Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ashes 2023: ಸ್ಟೀವನ್ ಸ್ಮಿತ್ ರನೌಟ್ or ನಾಟೌಟ್?; ಆಶಸ್ ಸರಣಿಯಲ್ಲಿ ಮತ್ತೊಂದು ವಿವಾದ

ಶುಕ್ರವಾರ, ಜುಲೈ 28ರಂದು ಓವಲ್‌ನಲ್ಲಿ ನಡೆಯುತ್ತಿರುವ 2023ರ ಆಶಸ್ ಟೆಸ್ಟ್ ಸರಣಿಯ ಐದನೇ ಪಂದ್ಯದ 2ನೇ ದಿನದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಪ್ರವಾಸಿ ಆಸ್ಟ್ರೇಲಿಯಾ ತಂಡವನ್ನು 295 ರನ್‌ಗಳಿಗೆ ಆಲೌಟ್ ಮಾಡಿತು.

ಐದನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡದ 283 ರನ್‌ಗಳಿಗೆ ಪ್ರತ್ಯುತ್ತರವಾಗಿ, ಎರಡನೇ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯಾ 295 ರನ್ ಗಳಿಸುವ ಮೂಲಕ 12 ರನ್‌ಗಳ ಮುನ್ನಡೆ ಕಾಯ್ದುಕೊಂಡಿತು.

Ashes 2023: Steven Smith Runout or Not Out?; Another Controversy In The Ashes Test Series


ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 3 ವಿಕೆಟ್ ಪಡೆದರೆ, ಸ್ಟುವರ್ಟ್ ಬ್ರಾಡ್, ಜೋ ರೂಟ್ ಮತ್ತು ಮಾರ್ಕ್ ವುಡ್ ತಲಾ 2 ವಿಕೆಟ್‌ಗಳನ್ನು ಪಡೆದು ಮಿಂಚಿದರು.

ಇದೇ ವೇಳೆ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಅವರನ್ನು ಇಂಗ್ಲೆಂಡ್ ವಿಕೆಟ್ ಕೀಪರ್ ಜಾನಿ ಬೈರ್‌ಸ್ಟೋವ್ ಅವರು ವಿಲಕ್ಷಣ ರನೌಟ್‌ನಲ್ಲಿ ಸಿಲುಕಿಸಿದ ನಂತರ ವಿವಾದಕ್ಕೆ ಕಾರಣವಾಗಿದೆ.

2ನೇ ದಿನದ 78ನೇ ಓವರ್‌ನಲ್ಲಿ ಕ್ರಿಸ್ ವೋಕ್ಸ್ ಎಸೆತದಲ್ಲಿ ಸ್ಟೀವನ್ ಸ್ಮಿತ್ ಚೆಂಡು ಎದುರಿಸಿ ಎರಡು ರನ್ ಗಳಿಸಲು ಪ್ರಯತ್ನಪಟ್ಟರು. ಎರಡನೇ ರನ್‌ಗೆ ಹಿಂತಿರುಗುವಾಗ, ಬದಲಿ ಫೀಲ್ಡರ್ ಜಾರ್ಜ್ ಎಲ್ಹಾಮ್ ಚೆಂಡನ್ನು ಹಿಡಿದು ವಿಕೆಟ್ ಕೀಪರ್ ಜಾನಿ ಬೈರ್‌ಸ್ಟೋವ್ ಕಡೆಗೆ ಎಸೆದರು. ಬೈರ್‌ಸ್ಟೋವ್ ಯಾವುದೇ ಸಮಯ ವ್ಯರ್ಥ ಮಾಡದೆ ಬೇಲ್ಸ್‌ಗಳನ್ನು ಹಾರಿಸಿದರು.

