For Quick Alerts
ALLOW NOTIFICATIONS  
For Daily Alerts
 

Ashes 2023: ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ ಈ ಸಾಧನೆ ಮಾಡಿದ ವಿಶ್ವದ 2ನೇ ಬ್ಯಾಟರ್ ಸ್ಟೀವನ್ ಸ್ಮಿತ್

ಬುಧವಾರ, ಜೂನ್ 28ರಂದು ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ಆಶಸ್ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಟೀ ವಿರಾಮದ ವೇಳೆಗೆ ಆಸ್ಟ್ರೇಲಿಯಾ ತಂಡ 50.2 ಓವರ್‌ಗಳಲ್ಲಿ 2 ವಿಕೆಟ್‌ಗೆ 194 ರನ್ ಗಳಿಸಿದೆ.

ಇದೇ ವೇಳೆ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 9000 ರನ್ ಗಳಿಸಿದ ವಿಶ್ವದ 2ನೇ ಆಟಗಾರ ಮತ್ತು ಆಸ್ಟ್ರೇಲಿಯಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Ashes 2023: Steven Smith Became Worlds 2nd Fastest Batsman To Score 9000 Runs In Test Cricket


ಸ್ಟೀವನ್ ಸ್ಮಿತ್ ತನ್ನ 99ನೇ ಟೆಸ್ಟ್‌ ಪಂದ್ಯದಲ್ಲಿ ಈ ಹೆಗ್ಗುರುತನ್ನು ನಿರ್ಮಿಸಲು 31 ರನ್‌ಗಳ ಅಗತ್ಯವಿತ್ತು. ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವಾಗ ಈ 9000 ಟೆಸ್ಟ್ ರನ್‌ಗಳ ಸಾಧನೆ ಮಾಡಿದರು.

ಸ್ಟೀವನ್ ಸ್ಮಿತ್ 9000 ಟೆಸ್ಟ್ ರನ್‌ಗಳ ಮೈಲಿಗಲ್ಲು ತಲುಪಲು 174 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರು. ಇದಕ್ಕೂ ಮುನ್ನ ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 9000 ರನ್ ಗಳಿಸಿದ ವಿಶ್ವದಾಖಲೆ ಹೊಂದಿರುವ ಶ್ರೀಲಂಕಾದ ಕುಮಾರ್ ಸಂಗಕ್ಕಾರ ಅವರಿಗಿಂತ 2 ಇನ್ನಿಂಗ್ಸ್ ಹೆಚ್ಚು ತೆಗೆದುಕೊಂಡಿದ್ದಾರೆ.

ಇದೇ ವೇಳೆ 9000 ಟೆಸ್ಟ್ ರನ್‌ ಗಳಿಸಲು 177 ಇನ್ನಿಂಗ್ಸ್‌ ತೆಗೆದುಕೊಂಡಿದ್ದ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ದಾಖಲೆಯನ್ನು ಸ್ಟೀವನ್ ಸ್ಮಿತ್ ಅಳಿಸಿ ಹಾಕಿದ್ದಾರೆ. ರಿಕಿ ಪಾಂಟಿಂಗ್ 2006ರಲ್ಲಿ ಇಂಗ್ಲೆಂಡ್ ವಿರುದ್ಧ ಬ್ರಿಸ್ಬೇನ್‌ನಲ್ಲಿ ಆಶಸ್ ಟೆಸ್ಟ್‌ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು.

ಇನ್ನು ಪಂದ್ಯಗಳ ಸಂಖ್ಯೆಯನ್ನು ತೆಗೆದುಕೊಂಡರೆ, ಸ್ಟೀವನ್ ಸ್ಮಿತ್ ಅವರು ವಿಶ್ವದ ಇತರರಿಗಿಂತ ವೇಗವಾಗಿ 9,000 ಟೆಸ್ಟ್ ರನ್‌ಗಳನ್ನು ಗಳಿಸಿದ್ದಾರೆ. 99 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಅಲ್ಲದೇ, 9,000 ಟೆಸ್ಟ್ ರನ್‌ ಗಳಿಸಿದ ವಿಶ್ವದ 17 ಆಟಗಾರ ಎನಿಸಿಕೊಂಡರು.

ವೆಸ್ಟ್ ಇಂಡೀಸ್ ಲೆಜೆಂಡ್ ಬ್ರಿಯಾನ್ ಲಾರಾ ಅವರು ತಮ್ಮ 101ನೇ ಟೆಸ್ಟ್ ಪಂದ್ಯದಲ್ಲಿ 9,000 ಟೆಸ್ಟ್ ರನ್ ಗಳಿಸಿದ್ದರು. ಆದರೂ, ಶ್ರೀಲಂಕಾದ ಶ್ರೇಷ್ಠ ಕ್ರಿಕೆಟಿಗ ಕುಮಾರ್ ಸಂಗಕ್ಕಾರ ಅವರ ನಂತರ ಸ್ಟೀವನ್ ಸ್ಮಿತ್ ಇನ್ನಿಂಗ್ಸ್‌ನ ವಿಷಯದಲ್ಲಿ ಎರಡನೇ ಅತ್ಯುತ್ತಮ ಆಟಗಾರರಾಗಿದ್ದಾರೆ.

