿದರೆ ಆಸ್ಟ್ರೇಲಿಯ ತಂಡದ ಪರವಾಗಿ ಖವಾಜ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನ ಕಮ್‌ಬ್ಯಾಕ್‌ಗೆ ಅವಕಾಶ ಮಾಡಿಕೊಟ್ಟಿತು" ಎಂದಿದ್ದಾರೆ. ಮುಂದುವರಿದು ಅವರು ಪಂದ್ಯದ ಮಹತ್ವದ ಸಂದರ್ಭದಲ್ಲಿಯೇ ಇಂಗ್ಲೆಂಡ್ ತಂಡಕ್ಕೆ ಬ್ರಾಡ್ ಅವರಿಂದ ಇಂಥಾ ಪ್ರದರ್ಶನ ಬಂದಿದೆ ಎಂದಿದ್ದು ಇದು ಪಂದ್ಯವನ್ನು ಆಸ್ಟ್ರೇಲಿಯಾದ ಕೈಯಿಂದ ಕಸಿಯುವ ಆತಂಕವನ್ನು ಪಾಂಟಿಂಗ್ ವ್ಯಕ್ತಪಡಿಸಿದರು.
ಅಂದಹಾಗೆ ನಾಳ್ಕೇ ದಿನದಾಟದ ಅಂತ್ಯಕ್ಕೂ ಮುನ್ನ ಸ್ಟುವರ್ಟ್ ಬ್ರಾಡ್ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟರ್‌ಗಳಾದ ಮಾರ್ನಸ್ ಲ್ಯಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ಇನ್ನರನ್ನು ಕೂಡ ಔಟ್ ಮಾಡಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾ 107 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದೆ.
" ನಾಲ್ಕನೇ ಇನ್ನಿಂಗ್ಸ್‌ನ ಆರಂಭದಲ್ಲಿ ಆಸ್ಟ್ರೇಲಿಯಾ 50-0 ರನ್‌ಗಳಿಸಿ ಎಲ್ಲವೂ ಉತ್ತಮವಾಗಿತ್ತು. ನಂತರ ಸ್ಟುವರ್ಟ್ ಬ್ರಾಡ್ ಅವರ ತಂಡಕ್ಕೆ ಅಗತ್ಯವಿರುವ ಒಂದೆರಡು ದೊಡ್ಡ ವಿಕೆಟ್‌ಗಳೊಂದಿಗೆ ಕಬಳಿಸಿದರು. ಅವರ ತಂಡಕ್ಕೆ ಆ ವಿಕೆಟ್‌ಗಳ ಅಗತ್ಯ ಬಹಳವಿತ್ತು. ಯಾಕೆಂದರೆ ಇದು ಆಸಿಸ್ ತಂಡದಿಂದ ಪಂದ್ಯವನ್ನು ಕಸಿದುಕೊಳ್ಳಬಹುದು. ಇಲ್ಲಿ ನೀವು ಏನನ್ನೂ ಊಹಿಸಲು ಸಾಧ್ಯವಿಲ್ಲ. ಇದು ಒಂದು ಇನ್ನಿಂಗ್ಸನ್ನೇ ಪಡೆಯವಂತೆ ಮಾಡಬಹುದು" ಎಂದಿದ್ದಾರೆ ರಿಕಿ ಪಾಂಟಿಂಗ್.
ಎಡ್ಜ್‌ಬಾಸ್ಟನ್ ಟೆಸ್ಟ್‌ನ ಕೊನೆಯ ದಿನದಾಟದಲ್ಲಿ ಈಗ ಎರಡು ತಂಡಗಳು ಕೂಡ ಗೆಲುವಿನ ಮೇಲೆ ಕಣ್ಣಿಟ್ಟಿದ್ದು ಎರಡು ತಂಡಗಳಿಗೂ ಗೆಲ್ಲಲು ಸಮಾನವಾದ ಅವಕಾಶವಿದೆ. ಉಸ್ಮಾನ್ ಖವಾಜ 34 ರನ್‌ಗಳನ್ನು ಗಳಿಸಿ ಕ್ರೀಸ್‌ನಲ್ಲಿದ್ದರೆ ಸ್ಕಾಟ್ ಬೋಲಂಡ್ ಅವರೊಂದಿಗೆ ಕೊನೆಯ ದಿನದಾಟನ ಬ್ಯಾಟಿಂಗ್ ಮುಂದಿವರಿಸಲಿದ್ದಾರೆ. ಆಸ್ಟ್ರೇಲಿಯಾ ತಂಡ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕಿದ್ದರೆ ಅಂತಿಮ ದಿನ 174 ರನ್‌ಗಳನ್ನು ಗಳಿಸುವ ಸವಾಲು ಹೊಂದಿದ್ದರೆ ಇಂಗ್ಲೆಂಡ್ ತಂಡ ಉಳಿದ 7 ವಿಕೆಟ್‌ಗಳನ್ನು ಕಿತ್ತರೆ ಆಶಸ್ ಸರಣಿಯ ಮೊದಲ ಪಂದ್ಯವನ್ನು ವಶಕ್ಕೆ ಪಡೆದಂತಾಗಲಿದೆ
ಇಂಗ್ಲೆಂಡ್ ಆಡುವ ಬಳಗ: ಝಾಕ್ ಕ್ರಾಲಿ, ಬೆನ್ ಡಕೆಟ್, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಮೊಯಿನ್ ಅಲಿ, ಸ್ಟುವರ್ಟ್ ಬ್ರಾಡ್, ಒಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್
ಬೆಂಚ್: ಡೇನಿಯಲ್ ಲಾರೆನ್ಸ್, ಮ್ಯಾಥ್ಯೂ ಪಾಟ್ಸ್, ಮಾರ್ಕ್ ವುಡ್, ಜೋಶ್ ಟಂಗ್, ಕ್ರಿಸ್ ವೋಕ್ಸ್
ಆಸ್ಟ್ರೇಲಿಯಾ ಆಡುವ ಬಳಗ: ಉಸ್ಮಾನ್ ಖವಾಜಾ, ಡೇವಿಡ್ ವಾರ್ನರ್, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್, ಸ್ಕಾಟ್ ಬೋಲ್ಯಾಂಡ್
ಬೆಂಚ್: ಮಿಚೆಲ್ ಮಾರ್ಷ್, ಟಾಡ್ ಮರ್ಫಿ, ಜೋಶ್ ಇಂಗ್ಲಿಸ್, ಮ್ಯಾಟ್ ರೆನ್ಶಾ, ಮಾರ್ಕಸ್ ಹ್ಯಾರಿಸ್, ಮಿಚೆಲ್ ಸ್ಟಾರ್ಕ್