ಸ್ಟೀವನ್ ಸ್ಮಿತ್ ಗೆರೆ ತಲುಪಲು ಅತ್ಯುತ್ತಮ ಡೈವ್ ಮಾಡಿದರು. ಈ ವೇಳೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲು ಮೂರನೇ ಅಂಪೈರ್‌ಗೆ ಮನವಿ ಮಾಡಲಾಯಿತು. ಮೊದಲ ಪರಿಶೀಲನೆ ವೇಳೆ ಸ್ಟೀವನ್ ಸ್ಮಿತ್ ಕ್ರೀಸ್‌ನಿಂದ ಹೊರಗಿರುವಾಗ ಜಾನಿ ಬೈರ್‌ಸ್ಟೋವ್ ಸ್ಟಂಪ್ ಹಾರಿಸಿದರು ಎಂದು ತೋರಿಸಲಾಯಿತು.

ಆಗ ಇಂಗ್ಲೆಂಡ್ ತಂಡವು ಸಂಭ್ರಮಾಚರಣೆ ಆರಂಭಿಸಿದರು ಮತ್ತು ಸ್ಟೀವನ್ ಸ್ಮಿತ್ ಪೆವಿಲಿಯನ್‌ಗೆ ಮರಳುತ್ತಿದ್ದರು. ಆದರೆ, ದೊಡ್ಡ ಪರದೆಯ ಮೇಲೆ ವಿವಿಧ ಕೋನಗಳಿಂದ ಪರಿಶೀಲಿಸಿದಾಗ ನಿಂತರು. ಆಗ ನಾಟೌಟ್ ಎಂದು ತೋರಿಸಿದರು. ಮೈದಾನದಲ್ಲಿ ನೆರೆದಿದ್ದ ಅಭಿಮಾನಿಗಳು ಮತ್ತು ಕಾಮೆಂಟೇಟರ್‌ಗಳು ಈ ನಿರ್ಧಾರವನ್ನು ಕಂಡು ಅಚ್ಚರಿಗೊಳಗಾದರು.

ಪಂದ್ಯದ ಕುರಿತು ಮಾತನಾಡುವುದಾದರೆ, ಓವಲ್‌ನಲ್ಲಿ ಶುಕ್ರವಾರ ನಡೆದ ಐದನೇ ಮತ್ತು ಅಂತಿಮ ಆಶಸ್ ಟೆಸ್ಟ್‌ ಪಂದ್ಯದಲ್ಲಿ ಸ್ಟೀವನ್ ಸ್ಮಿತ್ ಅವರ 71 ರನ್‌ಗಳ ಸಹಾಯದಿಂದ ಆಸ್ಟ್ರೇಲಿಯಾ ತಂಡ 12 ರನ್‌ಗಳ ಅಲ್ಪ ಮುನ್ನಡೆ ಗಳಿಸಿತು.

ಅಂತಿಮವಾಗಿ ಮೊದಲ ಇನ್ನಿಂಗ್ಸ್‌ನ ಎರಡನೇ ದಿನದ ಕೊನೆಯ ಎಸೆತದಲ್ಲಿ ಆಸ್ಟ್ರೇಲಿಯಾ 295 ರನ್‌ಗಳಿಗೆ ಆಲೌಟ್ ಆಯಿತು, ಇಂಗ್ಲೆಂಡ್‌ನ 283 ರನ್‌ಗಳಿಗಿಂತ 12 ರನ್‌ ಹೆಚ್ಚಿಗೆ ಕಲೆಹಾಕಿದರು.

ಅನುಭವಿ ವೇಗಿ ಸ್ಟುವರ್ಟ್ ಬ್ರಾಡ್ ಪ್ರವಾಸಿ ತಂಡಕ್ಕೆ ಅಘಾತ ನೀಡಿದ್ದರಿಂದ ಇಂಗ್ಲೆಂಡ್ ಗಮನಾರ್ಹ ಲಾಭವನ್ನು ಪಡೆಯಿತು. ಏಕೆಂದರೆ, ಆಸ್ಟ್ರೇಲಿಯಾ 2 ವಿಕೆಟ್‌ಗೆ 115 ರನ್‌ ಗಳಿಸಿದ್ದ ಆಸ್ಟ್ರೇಲಿಯಾ ನಂತರ 7 ವಿಕೆಟ್‌ಗೆ 185 ರನ್‌ಗಳಿಗೆ ಕುಸಿಯಿತು.

Story first published: Saturday, July 29, 2023, 14:19 [IST]
Other articles published on Jul 29, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+