ಆಷ್ಯಸ್: ಶತಕ ಕೈತಪ್ಪಿದ್ದರೂ ವಿಶ್ವದಾಖಲೆ ಬರೆದ ಕ್ರಿಸ್
ಕಾರ್ಡಿಫ್(ವೇಲ್ಸ್), ಜುಲೈ10: ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಆಷ್ಯಸ್ ಸರಣಿ ಆರಂಭಗೊಂಡ ಎರಡನೇ ದಿನಕ್ಕೆ ಕುತೂಹಲ ಘಟ್ಟ ತಲುಪಿದೆ. ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡುತ್ತಿವೆ. ಈ ನಡುವೆ ಶತಕ ವಂಚಿತನಾದರೂ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಕ್ರಿಸ್ ರೋಜರ್ಸ್ ವಿಶ್ವದಾಖಲೆ ಬರೆದಿದ್ದಾರೆ.
ಆಷ್ಯಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಆಸ್ಟ್ರೇಲಿಯಾ ಕ್ರಿಸ್ ರೋಜರ್ಸ್ 95 ರನ್ ಗಳಿಸಿ ವುಡ್ ಗೆ ಮೊದಲ ವಿಕೆಟ್ ಒಪ್ಪಿಸಿದರು.
ಆದರೆ, ಟೆಸ್ಟ್ ಕ್ರಿಕೆಟ್ ನಲ್ಲಿ ಸತತ 7 ಬಾರಿ 50 ಪ್ಲಸ್ ರನ್ ಗಳಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ಹಿಂದೆ ಕೂಡಾ ಅಣೇಕ ದಿಗ್ಗಜರು ಸತತ 50 ಪ್ಲಸ್ ರನ್ ಗಳಿಸಿದ್ದಾರೆ. ಆದರೆ, ಎಡಗೈ ಬ್ಯಾಟ್ಸ್ ಮನ್ ಆಗಿ ಆರಂಭಿಕ ಆಟಗಾರನಾಗಿ ಸತತ 7 ಟೆಸ್ಟ್ ಅರ್ಧಶತಕ ದಾಟಿದ ದಾಖಲೆ ರೋಜರ್ಸ್ ಹೆಸರಲ್ಲಿ ಮಾತ್ರ ಬರೆಯಲಾಗಿದೆ.
ದಾಖಲೆ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ನ ಎವರ್ಟನ್ ವೀಕೆಸ್, ಜಿಂಬಾಬ್ವೆಯ ಆಂಡಿ ಫ್ಲವರ್, ವೆಸ್ಟ್ ಇಂಡೀಸ್ ನ ಶಿವನಾರಾಯಣ್ ಚಂದ್ರಪಾಲ್, ಶ್ರೀಲಂಕಾದ ಕುಮಾರ ಸಂಗಕ್ಕಾರ ಇದ್ದಾರೆ. ಎವರ್ಟನ್ ಅವರು ಮೊದಲಿಗೆ ಈ ಸಾಧನೆ ಮಾಡಿದವರಾಗಿದ್ದಾರೆ. ಪಟ್ಟಿಯಲ್ಲಿರುವ ಐವರಲ್ಲಿ ನಾಲ್ವರು ಎಡಗೈ ಬ್ಯಾಟ್ಸ್ ಮನ್ ಗಳಿರುವುದು ವಿಶೇಷ.
ಗುರುವಾರ ಇಲ್ಲಿನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ಆಸ್ಟ್ರೇಲಿಯಾಕ್ಕೆ ರೋಜರ್ಸ್ ಉತ್ತಮ ಆರಂಭ ಒದಗಿಸಿದರು, ಅದರೆ, ನಿಯಮಿತವಾಗಿ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ ತಂಡ ದಿನದ ಅಂತ್ಯಕ್ಕೆ 70 ಓವರ್ ಗಳಲ್ಲಿ 264/5 ಸ್ಕೋರ್ ಮಾಡಿದೆ. ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 430 ಸ್ಕೋರಿಗೆ ಆಲೌಟ್ ಆಯಿತು, ಇಂಗ್ಲೆಂಡ್ ಪರ ಜೋ ರೂಟ್ 134ರನ್, ಸ್ಟೋಕ್ಸ್ 52 ಹಾಗೂ ಮೋಯಿನ್ ಅಲಿ 77ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications