Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ashes 2023: ವಿಚಿತ್ರವಾಗಿ ಔಟ್ ಆದ ಹ್ಯಾರಿ ಬ್ರೂಕ್; ಆಸೀಸ್ ಆಟಗಾರರೇ ಅಚ್ಚರಿ!

ಬಹು ನಿರೀಕ್ಷಿತ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ 2023ರ ಆಶಸ್ ಟೆಸ್ಟ್ ಸರಣಿ ಜೂನ್ 16ರಂದು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಆರಂಭವಾಗಿದೆ.

ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಝಾಕ್ ಕ್ರಾಲಿ ಅವರು ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ ವಿರುದ್ಧ ಪಂದ್ಯದ ಮೊದಲ ಎಸೆತದಲ್ಲಿಯೇ ಬೌಂಡರಿ ಗಳಿಸುವ ಮೂಲಕ ಆಸ್ಟ್ರೇಲಿಯಾ ತಂಡವನ್ನು ತಮ್ಮ "ಬಜ್‌ಬಾಲ್' ಆಟದ ಶೈಲಿಗೆ ಸ್ವಾಗತಿಸಿದರು.

Ashes 2023: Unlucky Harry Brook Is Out In A Strange Manner; Australia Players Are Surprised

ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕದ ಬ್ಯಾಟರ್ ಹ್ಯಾರಿ ಬ್ರೂಕ್ ಅವರು ಮೊದಲ ಇನ್ನಿಂಗ್ಸ್‌ನಲ್ಲಿ ವಿಚಿತ್ರವಾಗಿ ಔಟಾಗಿದ್ದು ಮಾತ್ರ ದುರದೃಷ್ಟಕರ.

ಹ್ಯಾರಿ ಬ್ರೂಕ್ ವಿಚಿತ್ರ ಶೈಲಿಯಲ್ಲಿ ಔಟಾಗಿ ಹೊರಬಂದಿದ್ದು ವೀಕ್ಷಕ ವಿವರಣೆ ಮಾಡುತ್ತಿದ್ದ ಕಾಮೆಂಟೇಟರ್‌ಗಳನ್ನು ಸಹ ಆಶ್ಚರ್ಯಗೊಳಿಸಿತು. ಆಸ್ಟ್ರೇಲಿಯದ ಮಾಜಿ ಶ್ರೇಷ್ಠ ಆಟಗಾರ ಮತ್ತು ಕಾಮೆಂಟೇಟರ್ ರಿಕಿ ಪಾಂಟಿಂಗ್, ನಾನು ಈ ರೀತಿಯ ಔಟಾಗಿದ್ದನ್ನು ಹಿಂದೆಂದೂ ನೋಡಿಲ್ಲ ಎಂದು ಹೇಳಿದರು.

ಹ್ಯಾರಿ ಬ್ರೂಕ್ ಅವರು ನಾಥನ್ ಲಿಯಾನ್ ಅವರ ಎಸೆತವನ್ನು ಕಳಪೆ ರೀತಿಯಲ್ಲಿ ಆಡುವ ಮೊದಲು ಕ್ರೀಸ್‌ನಲ್ಲಿ ಉತ್ತಮವಾಗಿ ಅಡುತ್ತಿದ್ದರು. ಭೋಜನ ವಿರಾಮದ ನಂತರ 38ನೇ ಓವರ್‌ನ ಎರಡನೇ ಎಸೆತ ಎಸೆದ ನಾಥನ್ ಲಿಯಾನ್ ಲೆಗ್ ಸ್ಟಂಪ್ ಲೈನ್‌ನಲ್ಲಿ ಪಿಚ್ ಮಾಡಿದರು.

ಹೆಚ್ಚುವರಿ ಬೌನ್ಸ್ ಪಡೆದ ಚೆಂಡು ಹ್ಯಾರಿ ಬ್ರೂಕ್ ತೊಡೆ ಬಡಿದು ಮೇಲೆ ಚಿಮ್ಮಿತು. ಆಗ ಆಸ್ಟ್ರೇಲಿಯಾ ವಿಕೆಟ್‌ಕೀಪರ್ ಅಲೆಕ್ಸ್ ಕ್ಯಾರಿ, ಬ್ಯಾಟರ್ ಹ್ಯಾರಿ ಬ್ರೂಕ್ ಮತ್ತು ಸುತ್ತಲಿನ ಫೀಲ್ಡರ್‌ಗಳು ಚೆಂಡು ಎಲ್ಲಿಗೆ ಹೋಯಿತು ಎಂದು ಹುಡುಕಾಡಿದರು.

