Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Steven Smith: ಆಶಸ್ ಸರಣಿಯ 3ನೇ ಪಂದ್ಯದಲ್ಲಿ ದೊಡ್ಡ ಮೈಲಿಗಲ್ಲು ಸಾಧಿಸಲಿದ್ದಾರೆ ಸ್ಟೀವನ್ ಸ್ಮಿತ್

ಬರ್ಮಿಂಗ್‌ಹ್ಯಾಮ್ ಮತ್ತು ಲಾರ್ಡ್ಸ್‌ನಲ್ಲಿ ನಡೆದ 2023ರ ಆಶಸ್ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡವು ಆತಿಥೇಯ ಇಂಗ್ಲೆಂಡ್ ತಂಡವನ್ನು ಸೋಲಿಸಿ, ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಇನ್ನು ಹೆಡಿಂಗ್ಲಿಯಲ್ಲಿ ನಡೆಯುವ ಆಶಸ್ ಸರಣಿಯ ಮೂರನೇ ಪಂದ್ಯವು ಆಸ್ಟ್ರೇಲಿಯಾ ತಂಡದ ಸ್ಟಾರ್ ಬ್ಯಾಟರ್ ಸ್ಟೀವನ್ ಸ್ಮಿತ್‌ಗೆ 100ನೇ ಟೆಸ್ಟ್ ಪಂದ್ಯವಾಗಿರಲಿದೆ. ಇದೇ ವೇಳೆ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟು ಆಶಸ್ ಟೆಸ್ಟ್ ಸರಣಿಯನ್ನು ಗೆಲ್ಲುವ ಗುರಿ ಹೊಂದಿದ್ದಾರೆ.

ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟೀವನ್ ಸ್ಮಿತ್ 110 ರನ್ ಗಳಿಸಿದ್ದರು. ಇದು ಅವರ ಟೆಸ್ಟ್ ವೃತ್ತಿಜೀವನದ 32ನೇ ಶತಕವಾಗಿದೆ. 2010ರಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್ ಶತಕ ಬಾರಿಸಿದ್ದರು.

Steven Smith Will Achieve A Big Milestone

34 ವರ್ಷದ ಸ್ಟೀವನ್ ಸ್ಮಿತ್ ತಮ್ಮ ಅದ್ಭುತ ಶತಕಕ್ಕಾಗಿ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾದರು ಮತ್ತು ಇದು ಸ್ಟೀವನ್ ಸ್ಮಿತ್ ಅವರ 12ನೇ ಆಶಸ್ ಶತಕವಾಗಿದೆ.

ಆಸ್ಟ್ರೇಲಿಯ ತಂಡಕ್ಕೆ ಪದಾರ್ಪಣೆ ಮಾಡಿದಾಗಿನಿಂದ ಸ್ಟಾರ್ ಬ್ಯಾಟರ್ ಸ್ಟೀವನ್ ಸ್ಮಿತ್ ಟೆಸ್ಟ್ ಕ್ರಿಕೆಟ್ ಸ್ವರೂಪದಲ್ಲಿ ದೊಡ್ಡ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಆದರೆ, ಇದುವರೆಗೂ ಅವರಿಗೆ ಇಂಗ್ಲೆಂಡ್‌ನಲ್ಲಿ ಆಶಸ್ ಗೆಲುವು ದಕ್ಕಿಲ್ಲ.

ಇಂಗ್ಲೆಂಡ್ ವಿರುದ್ಧ 2019ರಲ್ಲಿ ಸ್ಟೀವನ್ ಸ್ಮಿತ್ ಆಡಿದ ಏಳು ಇನ್ನಿಂಗ್ಸ್‌ಗಳಲ್ಲಿ 774 ರನ್ ಗಳಿಸುವ ಮೂಲಕ ಆಶಸ್ ಸರಣಿಯು 2-2 ಅಂತರದಲ್ಲಿ ಸಮಬಲಗೊಂಡಿತ್ತು.

