For Quick Alerts
ALLOW NOTIFICATIONS  
For Daily Alerts
 

The Ashes: 4ನೇ ಟೆಸ್ಟ್‌ ಮೊದಲ ದಿನ ಬಿತ್ತು 20 ವಿಕೆಟ್‌

ಮೆಲ್ಬೋರ್ನ್‌: ಆಷಸ್‌ ಟೆಸ್ಟ್‌ ಸರಣಿಯ ನಾಲ್ಕನೇ ಟೆಸ್ಟ್‌ ಪಂದ್ಯ ಶುಕ್ರವಾರ ಆರಂಭವಾಯಿತು. ಈ ಪಂದ್ಯದ ಮೊದಲ ದಿನ ಉಭಯ ತಂಡಗಳ ಪರ ಬೌಲರ್‌ಗಳು ಮೆರೆದಾಟ ನಡೆಸಿದರು. ಇಂಗ್ಲೆಂಡ್ ಪರ ಜೋಶ್‌ ಟಂಗ್‌ 5 ವಿಕೆಟ್‌ ಪಡೆದು ಬೀಗಿದರೆ, ಆಸೀಸ್‌ ಪರ ಮೈಕೆಲ್ ನೆಸರ್ 4 ವಿಕೆಟ್‌ ಪಡೆದು ಅಬ್ಬರಿಸಿದರು.

ನಾಲ್ಕನೇ ಟೆಸ್ಟ್‌ನಲ್ಲಿ ಟಾಸ್‌ ಗೆದ್ದ ಇಂಗ್ಲೆಂಡ್‌ ಮೊದಲು ಬೌಲಿಂಗ್ ಮಾಡಲು ಮುಂದಾಯಿತು. ಆಸ್ಟ್ರೇಲಿಯಾ ತಂಡದ ಸ್ಟಾರ್ ಆಟಗಾರರು ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಆರಂಭಿಕ ಟ್ರಾವಿಸ್‌ ಹೆಡ್‌ (12), ಜೇಕ್ ವೆದರಾಲ್ಡ್ (10), ಮಾರ್ನಸ್‌ ಲಬುಶೇನ್‌ (6), ಸ್ಟೀವನ್‌ ಸ್ಮಿತ್ (9) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಉಸ್ಮಾನ್‌ ಖವಾಜ್ (29), ವಿಕೆಟ್‌ ಕೀಪರ್‌ ಅಲೆಕ್ಸ್‌ ಕ್ಯಾರಿ (20), ಆಲ್‌ರೌಂಡರ್‌ ಕ್ಯಾಮರೂನ್‌ ಗ್ರೀನ್‌ (17), ಮೈಕೆಲ್ ನೆಸರ್ 7 ಬೌಂಡರಿ ನೆರವಿನಿಂದ 35 ರನ್‌ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು.

Ashes 4th Test 20 Wickets Fall on Day 1 as Bowlers Dominate in Melbourne

ಅಂತಿಮವಾಗಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 45.2 ಓವರ್‌ಗಳಲ್ಲಿ 152 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ತಂಡದ ಪರ ವೇಗಿ ಜೋಶ್‌ ಟಂಗ್‌ 45 ರನ್‌ ನೀಡಿ 5 ವಿಕೆಟ್‌ ಕಬಳಿಸಿದರು. ಇನ್ನೋರ್ವ ವೇಗಿ ಗಸ್ ಅಟ್ಕಿನ್ಸನ್ 2 ವಿಕೆಟ್‌ ಉರುಳಿಸಿದರು.

ಕಳಪೆ ಆರಂಭ

ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ಆರಂಭಿಸಿತು. ಈ ವೇಳೆ ಟಾಪ್‌ ಆರ್ಡರ್‌ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಆರಂಭಿಕರಾದ ಜಾಕ್‌ ಕ್ರಾಲಿ (5), ಬೆನ್‌ ಡಕೆಟ್‌ (2), ಜಾಕಬ್‌ ಬೆತೆಲ್‌ (1), ಭರವಸೆಯ ಬ್ಯಾಟರ್‌ ಜೋ ರೂಟ್‌ (0) ರನ್‌ ಬರವನ್ನು ಅನುಭವಿಸಿದರು. 16 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಹ್ಯಾರಿ ಬ್ರೂಕ್‌ ಹಾಗೂ ನಾಯಕ ಬೆನ್‌ ಸ್ಟೋಕ್ಸ್‌ ಕೊಂಚ ಆಧಾರವಾದರು. ಈ ಜೋಡಿ ಐದನೇ ವಿಕೆಟ್‌ಗೆ 40 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಹ್ಯಾರಿ ಬ್ರೂಕ್‌ 2 ಸಿಕ್ಸರ್‌, 2 ಬೌಂಡರಿ ಸಹಾಯದಿಂದ 41 ರನ್‌ ಬಾರಿಸಿ ಔಟ್ ಆದರು. ಬೆನ್‌ ಸ್ಟೋಕ್ಸ್‌ 16, ಗಸ್ ಅಟ್ಕಿನ್ಸನ್ 28 ರನ್‌ ಬಾರಿಸಿ ಔಟ್ ಆದರು. ಉಳಿದ ಆಟಗಾರರು ಒಂದಕ್ಕಿಯಲ್ಲಿ ಆಟ ಮುಗಿಸಿದರು. ಅಂತಿಮವಾಗಿ ಇಂಗ್ಲೆಂಡ್‌ 29.5 ಓವರ್‌ಗಳಲ್ಲಿ 110 ರನ್‌ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್‌ ಮೊದಲ ಇನಿಂಗ್ಸ್‌ನಲ್ಲಿ 42 ರನ್‌ ಹಿನ್ನಡೆ ಅನುಭವಿಸಿತು.

Ashes 4th Test 20 Wickets Fall on Day 1 as Bowlers Dominate in Melbourne

ಆಸ್ಟ್ರೇಲಿಯಾ ಪರ ಮೈಕೆಲ್ ನೆಸರ್ 4, ಸ್ಕಾಟ್‌ ಬೋಲೆಂಡ್‌ 3 ವಿಕೆಟ್‌ ಕಬಳಿಸಿದರು. ಎರಡನೇ ಇನಿಂಗ್ಸ್‌ ಆರಂಭಿಸಿದ ಆಸ್ಟ್ರೇಲಿಯಾ ವಿಕೆಟ್‌ ನಷ್ಟವಿಲ್ಲದೆ 4 ರನ್‌ ಸೇರಿಸಿದೆ. ಸ್ಕಾಟ್‌ ಬೋಲೆಂಡ್‌ ಹಾಗೂ ಟ್ರಾವಿಸ್‌ ಹೆಡ್‌ ಜೋಡಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಅಲ್ಲದೆ ಆಸೀಸ್‌ 46 ರನ್‌ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ.

Story first published: Friday, December 26, 2025, 12:59 [IST]
Other articles published on Dec 26, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+