ತವರಿನಲ್ಲೇ ಇಂಗ್ಲೆಂಡ್ ವೇಗಿಗಳು ಪರದಾಡಲಿದ್ದಾರೆ: ರಿಕಿ ಪಾಂಟಿಂಗ್ ಹೇಳಿಕೆ
ಆಶಸ್ ಸರಣಿಯ ಮೊದಲ ಪಂದ್ಯ ಜೂನ್ 16 ಶುಕ್ರವಾರದಿಂದ ಆರಂಭವಾಗಲಿದೆ. ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಈ ಸಾಂಪ್ರದಾಯಿಕ ಸೆಣೆಸಾಟವನ್ನು ನೋಡಲು ಕ್ರಿಎಕಟ್ ಜಗತ್ತಿನ ಅಭಿಮಾನಿಗಳು ಸಹಜವಾಗಿಯೇ ಕುತೂಹಲದಿಂದ ಕಾಯುತ್ತಿರುತ್ತಾರೆ. ಅದರಲ್ಲೂ ಎರಡೂ ತಂಡಗಳು ಕೂಡ ಇತ್ತೀಚಿನ ಕೆಲ ತಿಂಗಳುಗಳಿಂದ ಅಮೋಘ ಪ್ರದರ್ಶನ ನೀಡುತ್ತಿವೆ, ಹಾಗಾಗಿ ಈ ಸರಣಿ ಮತ್ತಷ್ಟು ಕುತೂಹಲಕಾರಿಯಾಗಿರುವುದರಲ್ಲಿ ಅನುಮಾನವಿಲ್ಲ.
ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಇಂಗ್ಲೆಂಡ್ ತಂಡದ ಬೌಲಿಂಗ್ ವಿಭಾಗದ ದೌರ್ಬಲ್ಯದ ಬಗ್ಗೆ ಮಾತನಾಡಿದ್ದಾರೆ. ಇಂಗ್ಲೆಂಡ್ ತವರಿನಲ್ಲಿಯೇ ಈ ಸರಣಿ ನಡೆಯುತ್ತಿದ್ದರೂ ಇಂಗ್ಲೆಂಡ್ ವೇಗಿಗಳು ಇಲ್ಲಿ ಪರದಾಡಲಿದ್ದಾರೆ ಎಂದು ಪಾಂಟಿಂಗ್ ಭವಿಷ್ಯ ನುಡಿದಿದ್ದಾರೆ.

"ಇಂಗ್ಲೆಂಡ್ ತಂಡ ಅವರು ಈಗ ಆಡುತ್ತಿರುವ ಶೈಲಿಯಲ್ಲಿಯೇ ಬ್ಯಾಟಿಂಗ್ ನಡೆಸಬೇಕಾದರೆ ಅದಕ್ಕೆ ಫ್ಲ್ಯಾಟ್ ಪಿಚ್ ಬೇಕಾಗುತ್ತದೆ. ಅವರು ಫ್ಲ್ಯಾಟ್ ಪಿಚ್ಚನ್ನು ಹಾಗೂ ಬೌಂಡಿಗಳನ್ನು ಒಳಕ್ಕೆಳೆದುಕೊಳ್ಳಲು ಬಯಸುತ್ತಿದ್ದಾರೆ ಎಂಬುದನ್ನು ಕೂಡ ನಾನು ಕೇಳಿದ್ದೇನೆ. ಆದರೆ ಅವರು ಫ್ಲ್ಯಾಟ್ ಪಿಚ್ಚನ್ನು ಪಡೆದುಕೊಂಡರೆ ಅವರು 20 ವಿಕೆಟ್‌ಗಳನ್ನು ಹೇಗೆ ತೆಗೆಯಬಲ್ಲರು ಎಂಬುದು ಅವರಿಗೆ ದೊಡ್ಡ ತಲೆನೋವಾಗಲಿದೆ" ಎಂದಿದ್ದಾರೆ ರಿಕಿ ಪಾಂಟಿಂಗ್.