ಈ ಬಾರಿ ಆಸ್ಟ್ರೇಲಿಯಾ ತಂಡವು ಆಶಸ್ ಸರಣಿಯನ್ನು ಗೆಲ್ಲಲು ಕೇವಲ ಒಂದು ಗೆಲುವಿನ ಅಂತರದಲ್ಲಿದೆ. ಸ್ಟೀವನ್ ಸ್ಮಿತ್ ಹೆಡಿಂಗ್ಲಿಯಲ್ಲಿ ತನ್ನ ವೃತ್ತಿಜೀವನದಲ್ಲಿ ಇಂಗ್ಲೆಂಡ್‌ನಲ್ಲಿ ಆಶಸ್ ಗೆಲುವನ್ನು ಗೆಲುವನ್ನು ಪಡೆಯಲು ಉತ್ಸುಕನಾಗಿದ್ದಾನೆ.

ಕ್ರಿಕ್‌ಇನ್‌ಫೋ ಉಲ್ಲೇಖಿಸಿದ ಪ್ರಕಾರ, ಸ್ಟೀವನ್ ಸ್ಮಿತ್ ಅವರು ತಮ್ಮ 100ನೇ ಟೆಸ್ಟ್‌ ಪಂದ್ಯದಲ್ಲಿ ಗೆಲುವು ಪಡೆಯುವುದು ಖಚಿತ ಎಂದು ತಿಳಿಸಿದ್ದಾರೆ.

"ನಾನು ಬಹಳ ಸಮಯದಿಂದ ಹೇಳುತ್ತಿದ್ದೇನೆ, ಇಂಗ್ಲೆಂಡ್‌ನಲ್ಲಿ ಆಶಸ್ ಸರಣಿಯನ್ನು ಗೆಲ್ಲುವುದು ನನ್ನ ಹಿಟ್ ಲಿಸ್ಟ್‌ನಲ್ಲಿದೆ. ನನ್ನ 100ನೇ ಟೆಸ್ಟ್ ಪಂದ್ಯದಲ್ಲಿ ನಾವು ಗೆಲುವು ಪಡೆಯಲು ಸಾಧ್ಯವಾದರೆ, ಅದು ನನಗೆ ಖಂಡಿತವಾಗಿಯೂ ವಿಶೇಷವಾಗಿರುತ್ತದೆ," ಎಂದು ಸ್ಟೀವನ್ ಸ್ಮಿತ್ ಹೇಳಿದರು.

ಸ್ಟೀವನ್ ಸ್ಮಿತ್ ಅವರು ಆಶಸ್ ಸರಣಿಯನ್ನು ಮೂರನೇ ಪಂದ್ಯದ ಮೂಲಕ ತೆಗೆದುಕೊಳ್ಳುವುದಾಗಿಯೂ, ಮತ್ತು ಆಟವನ್ನು ಆನಂದಿಸುತ್ತೇನೆ. ತಂಡದ ಗೆಲುವಿಗೆ ನಾನೂ ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ.

"ನಾನು ಆ ಪಂದ್ಯವನ್ನು ಆನಂದಿಸುತ್ತೇನೆ ಮತ್ತು ನನ್ನಲ್ಲಿ ನಾನು ಸುಧಾರಣೆ ಕಾಣಬಯಸುತ್ತೇನೆ. ತಂಡಕ್ಕೆ ಕೊಡುಗೆ ನೀಡಲು ಮತ್ತು ತಂಡಕ್ಕೆ ಸಹಾಯ ಮಾಡುವ ಬಗ್ಗೆ ಉತ್ತಮ ಭಾವನೆ ಹೊಂದಿದ್ದೇನೆ," ಎಂದು ಸ್ಟೀವನ್ ಸ್ಮಿತ್ ತಿಳಿಸಿದರು.

ಸ್ಟೀವನ್ ಸ್ಮಿತ್ 2023ರ ಆಶಸ್ ಟೆಸ್ಟ್ ಸರಣಿಯಲ್ಲಿ ಆಡಿದ 2 ಪಂದ್ಯಗಳ 4 ಇನ್ನಿಂಗ್ಸ್‌ಗಳಿಂದ 41.50ರ ಸರಾಸರಿಯಲ್ಲಿ 166 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಸೇರಿದೆ.

Story first published: Tuesday, July 4, 2023, 19:32 [IST]
Other articles published on Jul 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+