ಅತ್ಯಂತ ವೇಗವಾಗಿ 9,000 ಟೆಸ್ಟ್ ರನ್‌ ಗಳಿಸಿದವರು (ಇನ್ನಿಂಗ್ಸ್ ಲೆಕ್ಕದಲ್ಲಿ)

* ಕುಮಾರ್ ಸಂಗಕ್ಕಾರ (ಶ್ರೀಲಂಕಾ) - 2011ರಲ್ಲಿ - 172 ಇನ್ನಿಂಗ್ಸ್
* ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ) - 2023ರಲ್ಲಿ - 174 ಇನ್ನಿಂಗ್ಸ್
* ರಾಹುಲ್ ದ್ರಾವಿಡ್ (ಭಾರತ) - 2006ರಲ್ಲಿ - 176 ಇನ್ನಿಂಗ್ಸ್
* ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್) - 2004ರಲ್ಲಿ - 177 ಇನ್ನಿಂಗ್ಸ್
* ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 2006ರಲ್ಲಿ - 177 ಇನ್ನಿಂಗ್ಸ್

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ 99 ಟೆಸ್ಟ್ ಪಂದ್ಯಗಳ 174 ಇನ್ನಿಂಗ್ಸ್‌ಗಳಲ್ಲಿ 56.61ರ ಸರಾಸರಿಯಲ್ಲಿ 37 ಅರ್ಧ ಶತಕ ಮತ್ತು 31 ಶತಕ ಬಾರಿಸಿದ್ದಾರೆ. ಸ್ಟೀವನ್ ಸ್ಮಿತ್ ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯದಲ್ಲಿ 81 ಎಸೆತಗಳಲ್ಲಿ 43 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಇದಕ್ಕೂ ಮೊದಲು ಸ್ಟುವರ್ಟ್ ಬ್ರಾಡ್ ಅವರ ಅದ್ಭುತ ಔಟ್‌ಸ್ವಿಂಗರ್ ಬೌಲಿಂಗ್‌ನಲ್ಲಿ ಸ್ಟೀವನ್ ಸ್ಮಿತ್ ಅವರು ಇನ್ನಿಂಗ್ಸ್‌ನ ಆರಂಭದಲ್ಲಿಯೇ ಔಟಾಗಿದ್ದರು. ಆದರೆ, ಅಂಪೈರ್ ತೀರ್ಪಿನ ವಿರುದ್ಧ ರಿವ್ಯೂ ತೆಗೆದುಕೊಂಡರು. ಚೆಂಡು ಬಾಟ್‌ನಿಂದ ಅಂತರ ಕಾಯ್ದುಕೊಂಡಿದ್ದ ಕಾರಣ ಆನ್-ಫೀಲ್ಡ್ ಅಂಪೈರ್ ತಮ್ಮ ಔಟ್ ನಿರ್ಧಾರವನ್ನು ರದ್ದುಗೊಳಿಸಿದರು.

ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ಆರಂಭಿಸಿದ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದ ಶತಕವೀರ ಉಸ್ಮಾನ್ ಖವಾಜಾ ಅವರನ್ನು ಜೋಶ್ ಟಂಗ್ ಔಟ್ ಮಾಡಿದರು. ನಂತರ 14 ರನ್‌ ಸೇರಿಸುವಷ್ಟರಲ್ಲಿ ಡೇವಿಡ್ ವಾರ್ನರ್ ಅವರ ವಿಕೆಟ್ ಸಹ ಪಡೆದರು.

ಕೆಲವು ಪ್ರತಿಭಟನಕಾರರು ಮೈದಾನದಲ್ಲಿ ದಾಂಧಲೆ ನಡೆಸಿದ ಕಾರಣ 2ನೇ ಟೆಸ್ಟ್ ಪಂದ್ಯವು ಅಡಚಣೆಯೊಂದಿಗೆ ಪ್ರಾರಂಭವಾಯಿತು. ಪ್ರತಿಭಟನಾಕಾರರಲ್ಲಿ ಒಬ್ಬರನ್ನು ಇಂಗ್ಲೆಂಡ್ ವಿಕೆಟ್‌ ಕೀಪರ್ ಜಾನಿ ಬೈರ್‌ಸ್ಟೋವ್ ಹೊತ್ತೊಯ್ದು, ಪಿಚ್‌ನ ಆಚೆಗೆ ಬಿಟ್ಟರು.

Story first published: Wednesday, June 28, 2023, 21:53 [IST]
Other articles published on Jun 28, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+