ಚೆಂಡು ಕೆಳಗೆ ಬಂದು ಹ್ಯಾರಿ ಬ್ರೂಕ್ ಬೆನ್ನಿಗೆ ಸವರಿ ಸ್ಟಂಪ್‌ಗೆ ಬಡಿದು, ಅಂತಿಮವಾಗಿ ಬೆಲ್ಸ್ ಹಾರಿಸಿತು. ನಿರಾಶೆಯ ಮುಖ ಹೊತ್ತ ಹ್ಯಾರಿ ಬ್ರೂಕ್ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಿದರು. ಈ ವೇಳೆ ಆಶ್ಚರ್ಯಗೊಂಡಿದ್ದ ಆಸ್ಟ್ರೇಲಿಯಾ ಆಟಗಾರರು ಸಂಭ್ರಮಾಚರಣೆ ಮಾಡಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಆರಂಭಿಕರಾದ ಬೆನ್ ಡಕೆಟ್ ಮತ್ತು ಝಾಕ್ ಕ್ರಾಲಿ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಆರಂಭಿಸಿದರು. ಒಂದು ವರ್ಷಕ್ಕೂ ಹೆಚ್ಚು ಕಾಲ ಇಂಗ್ಲೆಂಡ್ ಆಡುತ್ತಿರುವ 'ಬಜ್‌ಬಾಲ್' ಕ್ರಿಕೆಟ್ ಶೈಲಿಯನ್ನು ಮುಂದುವರೆಸಿದರು.

Ashes 2023: Unlucky Harry Brook Is Out In A Strange Manner; Australia Players Are Surprised

12 ರನ್ ಗಳಿಸಿ ಆಡುತ್ತಿದ್ದ ಬೆನ್ ಡಕೆಟ್ ಮೊದಲ ವಿಕೆಟ್ ರೂಪದಲ್ಲಿ ಹೊರನಡೆದರು. ಝಾಕ್ ಕ್ರಾಲಿ ಬಿಗ್ ಶಾಟ್ ಆಡುವುದನ್ನು ಮುಂದುವರೆಸಿದರು ಮತ್ತು ವೇಗವಾಗಿ ಅರ್ಧಶತಕ ಬಾರಿಸಿದರು.

ನಂತರ ಒಲ್ಲಿ ಪೋಪ್ ನಿಧಾನಗತಿ ಬ್ಯಾಟಿಂಗ್ ಮೊರೆ ಹೋದರು. ಝಾಕ್ ಕ್ರಾಲಿ ಮತ್ತು ಬೆನ್ ಸ್ಟೋಕ್ಸ್ ತ್ವರಿತವಾಗಿ ಔಟಾಗುವುದರೊಂದಿಗೆ ಇಂಗ್ಲೆಂಡ್ ಸಂಕಷ್ಟ ಪರಿಸ್ಥಿತಿ ಎದುರಿಸಬೇಕಾಗಿ ಬಂತು. ನಂತರ ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಸ್ಥಿರತೆ ಒದಗಿಸಿದರು ಮಾತ್ರವಲ್ಲದೆ, ವೇಗಾವಗಿ ರನ್ ಗಳಿಸಲು ಉತ್ತಮ ಜೊತೆಯಾಟ ನೀಡಿದರು.

32 ರನ್ ಗಳಿಸಿ ಹ್ಯಾರಿ ಬ್ರೂಕ್ ನಿರ್ಗಮಿಸಿದ ನಂತರ, ಜಾನಿ ಬೈರ್‌ಸ್ಟೋವ್ ಮತ್ತು ಜೋ ರೂಟ್‌ ಜೋಡಿ ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಜೊತೆಯಾಟ ನೀಡಿದರು. ಜಾನಿ ಬೈರ್‌ಸ್ಟೋವ್ 78 ಎಸೆತಗಳಲ್ಲಿ 78 ರನ್ ಗಳಿಸಿದರು.

ಸದ್ಯ ಆತಿಥೇಯ ಇಂಗ್ಲೆಂಡ್ ತಂಡ 69 ಓವರ್‌ಗಳಲ್ಲಿ 341 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡಿದೆ. ಜೋ ರೂಟ್ 91 ರನ್ ಮತ್ತು ಸ್ಟುವರ್ಟ್ ಬ್ರಾಡ್ 10 ರನ್ ಗಳಿಸಿ ಆಡುತ್ತಿದ್ದಾರೆ. ಪ್ರವಾಸಿ ತಂಡದ ಪರ ಜೋಶ್ ಹೇಜಲ್‌ವುಡ್‌ 2 ವಿಕೆಟ್, ನಾಥನ್ ಲಿಯಾನ್ 4 ವಿಕೆಟ್ ಮತ್ತು ಸ್ಕಾಟ್ ಬೋಲ್ಯಾಂಡ್ ಒಂದು ವಿಕೆಟ್ ಪಡೆದಿದ್ದಾರೆ.

Story first published: Friday, June 16, 2023, 22:15 [IST]
Other articles published on Jun 16, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+