For Quick Alerts
ALLOW NOTIFICATIONS  
For Daily Alerts
 

ಮಾನಸಿಕವಾಗಿ ದಣಿದಿದ್ದೇನೆ: 100ನೇ ಟೆಸ್ಟ್ ಆಡಿದ ಬಳಿಕ ಸ್ಟೀವ್ ಸ್ಮಿತ್ ಮಾತು

ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ಸ್ಟೀವ್ ಸ್ಮಿತ್ ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ನಡೆದ ಆಶಸ್ ಟೆಸ್ಟ್ ಪಂದ್ಯದಲ್ಲಿ ಆಡುವ ಮೂಲಕ 100ನೇ ಪಂದ್ಯವನ್ನು ಪೂರ್ಣಗೋಳಿಸಿದ್ದಾರೆ. 101ನೇ ಪಂದ್ಯವನ್ನಾಡಲು ಸಜ್ಜಾಗುತ್ತಿರುವ ಸ್ಟೀವ್ ಸ್ಮಿತ್ ಈ ಪಂದ್ಯಕ್ಕೂ ಮುನ್ನ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. 100 ಟೆಸ್ಟ್ ಪಂದ್ಯಗಳನ್ನು ಆಡಿದ ಬಳಿಕ ತಾನು ಮಾನಸಿಕವಾಗೊಗಿ ದಣಿದಿದ್ದೇನೆ ಎಂದಿದ್ದಾರೆ ಸ್ಟೀವ್ ಸ್ಮಿತ್.

ಪಾಡ್‌ಕ್ಯಾಸ್ಟ್‌ವೊಂದರಲ್ಲಿ ಮಾತನಾಡುತ್ತಾ ಸ್ಮಿತ್ ತನ್ನ 100 ನೇ ಟೆಸ್ಟ್ ಪಂದ್ಯವು ಭಾವನಾತ್ಮಕವಾಗಿ ತನಗೆ ಮಾನಸಿಕವಾಗಿ ಸಾಕಷ್ಟು ದಣಿವಾಗುವಂತೆ ಮಾಡಿತು ಎಂದು ಹೇಳಿದರು. ಹೆಡಿಂಗ್ಲಿ ಪಂದ್ಯ ಸ್ಟೀವ್ ಸ್ಮಿತ್ ಪಾಲಿಗೆ ನೂರನೇ ಪಂದ್ಯವಾಗಿದ್ದರು ಕೂಡ ಸ್ಮಿತ್ ಪಾಲಿಗೆ ಇದು ಸ್ಮರಣೀಯವಾಗಿರಲಿಲ್ಲ. ಎರಡು ಇನ್ನಿಂಗ್ಸ್‌ಗಳಲ್ಲಿ ಅವರು 2 ಮತ್ತು 22 ರನ್ ಗಳಿಸುವಲ್ಲಿ ಮಾತ್ರವೇ ಯಶಸ್ವಿಯಾಗಿದ್ದರು. ಅಲ್ಲದೆ ಈ ಪಂದ್ಯವನ್ನು ಆಸ್ಟ್ರೇಲಿಯಾ ಸೋತಿತ್ತು.

Ashes 2023: Steve Smith said I was quite mentally drained after playing 100th Test match

"ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ವಿರಾಮದ ಅಗತ್ಯವಿತ್ತು. ಇದು ಮಾನಸಿಕವಾಗಿ ಸಾಕಷ್ಟು ದಣಿವಾಗಿದ್ದ ವಾರ. ನಾನು ಸಾಮಾನ್ಯವಾಗಿ ಆ ರೀತಿಯ ವಿಷಯದ ಬಗ್ಗೆ ಯೋಚಿಸಲು ಇಷ್ಟಪಡುವುದಿಲ್ಲ. ಆದರೆ ಇದು ಒಂದು ದೊಡ್ಡ ಮೈಲಿಗಲ್ಲು. ಇಲ್ಲಿ ಆರಂಭದಿಂದಲೇ ನಾನು ಮಾನಸಿಕವಾಗಿ ಸುಸ್ತಾಗಿದ್ದೆ" ಎಂದು ಸ್ಟೀವ್ ಸ್ಮಿತ್ ಹೇಳಿಕೆ ನೀಡಿದ್ದಾರೆ.

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆಶಸ್ ಸರನಿಯಲ್ಲಿ ಮೂರು ಪಂದ್ಯಗಳು ಈಗಾಗಲೇ ಮುಕ್ತಾಯವಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಅಮೋಘ ಗೆಲುವು ಸಾಧಿಸಿದ್ದು ಮೂರನೇ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಗೆಲುವು ಸಾಧಿಸಿತ್ತು. ಹೀಗಾಗಿ ಆಸ್ಟ್ರೇಲಿಯಾ ತಂಡ ಪ್ರಸ್ತುತ 2-1 ಅಂತರದಿಂದ ಮುನ್ನಡೆಯಲ್ಲಿದೆ. ಉಳಿದ ಎರಡು ಪಂದ್ಯಗಳ ಪೈಕಿ ಒಂದು ಗೆಲುವು ಸಾಧಿಸಿದರೆ ಈ ಸರಣಿ ಆಸ್ಟ್ರೇಲಿಯಾ ತಂಡದ ಪಾಲಾಗಲಿದೆ. ಅಲ್ಲದೆ ಬಹುತೇಕ ಎರಡು ದಶಕಗಳ ಬಳಿಕ ಆಸ್ಟ್ರೇಲಿಯಾ ತಂಡ ಇಂಗ್ಲೆಂಡಗ ನೆಲದಲ್ಲಿ ಆಶಸ್ ಗೆದ್ದಂತಾಗಲಿದೆ.

ಇಂಗ್ಲೆಂಡ್ ಸ್ಕ್ವಾಡ್: ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್ (ನಾಯಕ), ಬೆನ್ ಡಕೆಟ್, ಝಾಕ್ ಕ್ರಾಲಿ, ಹ್ಯಾರಿ ಬ್ರೂಕ್, ಜೋ ರೂಟ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್, ಆಲಿ ರಾಬಿನ್ಸನ್, ಡೇನಿಯಲ್ ಲಾರೆನ್ಸ್, ಜೋಶ್ ಟಂಗ್

ಆಸ್ಟ್ರೇಲಿಯಾ ಸ್ಕ್ವಾಡ್: ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್, ಜೋಶ್ ಹ್ಯಾಜಲ್ವುಡ್, ಮಾರ್ಕಸ್ ಹ್ಯಾರಿಸ್, ಮೈಕೆಲ್ ನೆಸರ್, ಜೋಶ್ ಇಂಗ್ಲಿಸ್ , ಕ್ಯಾಮರೂನ್ ಗ್ರೀನ್

Story first published: Tuesday, July 18, 2023, 17:44 [IST]
Other articles published on Jul 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+