ಮುಂದುಬರಿದು ಅವರು ಇಂಗ್ಲೆಂಡ್ ತಂಡ ಜೋಫ್ರಾ ಆರ್ಚರ್ ಮತ್ತು ಮುಖ್ಯ ಸ್ಪಿನ್ನರ್ ಜಾಕ್ ಲೀಚ್ ಇಲ್ಲದೆ ಇಂಗ್ಲೆಂಡ್‌ನ ಬೌಲರ್‌ಗಳು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ನೋಡಲು ಕುತೂಹಲಕಾರಿಯಾಗಿದೆ ಎಂದು ಪಾಂಟಿಂಗ್ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ಟೆಸ್ಟ್ ನಿವೃತ್ತಿಯಿಂದ ಹೊರಬಂದ ಮೊಯೋನ್ ಅಲಿ ಆರಂಭಿಕ ಟೆಸ್ಟ್‌ಗೆ ಲೀಚ್ ಅವರಿಗೆ ಬದಲಿಯಾಗಿ ಆಯ್ಕೆಯಾಗಿದ್ದಾರೆ.
ಇನ್ನು ಆಸ್ಟ್ರೇಲಿಯಾ ತಂಡದ ಬಲಾಬಲದ ಬಗ್ಗೆಯೂ ಪಾಂಟಿಂಗ್ ಮಾತನಾಡಿದರು. "ನಮ್ಮ ತಂಡದಲ್ಲಿ ಕೆಲವು ಅಗ್ರ ಕ್ರಮಾಂಕದ ಬ್ಯಾಟರ್‌ಗಳ ದಾಖಲೆಗಳು ಯುಕೆಯಲ್ಲಿ ಉತ್ತಮವಾಗಿಲ್ಲ. ಆದರೆ ಬೌಲಿಂಗ್ ವಿಭಾಗದ ಅಂಕಿಅಂಶಗಳು ಬಹಳ ಅದ್ಭುತವಾಗಿದೆ. ಇಲ್ಲಿ ಇಂಗ್ಲೆಂಡ್ ನಿಜವಾಗಿಯೂ ಉತ್ತಮವಾಗಿ ಬ್ಯಾಟಿಂಗ್ ಮಾಡಲಿದೆ ಎಂದು ನಾನು ನಿರೀಕ್ಷಿಸುತ್ತೇನೆ. ಆದರೆ ಅವರು ಬೌಲಿಂಗ್‌ನಲ್ಲಿ ಬಹಳ ಸಂಕಷ್ಟ ಪಡಲಿದ್ದಾರೆ. ನೀವು ಆಸ್ಟ್ರೇಲಿಯಾದ ದಾಳಿಯನ್ನು ನೋಡಿದರೆ ಆಸ್ಟ್ರೇಲಿಯಾದ ಬ್ಯಾಟಿಂಗ್ ವಿಭಾಗಕ್ಕಿಂತಲೂ ಬೌಲಿಂಗ್ ವಿಭಾಗ ಕಡಿಮೆ ನ್ಯೂನ್ಯತೆಯನ್ನು ಹೊಂದಿದೆ ಎಂದು ಅನಿಸುತ್ತದೆ" ಎಂದಿದ್ದಾರೆ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್.
ಆಸ್ಟ್ರೇಲಿಯಾ ಸ್ಕ್ವಾಡ್: ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್ವುಡ್, ಸ್ಕಾಟ್ ಬೋಲ್ಯಾಂಡ್, ಟಾಡ್ ಮರ್ಫಿ, ಜೋಶ್ ಇಂಗ್ಲಿಸ್, ಮ್ಯಾಟ್ ರೆನ್ಶಾ, ಮಾರ್ಕಸ್ ಹ್ಯಾರಿಸ್
ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೊನಾಥನ್ ಬೈರ್‌ಸ್ಟೋವ್, ಮೊಯಿನ್ ಅಲಿ, ಸ್ಟುವರ್ಟ್ ಬ್ರಾಡ್, ಆಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications